ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೫೧೮
ಮೃತ್ಯುಂಜಯ
“ನಾನು ಅಲ್ಲಿರ್ತೇನೆ."
"ಹೂಂ ಮೆನ್ನಯ್ಯ . ನನಗೆ ಬುದ್ಧಿ ಇಲ್ಲ , ನೀವು ಬೇರೆನಾ ? ನಾವು ಬೇರನಾ ? ”
“ಹತ್ತಿರದಲ್ಲೇ ನೀವು ಬಚ್ಚಿಟ್ಟೊಂಡಿರಬೇಕು ನೀವು ಕತ್ತಲಾದ ತಕ್ಷಣ ಏನಾದರೂ ಸಾಧ್ಯವಾದರೆ-”
"ಸರಿ."
...ಆ ರಾತ್ರಿ ಇನ್ನುಳಿದ ಅಬ್ಛು ಯಾತ್ರಿಕರು ಅರಮನೆಯ ದೀಪಾ ಲಂಕಾರ ನೋಡಿದರು. ( ಸಹಸ್ರಾರು ಪಂಜುಗಳು , ಹಲವು ಸಹಸ್ರ ಹಣತೆ ಗಳು . ) ಅರಮನೆಯ ಬಯಲಲ್ಲಿ ನಡೆದ ಹಾಡು , ಕುಣಿತ , ಕುಸ್ತಿಗಳಿಗೆ ಅವರು ಪ್ರೇಕ್ಷಕರಾದರು . ಮಹಾಪ್ರಭು , ಮಹಾರಾಣಿ ಮತ್ತು ಅರಸು ಸಂತತಿಯನ್ನು ಹೊತ್ತ ರಾಜನಾವೆಗಳು ಬೆಳಕಿನ ಹಂಸಗಳಾಗಿ ಸಂಗೀತದ ಅಲೆ ಗಳ ಮೇಲೆ ತೇಲಿದುದನ್ನು , ದಂಡೆಯ ಮೇಲೆ ನಿಂತು ಕಂಡರು . ಇವರು ಸಣ್ಣ ಸಣ್ಣ ಗುಂಪುಗಳಾಗಿ, ಹರ್ಷವಿಲ್ಲದೆ , ನಗೆ ಮಾತಿಲ್ಲದೆ , ಪಿಳಿಪಿಳಿ ಕಣ್ಣು ಬಿಡುತ್ತಿದ್ದ ಮೂವತ್ತ ಮೂರು ಬಡಜನರು.
ಅರಮನೆಯ ಮಹಾದ್ವಾರದ ಹೊರಗೆ ಬಡವರಿಗೆ ಭಕ್ಷ್ಯಗಳ ವಿತರಣೆ ಯಾಯಿತು . ಈ ಜನ ಅತ್ತ ಹೋಗಲಿಲ್ಲ .
ಮಾನಸಿಕ ಸಂಕಟದ ಭಾರದಿಂದ ಕುಗ್ಗಿ , ಬಳಲಿದ ಪಾದಗಳನ್ನು ಎಳೆದು ನಡೆಯುತ್ತ , ಗೊತ್ತಾಗಿದ್ದ ವೇಳೆಗಿಂತಲೂ ಮೊದಲೇ ದೋಣಿಯ ಬಳಿಗೆ ಬಂದು ತಲಸಿದರು.....
“ನಾಳೆ ವಿಚಾರಣೆ ” ಎಂಬ ಪದಗಳು ಅವರ ಯೋಚನೆಗಳನ್ನು ಒಂದಾಗಿ
ಬೆಸೆದುವು.
ಅಹೂರಾ ಊಟದ ಉಸ್ತುವಾರಿ ನೋಡಿದಳು . ಮೆನ್ನನೂ ಪ್ರಯಾಸ ಪಟ್ಟು ಒಂದೆರಡು ತುತ್ತು ನುಂಗಿದ.
ಆ ಇರುಳನ್ನು ಅಲ್ಲಿ ಕಳೆಯಬೇಕು.
'ನಾಳೆ ವಿಚಾರಣೆ.'
ಬಟಾ ಅಂದ :
“ನಮ್ಮೂರಿಗೆ ಇವತ್ತು ಪ್ರಯಾಣವಿಲ್ಲ . ನಾಳೆ . ನಾಳೆ ರಾತ್ರೆ. ”