ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ ೫೧೭ ಕುಳಿತುಕೊಂಡ. “ ನಾಳೆ ವಿಚಾರಣೆ ” ಎಂದ , ತಗ್ಗಿದ ಧ್ವನಿಯಲ್ಲಿ. ಆ ಎರಡು ಪದಗಳು ಬಟಾನಿಗೆ ಇನ್ನೆಷ್ಟನ್ನೋ ತಿಳಿಸಿದುವು. “ಒಪ್ಪಲಿಲ್ಲ ಅಲ್ಲವಾ ?" “ಊಹೂಂ.. ಅದು ಇಡಿಯ ನೀರಾನೆ ಪ್ರಾಂತದ ಪ್ರಜೆಗಳ ವಿಚಾರಣೆ ಯಂತೆ . ಸಿಂಹದಂತೆ ಬಂದ , ನರಿಯಂತೆ ಓಡಿಹೋಗಲೆ ? - ಅಂತ ಕೇಳಿದ್ರು . ನಮ್ಮ ನ್ಯಾಯ ನಿಲುವನ್ನು ಅವರಿಗೆಲ್ಲ ಮಂದಟ್ಟು ಮಾಡಿಕೊಟ್ಟ , ಅವರ ಎದುರಲ್ಲೇ ಹೊರಟು ಬರ್ತೇನೆ - ಅಂದ್ರು... ಔಟ , ಬೆಕ್ ರನ್ನು ದೊಡ್ಡಿ ಮನೇಲಿಟ್ಟಿದ್ದಾರೆ. ಅವರಿಗೆ ಊಟ ಸಿಕ್ಕಿತೋ ಇಲ್ಲವೋ ಆಂತ ಚಿಂತೆ ನಾಯಕರಿಗೆ.” “ಕಷ್ಟ.” ಎಂದು ಬಟಾ , ಯಾವುದು ಎಂಬುದನ್ನು ವಿವರಿಸುವ ಗೋಜಿಗೆ ಹೋಗದೆ. ಬಹಳ ಹೊತ್ತಿನ ಮೂಕ ಯಾತನೆಯ ಬಳಿಕ ಅವನು ಕೇಳಿದ : “ವಿಚಾರಣೆ ನಡೆಯೋದು ಅಮಾತ್ಯ ಭವನದಲ್ಲಿ ಅಲ್ಲವಾ ?” "ಹೌದು." “ಹೊರಗಿನವರನ್ನು ಬಿಡ್ತಾರಾ?” "ಜಜ್ ಮಂಖ್ ನ ವಿಚರಣೆ ಆದಾಗ ನಾನು ಹೋಗಿದ್ದೆ . ಸಾಮಾನ್ಯ ಜನ ದೊಡ್ಡ ನಾಯಾಲಯದ ವೈಖರಿ ನೋಡೋದು ಬೇಡವಾ ? ಇವತ್ತು ಇಂಥಿಂಥವರ ವಿಚಾರಣೆ ಅಂತ ಡಂಗುರ ಸಾರ್ತಾರೆ , ನೂರಿನ್ನೂರು ಜನರನ್ನು ಒಳಗೆ ಬಿಡ್ತಾರೆ....” “ನಾವು-” “ಗೊತ್ತಾಯ್ತು ಪ್ರಶ್ನೆ ಯಾಕೆ ಕೇಳಿದ್ದು ಅಂತ , ಗುರುತು ಹಿಡಿದು ನಿಮ್ಮನ್ನೆಲ್ಲ ದೊಡ್ಡಿ ಮನೆಗೆ ಸೇರಿಸ್ತಾರೆ.” "......." “ನಿಮ್ಮ ಮೇಲೆ ಗದೆ , ಬಾಣ ಪ್ರಯೋಗಿಸಿದವರು , ಬಕಿಲ , ಟೆಹುಟಿ , ಗೇಬು , ನಿಮ್ಮ ಪ್ರಾಂತಕ್ಕೆ ಬಂದಿದ್ದ ರಾಜಾದೂತ , ಸಾಲದ್ದಕ್ಕೆ ನಿಮ್ಮಲ್ಲಿನ ಭೂಮಾಲಿಕರು!... ಇಂಥ ದುಸ್ಸಾಹಸಕ್ಕೆ ಕೈಹಾಕುವಂತಿಲ್ಲ." “ವಿಚಾರಣೆಯ ಕಾಲದಲ್ಲಿ ನಮ್ಮವರು ಯಾರೂ ಇರೋದಿಲ್ಲ ಅಂತ ಬೇಸರ ."