ಪುಟ:Mrutyunjaya.pdf/೫೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೨೨ ಮೃತ್ಯುಂಜಯ

   "ಒಂದು ಸಲಕ್ಕೆ ನೂರೇ ಜನ ಒಳಗ್ಬರ್ಲಿ.ಅವರು ನೋಡಿ ಆದ ಮೇಲೆ    ಮತ್ತೆ ನೂರು ಜನ."  
    ದಳಪತಿ ತನ್ನ ಕೆಳಗಿನವರನ್ನು ಕರೆದು ಆದೇಶವಿತ್ತ;

“ಒಂದು ಸಲಕ್ಕೆ ನೂರೇ ಜನ ಒಳಗ್ಬರ್ಲಿ, ಅವರು ನೋಡಿ ಆದ ಮೇಲೆ ಮತ್ತೆ ನೂರು ಜನ.”

    ಹೊರಗೆ ಗದರುವ ಧ್ವನಿ ಕೇಳಿಸಿತು:
    “ಅಮಾತ್ಯರು! ದಾರಿ ಬಿಡಿ ! ದಾರಿ ಬಿಡಿ !"
    ಪಲ್ಲಕಿಯಿಂದಿಳಿದ ನೀಳ ದೇಹದ ಅಮಾತ್ಯ ಕೈಯಲ್ಲಿ ಅಧಿಕಾರದ     ಕೋಲನ್ನು ಹಿಡಿದುಕೊಂಡು ದೃಢ ಹೆಜ್ಜೆಗಳನ್ನಿಡುತ್ತ ಒಳಕ್ಕೆ ಬಂದ. ಅರ್ಧ  ನರೆತ ತಲೆಗೂದಲನ್ನು ಈ ದಿನ ಹೆಚ್ಚು ಎಚ್ಚರದಿಂದ ಎಡಕ್ಕೂ ಬಲಕ್ಕೂ ಬಾಚಿದಂತಿತ್ತು. ಎದೆಪಟ್ಟಿಕೆ, ಹಾರಗಳು ಅಲಂಕರಿಸಿದ್ದ ವಕ್ಷಸ್ಥಲ, ಗರಿಗರಿ ಯಾದ ನಡುಪಟ್ಟಿ, ಮೃದು ತೊಗಲಿನ ಪಾದರಕ್ಷೆ. ಛಾವಣಿಯ ಬೆಳಕಿಂಡಿಯ ಕೆಳಗಿಂದ ಹಾದು  ಅಮಾತ್ಯ ತನ್ನ ವೇದಿಕೆಯತ್ತ ನಡೆದಾಗ ಗೋದಿಗೆಂಪು ಮೈ ಹೊಳೆಯಿತು.
    ನ್ಯಾಯಮೂರ್ತಿ ಆಸೀನನಾದೊಡನೆ ಕಂಚಿನ ಜಾಗಟೆ ಬಾರಿಸಿದರು. ಆ ಸದ್ದು ಅಲೆಯಾಗುತ್ತಿದ್ದಂತೆ ಅರಮನೆಯ ಆವರಣದಲ್ಲಿ ಆಗಲೇ ಸೇರತೊಡ ಗಿದ್ದ ಸರು ಸದಸ್ಯರು, ಹಿರಿಯ ಅಧಿಕಾರಿಗಳು,ಪ್ರಾಂತಪಾಲರೆಲ್ಲ ಒಳಗೆ ಬಂದು ನ್ಯಾಯಮೂರ್ತಿ ನಮಿಸಿ ತಮ್ಮ ಪೀಠಗಳ ಮೇಲೆ ಕುಳಿತರು. ಟೆಹುಟಿಯ  ಹಿಂದೆ ಬಕಿಲ ನಿಂತ.
    ಅಮಾತ್ಯ ಪಲ್ಲಕಿಯಿಂದ ಇಳಿದೊಡನೆ ದಳಪತಿ ಕಾರಾಗೃಹದತ್ತ ಧಾವಿಸಿದ್ದ.
   (ಹಿಂದಿನ ರಾತ್ರಿ ನಿರಾಕರಣೆಯ ಉತ್ತರದೊಡನೆ ಮೆನ್ನನನ್ನು ಕಳುಹಿದ ಮೇಲೆ ಮೆನೆಪ್ ಟಾ ಒಂದರ್ಧ ರೊಟ್ಟಿಯನ್ನೂ ನಾಲ್ಕಾರು ಅಂಜೂರ ಹಣ್ಣುಗಳನ್ನೂ ಸೇವಿಸಿದ. ಮನಸ್ಸಿಗಂತೂ ನೆಮ್ಮದಿ. ನಿದ್ದೆ ಬಂತು. ಕಣ್ಣು ತೆರೆದಾಗ ಹೊರಗೆ ಬೆಳಕು ಹರಿಯುತ್ತಿರಬೇಕು ಎನಿಸಿತು. ಮಂದಪ್ರಭೆ ತನ್ನ ಕೊಠಡಿಯಲ್ಲಿ ಪಸರಲು ಆರಂಭಿಸಿದೊಡನೆ ಮೆನೆಪ್ ಟಾ ಎದ್ದ, ಯಾವ ತಾಕ  ಲಾಟವೂ ಇಲ್ಲದೆ,ಮನಸ್ಸು ಶಾಂತವಾಗಿತ್ತು. ಮರಳಿನ, ನೀರಿನ ನೆರವಿನಿಂದ