ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೫೧೬
ಮೃತ್ಯುಂಜಯ
ಬಾಗಿಲನ್ನು ಮೆನೆಪ್ ಟಾ ಮುಚ್ಚಿದ.
ಮಧ್ಯದ್ವಾರದ ಆಚೆಗೆ ನಿಂತಿದ್ದ ಕಾವಲುಗಾರ ಕೇಳಿದ:
“ಪ್ರಸಾದ ಕೋಟ್ಟರಾ, ಅಯ್ಯ ?"
“ಪಾಪಿ ದೇವರ ಪ್ರಸಾದ ಬೇಡ , ಅಂದ . ನಾನು ಬಿಡಲಿಲ್ಲ . ಬಲಾತ್ಕಾರ ವಾಗಿ ತುನ್ನಿಸಿದೆ . ಜಗದ್ರಕ್ಷಕ ಪ್ ಟಾ...”
......ಸ್ವಲ್ಪ ಆಚೆ ಕತ್ತಲ ಮರೆಯಲ್ಲಿ ಶೀಬಾ ಇದ್ದಳು.
"ಕಂಡಿರಾ?”
“ನೈವೇದ್ಯ ಅರ್ಪಿಸಿ ಬಂದೆ . ಮಹಾತಾಯಿಗೆ ನನ್ನ ಪ್ರಣಾಮ ಆಂದ್ರು,"
"ಯಾರು ಮಹಾತಾಯಿ? "
“ನೀನು . ಇವತ್ತು ನಿನ್ನ ಗಂಡನ ಸಹಾಯ ಬೇಕಾಗೋದಿಲ್ಲ . ನಾಳೆ ನಾಯಕರ ವಿಚಾರಣೆ.”
“ಓ.. ನಾಳೇನೂ ಪ್ರಸಾದ - ನೈವೇದ್ಯ - ಕೊಡ್ತೀರಾ ?”
“ಗೊತ್ತಿಲ್ಲ , ನನ್ನ ತಲೆ ಸಿಡೀತಿದೆ.”
ಅಷ್ಟು ಹೇಳಿ ಮೆನ್ನ ಹೊರಟುಬಿಟ್ಟ.
ತಲೆ ಜೋರಾಗಿ ಸಿಡಿಯುತ್ತಿತ್ತು , ಮಂದಿರಕ್ಕೆ ದೇವಸೇವಕರು ಮರಳಿ ದ್ದರು . ಅವರ ಕಣ್ಣಿಗೆ ಬೀಳದಂತೆ , ಮೆನ್ನ ತನ್ನ ಮೇಲುದವನ್ನೆತ್ತಿ ಕೋಂಡು , ಮತ್ತೆ ನದೀತಟದ ಪ್ರಾಕಾರ ದ್ವಾರಕ್ಕೆ ಬಂದ . ಅದನ್ನು ಅವನು ದಾಟಿ ದಂಡೆಯ ಕಡೆಗೆ ಹೋಗುತ್ತಿದ್ದಾಗ ಕಾವಲುಗಾರನೆಂದ:
“ಅಯ್ಯ , ನಿಮ್ಮ ಹಾಡು ಗೀಡು ಶುರು ಮಾಡ್ಬೇಡಿ ಇವತ್ತು" !
ಪದಗಳು ಸಾಲುಗಳಾದುವು ; ಮೌನವಾಗಿ ಹೊರಕ್ಕೆ ಧುಮುಕಿದುವು.
“ಯಾರೊಡನೆ ನಾ ಮಾತಾಡಲೀ..?
ಮೆನ್ನ ದಂಡೆಯುದ್ದಕ್ಕೂ ಸಾಗಿ , ಕಟ್ಟೆಯನ್ನು ಹಾದು , ಆಂಕು ಡೊಂಕು ದಾರಿಗಳನ್ನು ಹಿಡಿದು , ಬಟಾನ ದೋಣಿಯತ್ತ ನಡೆದ . ಅದರ ಪಕ್ಕ ದಲ್ಲಿ ಅಂಬಿಗರು ಕುಳಿತಿದ್ದರು . ಅವರ ಆಚೆಗೆ ಮತ್ತೂ ಹಲವು ದೋಣಿಗಳು ಬಂದು ತಂಗಿದ್ದುವು . ಬಲಗಡೆ ಸ್ವಲ್ಪ ದೂರದಲ್ಲಿ ಮರಳಿನ ಮೇಲೆ ಬಟಾನೂ ಐವರೂ ಕುಳಿತಿದ್ದರು . ಮೆನ್ನ ಸದು ಮಾಡದೆ ಆವರ ಬಳಿ ಸಾರಿ ತಾನೂ