ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೫೧೪ ಮ್ರುತ್ಯುಂಜಯ
“ಅಣ್ಣ!” “ಮೆನ್ನ!” –ಏಕಕಾಲದಲ್ಲೇ ಅಂದರು ಇಬ್ಬರೂ. ತಟ್ಟೆಯನ್ನು ಕೆಳಗಿರಿಸಿ ಮೆನ್ನ ಅಂದ: “ನನ್ನ ದೇವರಿಗೆ ನೈವೇದ್ಯ ಇಟ್ಟಿದ್ದೇನೆ.” ಆತ ಕತಲಲ್ಲಿ ತಡವುತ್ತ ಮೆನೆಪ್ಟಾನನ್ನು ಸಮೀಪಿಸಿದ. ಮೈ ಸೋಂಕಿ ದೊಡನೆ, ತನ್ನ ಎರಡೂ ಕೈಗಳ ಬೆರಳುಗಳಿಂದ ಮೆನೆಪ್ಟಾನ ಭುಜತೋಳುಗಳನ್ನು ಸವರಿದ. ಪುಲಕ-ಅವನಿಗೂ ಇವನಿಗೂ. “ಅಣ್ಣ, ಬಟಾ ಬಂದಿದ್ದಾನೆ. ಜತೇಲಿ ಆಬ್ಟು ಯಾತ್ರಿಕರಿದ್ದಾರೆ. ಅಹೂರಾ-ರಾಮೆರಿ....ಸಾಯಂಕಾಲ ಬಂದು ತಲಪಿದ್ರು. (ಧ್ವನಿ ತಗ್ಗಿಸಿ) ನಡುರಾತ್ರೆಗೆ ನಿಮ್ಮ ಬಿಡುಗಡೆಯಾಗ್ತದೆ.” ಮಾಧುರ್ಯ ಕಳೆದುಕೊಂಡಿದ್ದ ಮೆನೆಪ್ಟಾನ ಗಂಟಲಿನಿಂದ ಮಾತುಗಳು ಹೊರಟುವು : “ಬಿಡುಗಡೆ! ನನ್ನನ್ನು ಬಿಡುತಾರಾ ? ಯಾಕೆ ? ನಾಳೆ ವಿಚಾರಣೆ ಅಂತ ಸೆನೆಬ್ ಬಂದು ಹೇಳಿದನಲ್ಲ....ನನ್ನನ್ನು ಬಿಡಿಸೋ ಯೋಜನೆ ಬಟಾನದು —ನಿಮ್ಮದು, ಅಲ್ಲ ? ವಿಚಾರಣೆ ಮೆನ್ನನಿಗೆ ಹೊಸ ವಿಷಯ ಆದರು ಅವನೆಂದ: “ನೀರಾನೆ ಪ್ರಾಂತದಲ್ಲಿ ಕುಯಿಲಿನ ಹಬ್ಬಕ್ಕಾಗಿ ಜನ ನಿಮ್ಮ ದಾರಿ ನೋಡ್ತಿದ್ದಾರೆ. ನೀವು ಇವತ್ತೇ ಹೊರಡ್ಬೇಕು....” “ಇಷ್ಟು ದಿವಸ ಕಾದದಾಯ್ತು. ಸೆಡ್ ಉತ್ಸವವೂ ಮುಗೀತು. ನನಗೆ ತಡವಾಗಬಾರದು ಅಂತ ನಾಳೆಗೇ ವಿಚಾರಣೆ ಇಟ್ಟಿದ್ದಾರೆ.” "ವಿಚಾರಣೆ. ಇದೇನೋ ಮೋಸ ಅಣ್ಣ." “ಮೆನ್ನ. ನಮ್ಮೂರಿನ ರಾಜಗೃಹದ ಕಂಬಕ್ಕೆ ನನ್ನನ್ನು ಬಿಗಿದಾಗಲೇ ಸಾವು ಸನ್ನಿಹಿತವಾಗಿತ್ತು. ಆದರೆ ನಾನು ಸಾಯಲಿಲ್ಲ. ಅಮಾತ್ಯರಿಂದ ಆಮಂತ್ರಿತನಾಗಿ ರಾಜಧಾನಿಗೆ ಬಂದಿದ್ದೇನೆ. ಈಗ ಇದೊಂದು ವಿಚಾರಣೆಗೆ ಅಂಜಲೆ ?”