ಪುಟ:Mrutyunjaya.pdf/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೨

ಮೃತ್ಯುಂಜಯ

ಅಬ್ಟು ಯಾತ್ರೆ ಮುಗಿಸಿ ಬಂದವರಲ್ಲಿ ಹೆಚ್ಚಿನವರು ಊರಿನವರೇ. ಉಳಿ
ದವರದು ಒಂದು ಹೊತ್ತಿನ ದಾರಿ. ಬೇರೆ ಬೇರೆ ದಿಕ್ಕುಗಳಲ್ಲಿ. (ಊರಿನ
ಜನಸಂಖ್ಯೆ ಹದಿನೈದು ಸಹಸ್ರ ಪ್ರಾಂತದ ಇನ್ನಿತರ ಭಾಗಗಳ ಒಟ್ಟು ಜನ
ಮತ್ತೆ ಹತ್ತು ಹದಿನೈದು ಸಹಸ್ರ.)
ಪ್ರಾಂತದ ಗ್ರಾಮಾಂತರ ಪ್ರದೇಶದ ಯಾತ್ರಿಕರಿಗೂ ಆ ರಾತ್ರಿ ಆ
ಊರಿನಲ್ಲಿಯೇ ವಸತಿ.
ಮೆನೆಪ್ಟಾ ನುಡಿದ :
" ಪವಿತ್ರ ಕ್ಷೇತ್ರದಲ್ಲಿ ಬೆಸೆದ ಬಾಂಧವ್ಯ ; ಒಸೈರಿಸನ ಲೋಕದಲ್ಲೂ
ಮುಂದುವರಿಯುವ ಸಂಬಂಧ. ನಮ್ಮ ಅತಿಥಿಗಳಾಗಿ ಒಂದು ದಿನ ಇದ್ದ.
ಹೋಗಿ. ನಾಳೇ ಸಾಯಂಕಾಲ ನಿಮ್ಮ ನಿಮ್ಮ ಊರು ತಲುಪಿದರಾಯ್ತು.
ಆಗದೆ ?"
ಯಾತ್ರೆ ಮುಗಿಸಿ ಉಂಟಾದ ಸಂತಸವನ್ನು ಹತ್ತಿಕ್ಕಲು ಯತ್ನಿಸಿತ್ತು,
ಕಂದಾಯ ವಸೂಲಿಯ ಪೆಡಂಭೂತ. ಆದರೆ ಮೆನೆಪ್ಟಾನ ಮಾತು ಆ
ಭೂತದ ಆಕಾರವನ್ನು ಕುಗ್ಗಿಸಿತು.
" ನಮ್ಮಲ್ಲಿಗೆ ಬನ್ನಿ , ನಮ್ಮಲ್ಲಿಗೆ ಬನ್ನಿ ," ಎಂದು ಊರವರು ಹೊರಗಿ
ನವರನ್ನು ಕರೆದರು.
ಹಂಚಿಕೊಳ್ಳಲು ಸಾಕಷ್ಟು ಜನರಿರಲಿಲ್ಲ !
" ನಮ್ಮ ಮನೆಗೆ ಯಾರೂ ಇಲ್ಲವಲ್ಲ," ಎಂದಳು ನೆಫಿಸ್.
" ನಾಳೆ ನಿಮ್ಮಲ್ಲಿಗೆ ಬಂದು ಮುಂದೆ ಪ್ರಯಾಣ ಬೆಳೆಸ್ತೇವೆ," ಎಂದುವು
ಬೇರೆ ಬೇರೆ ಸ್ವರಗಳು.
ಬುಡ್ಡಿ ದೀಪಗಳು ತೆರೆದ ಬಾಗಿಲುಗಳಿಂದ, ಜಾಲಂದ್ರ___ಕಿಟಕಿಗಳಿಂದ
ಬೀದಿಗೆ ಬೆಳಕು ಹಾಯಿಸಿದುವು. ನಾಲ್ಕಾರು ಜನ ಮಾತ್ರ ಮುಖ್ಯ ಬೀದಿ
ಯವರು. ಅವರಲ್ಲಿ ಮೆನೆಪ್ಟಾ ಒಬ್ಬ. ಅದರ ಎಡಮಗ್ಗುಲು ಸಾಲಿನವರೇ
ಹೆಚ್ಚು ಜನ.
ರಾಜಧಾನಿಯಿಂದ ಬಂದ ಕಂದಾಯ ಅಧಿಕಾರಿಯ ವಸತಿ ರಾಜಗೃಹ
ದಲ್ಲಿ. ಆ ತಂಡ ಊರಿನಲ್ಲಿತ್ತೆಂದು, ಒಂದು ಬಗೆಯ ಮೌನ. ಯಾರೋ
ಬಂದರೆಂದು ಬೊಗಳುವ, ಗುರುತು ಹಿಡಿದು ಬಾಲ ಆಡಿಸುವ ನಾಯಿಗಳು.