ಪುಟ:Mrutyunjaya.pdf/೫೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ

                                                                                                                ೫೧೯
                                                   ೧೨
       ರಾಜಧಾನಿಯ     ಆಯಕಟ್ಟಿನ    ಸ್ಥಳಗಳಲ್ಲಿ    ನಿಂತು    ಡಂಗುರದವನು   ಸಾರಿದ :
       “ಕೇಳಿರಿ !  ಕೇಳಿರಿ !    ದುಷ್ಟ   ನಿಗ್ರಹ   ಶಿಷ್ಟ     ರಕ್ಷಕ   ಪೆರೋ   ಮಹಾ    ಪ್ರಭುವಿನ    ದೈವಿಕ ರಾಜ್ಯಭಾರದ    ವಿರುದ್ಧ     ಬಂಡಾಯವೆದ್ದ    ನೀರಾನೆ    ಪ್ರಾಂತದ    ನಾಯಕನ     ವಿಚಾರಣೆ    ಈ    ದಿನ ನ್ಯಾಯಮೂರ್ತಿ    ಅಮಾತ್ಯರ   ಸಮ್ಮುಖದಲ್ಲಿ     ನಡೀತದೆ .   ಕೇಳಿರಿ !   ಕೇಳಿರಿ ! "
         ಸೆಡ್    ಉತ್ಸವದ      ನಿದ್ದೆ        ಇಲ್ಲದ       ಇರುಳಿನ    ಬಳಿಕ    ರಾಜಧಾನಿಯ      ನಾಗರಿಕರು ನಿಧಾನವಾಗಿ       ಏಳುತ್ತಲಿದ್ದರು .    ನಗರ    ತುಂಬ     ಇನ್ನೂ       ಹಬ್ಬದ         ವಾತಾವರಣವೇ .  ನಿತ್ಯದ ದುಡಿಮೆಯಲ್ಲಿ    ನಿರತರಾಗಲು     ಯಾರಿಗೂ      ಮನಸ್ಸಿಲ್ಲ ,     ನದಿಯಲ್ಲಿ     ತೆಪ್ಪೋತ್ಸವ   ನಡೆಯುತ್ತಿದಾಗ ರಾಜಧಾನಿಯ       ಹಲವು     ಮನೆಗಳಲ್ಲಿ       ಕಳ್ಳತನ    ವಾಗಿತ್ತು .     “ನಮ್ಮ      ಸರ್ವಸ್ವವೂ     ಹೋಯಿತು,” ಎಂದು    ಆ     ಮನೆಗಳಲ್ಲಿ        ರೋದನ ,       ಸೆಡ್      ಸಮಾರಂಭದ     ನಿಮಿತ್ತ ಪೆರೋ      ಬಿಡುಗಡೆ ಮಾಡಿದರಲ್ಲ--  ಆ      ಕಳ್ಳರದೇ     ಕಾಯಕ    ಎಂದು   ಕೆಲವರು    ಇಳಿದನಿಯಲ್ಲಿ    ಕೂಗಾಡಿದರು .  ಬೇರೆ ಕೆಲವರು   ಅಂದರು :  “ಕಷ್ಟ   ನಿಮಗೆ    ಮಾತ್ರವಾ  ?  ಜಜ್   ಮಂಖನನ್ನೂ  ಬಿಟ್ಟಿದ್ದಾರೆ .   ಸತ್ತ  ಶ್ರೀಮಂತರಿಗೆ, ರಾಜ    ಬಂಧುಗಳಿಗೆ    ಗೋರಿಗಳಲ್ಲಿ    ಇನ್ನು     ನಿದ್ದೆಯೇ   ಇಲ್ಲ.”
        ಈಗ    ಈ    ಡಂಗುರ....   ದೈವಿಕ     ರಾಜ್ಯಭಾರದ     ವಿರುದ್ಧ    ಬಂಡಾಯ.....            ಮನೆಮುರುಕರು  !    ನಿದ್ದೆಗೇಡಿಗಳು !
       ನಿನ್ನೆಯಿಂದ      ಇವತ್ತಿಗೆ ,    ಇವತ್ತಿನಿಂದ   ನಾಳೆಗೆ    ಬಾಳು .   ಅಷ್ಟಷ್ಟಕ್ಕೇ    ನೆನಪಿನ     ತುಣಕುಗಳು.    ( ಮರಣಾನಂತರ    ಮಾತ್ರ   ಮೂರು   ಸಾವಿರ   ವರ್ಷಗಳ   ಬದುಕು . )    ಆದರೂ     ಕೆಲವರಿದ್ದರು .    ನೀರಾನೆ ಪ್ರಾಂತ    ಎಂದಾಗ      ಯೋಚನೆಗಳ     ಪೆಟ್ಟಿಗೆಯನ್ನು         ತಟ್ಟಿದಂತಾಯಿತು .    ಒಂದು    ವರ್ಷ್ ದ      ಹಿಂದೆ    ಅಲ್ಲಿ    ಅದೇನೋ    ಆಯಿತಲ್ಲ  ?      ವಿಚಾರಣೆ   ಆ    ಬಂಡಾಯ   ನಾಯಕನದೇ    ಏನು ?