ಪುಟ:Mrutyunjaya.pdf/೫೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತ್ಯುಂಜಯ ೫೨೧

    ಕಿರಿಯ ಲಿಪಿಕಾರರು ಬಂದರು. ಲಿಪಿಸುರುಳಿಗಳು, ಲೆಕ್ಕಣಿಕೆ_ಮಸಿ  ಪಾತ್ರೆಗಳು ಸಿದ್ಧವಾದುವು. ಎರಡು ಪೆಟಾರಿ ತುಂಬ ನ್ಯಾಯಸಂಬಂಧದ   ಥೊಥ್ ನ ಆದೇಶಗಳು.
    ಒಂದು ಬದಿಯಿಂದ ಇನ್ನೊಂದು ಬದಿಯವರೆಗೂ ಹಗ್ಗ ಕಟ್ಟಿದರು. ಅದರಾಚೆಗೆ ಸಾಮಾನ್ಯ ಪ್ರೇಕ್ಷಕರು. ಕಟಾಂಜನದ ಬಳಿಯಲ್ಲೂ ಇಲ್ಲೂ ಸಶಸ್ತ್ರ ಭಟರು. ಅಮಾತ್ಯರ ಒಂದು ಪಕ್ಕದಲ್ಲಿ ಸಾಲಾಗಿ ಸರುಸದಸ್ಯರು, ದಂಡನಾಯಕ, ಕಂದಾಯ ಅಧಿಕಾರಿಗಳು, ಅವರ ಹಿಂದೆ ಪ್ರಾಂತಪಾಲರು. (ಉತ್ಸವಕ್ಕೆಂದು ಬಂದ ಪ್ರಾಂತಪಾಲರೆಲ್ಲ ರಾಜಧಾನಿಯಲ್ಲೇ ಇದ್ದಾರೆ. ಯಾವುದೇ ಒಂದು ವಿಚಾರಣೆಯಲ್ಲಿ ಎಲ್ಲ ಪ್ರಾಂತಪಾಲರು ಭಾಗವಹಿಸುವುದು ಕೂಡಾ ಅಪೂರ್ವ.) ಟೆಹುಟಿಗೆ ಪ್ರತ್ಯೇಕ ಸ್ಥಾನ. ನೀರಾನೆ ಪ್ರಾಂತದ ಭೂ ಮಾಲಿಕರಿಗೆ ಪೀಠಗಳು. ('ಈ ಪೀಠಗಳಿಗಾಗಿ ನುಟ್ ಮೋಸಾದಿಗಳಿಂದ ದೊಡ್ಡ ಕಾಣಿಕೆ ಕೀಳಬೇಕು; ಇವರೆಲ್ಲ ನೀರಾನೆ ಪ್ರಾಂತಕ್ಕೆ ಹೊರಟ ಮೇಲೆ ನನ್ನ ಒಂದು ಆದಾಯಮೂಲ ಬತ್ತುತ್ತದಲ್ಲ' ಎಂದುಕೊಂಡ ಸೆನೆಬ್. 'ಆ ಬಟಾ ಬರಲೇ ಇಲ್ಲ. ಆಶ್ಚರ್ಯ. ಅವರಿಂದ ಇನ್ನು ನನಗೇನಾದರೂ ಸಿಗುತ್ತದೆ. ಎನ್ನುವುದು ಸುಳ್ಳು. ಆ ಉಡುಗೊರೆ__') -
  ಅಮಾತ್ಯರ ಇನ್ನೊಂದು ಮಗ್ಗುಲಲ್ಲಿ ಮಹಾ ಅರ್ಚಕರ ಪರಿವಾರ.   ('ಇನೇನಿ ಬರುತ್ತಾನೆ ಹೊಟ್ಟೆ ಆಡಿಸಿಕೊಂಡು.')
 ಅರಮನೆ ಕಾವಲು ಭಟರ ದಳಪತಿ ಆಗಮಿಸಿದ.
 "ಲಿಪಿಕಾರಯ್ಯ, ನನ್ನಿಂದ ಆಗಬೇಕಾದ ಕೆಲಸ ಅಪ್ಪಣೆಯಾಗಲಿ.”
 “ಜಾಗಟೆ ಸದ್ದಾದ ತಕ್ಷಣ ನೀರಾನೆ ಕ್ರಿಮಿಯನ್ನು ಕರಕೊಂಡ್ಬಾ. నిನ್ನ   ಯೋಧರ ಮೇಲ್ವಿಚಾರಣೆ ವಹಿಸ್ಕೊ. ಕಠಾರಿ ಫಳಫಳ ಅನ್ತಿದೆ. ಅಧಿಕಾರ ದಂಡವನ್ನೂ ಬೆಳಗಿದೀಯಾ...."
 ಪರಿಹಾಸ್ಯದ ಆ ಮಾತು ಇಷ್ಟವೆನಿಸಿದರೂ ದಳಪತಿ ಅಂದ:
 “ನಿಮಗೆ ನನ್ನನ್ನು ಕಂಡರೆ ಯಾವಾಗಲೂ ತಾತ್ಸಾರ.”
 ಹನಿಹನಿಯಾಗಿ ಜನ ಬರತೊಡಗಿ ಅಮಾತ್ಯ ಭವನದ ಹೊರಗಿನ  ಉದ್ಯಾನ ಬೇಗನೆ ಕೆರೆಯಾಯಿತು. 
 ದಳಪತಿಯ ಕಡೆ ನೋಡಿ ಸೆನೆಬ್ ಅಂದ: