ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮ್ರುತ್ಯುಂಜಯ ೫೧೫
ತನಗೆ ಸೋಲಾಗುತ್ತಿದೆ ಎಂದು ಮೆನ್ನನಿಗೆ ಸಂಕಟ. ಆತ ಯಾಚಕ ನಾದ: “ಹೊರಗೆ ದೀಪೋತ್ಸವ ನಡೆದಿದೆ. ಇನ್ನು ತೆಪ್ಪೋತ್ಸವ. ಈ ಗದ್ದಲದಲ್ಲಿ ಇಲ್ಲಿಂದ ಪಾರಾಗೋದು ಸುಲಭ. ಇವತ್ತು ಇದು ಸಾಧ್ಯ ನಾಳೆ-” "ನಾಳೆ ವಿಚಾರಣೆ, ಮೆನ್ನ-ಋಜುಮಾರ್ಗಾವಲಂಬಿಗಳಾಗಿ ಮುಂದೆ ಸಾಗಿರುವ ನೀರಾನೆ ಪ್ರಾಂತದ ಪ್ರಜೆಗಳ ವಿಚಾರಣೆ. ನಾಯಕ ಎಂದು ಕರೆಸಿ ಕೊಂಡವನು ಇದಕ್ಕೆ ಹೆದರಲೆ ? ಸಿಂಹವಾಗಿ ಬಂದವನು ನರಿಯಾಗಿ ಓಡಿ ಹೋಗಲೆ? ಮಗ ರಾಮೆರಿಗೆ ಇದೇ ಏನು ಅವನ ತಂದೆ ಹಾಕಿಕೊಡುವ ಮೇಲ್ಪಂಕ್ತಿ ? ಕಂಬಕ್ಕೆ ಕಟ್ಟಿದ್ದ ನನ್ನನ್ನು ಅವತ್ತು ಬಿಡಿಸಿಕೊಂಡು ಹೋದರು ನನ್ನ ಜನ. ಅವರ ಪ್ರೀತಿಗಳಿಸಿ, ವಿಶಾಸ ಪಡೆದು, ನಾನು ನಾಯಕ ಎನಿಸಿಕೊಂಡಿದ್ದೇನೆ. ವಿಚಾರಣೆ ಇದಿರಿಸುವುದು ನನಗೆ ಕಷ್ಟವೆ? ನೀರಾನೆ ಪ್ರಾಂತದ ನ್ಯಾಯನಿಲುವನ್ನು ಅವರಿಗೆಲ್ಲ ಮಂದಟ್ಟು ಮಾಡಿ ಕೊಟ್ಟು, ಅವರೆಲ್ಲರ ಎದುರಲ್ಲೇ ಹೊರಟು ಬರ್ತೆನೆ. ನನ್ನ ಬಂಧುಗಳಿಗೆ ನೀವಿದನ್ನು ತಿಳಿಯಹೇಳ್ಬೇಕು.” “ಅಣ್ಣ, ಅಣ್ಣ....” "ಔಟ ಬೆಕ್ ರಿಗೆ ಪ್ರಸಾದ ಕೊಟ್ಟಿರಾ ಮೆನ್ನ?” ಕಸಾಯಿ ಮನೆಯ ಶೀಬಾ ಅವರನ್ನು ನೋಡೆಳ್ಕೊಳ್ತಿದ್ದಾ. "ಹ್ಞಾ.ಶೀಬಾ....ತಿಳೀತು...." "ಈ ನೈವೇದ್ಯದಲ್ಲಿ ಅವಳು ಕೊಟ್ಟಿರುವ ರೊಟ್ಟಿಯೂ ಇದೆ.” “ಆ ಮಹಾತಾಯಿಗೆ ನನ್ನ ಪ್ರಣಾಮ. ಮೆನ್ನ.... ನೀವು ಹೊರಡಿ. ಕಾವಲುಗಾರರಿಗೆ ಸಂದೇಹ ಬಂದೀತು." "ಹ್ಞ-ಹ್ಞ ....” ಮೆನ್ನ ಕಣ್ಣೊರಸಿಕೊಂಡು, ಸ್ತೋತ್ರ ಪಠನ ಆರಂಭಿಸುತ್ತ ಹೊರಕ್ಕೆ ಕಾಲಿರಿಸಿದ. “ಜಗದ್ರಕ್ಷಕ ಪ್ಟಾ ಸರ್ವಜನನ್ನ ಪೂಜಿತ ಪ್ಟಾ ...”