ಪುಟ:Mrutyunjaya.pdf/೫೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತ್ಯುಂಜಯ ೫೨೩ ದೇಹಬಾಧೆ ತೀರಿಸಿಕೊಂಡ ಇನ್ನೂ ಒಂದಷ್ಟು ಕಾಲ ನೆಲಮಾಳಿಗೆಯಲ್ಲಿದ್ದರೆ ತಾನೂ ಬಂಧನದ ರಾತ್ರೆ ಕಂಡ ಜಜ್ ಮಂಖನಂತೆ ಆಗುವುದು ಖಂಡಿತ-ಎನಿ ಸಿತು. ಗಾದೆ ನೆನಪಾಯಿತು- “ ಸಂಜೆ ಕೊಲ್ಲುವ ಹಕ್ಕಿಗೆ ಬೆಳಿಗ್ಗೆ ಯಾರು ನೀರುಣಿಸುತ್ತಾರೆ?' ತಾನು ಒಂದು ರೀತಿಯ ಹಕ್ಕಿಯೇ. ಹಾರಲು ನಿರಾಕಾರಿಸಿದ ಹಕ್ಕಿ. ಆ ದಿನ ಅಮಾತ್ಯನನ್ನು ಕಂಡೆ, ಅತಿథిಯಾగి; ಈ ದಿನ ನ್ಯಾಯ ಮೂರ್ತಿಯನ್ನು ಕಾಣುತ್ತೇನೆ ಬಂದಿಯಾಗಿ. ಆತನದು ದ್ವಿಪಾತ್ರ. ನನ್ನದು ಕೂಡಾ.ಕಟ್ಟಡಕ್ಕೂದ್ವಿಪಾತ್ರವೇ. ಅoದಿನದು ಅಮಾತ್ಯನ ಸಭಾಭವನ; ಇಂದು ಅದು ನ್ಯಾಯಸ್ಥಾನ. ಕರೆದೊಯ್ಯಲು ಎಷ್ಟು ಹೊತ್ತಿಗೆ ಬರುವರೊ?'ಈ ಹಣ್ಣುಗಳನ್ನು ತಿನ್ತೇನೆ. ನೀರಡಿಕೆಯ ತೊಂದರೆ ಇರೋದಿಲ್ಲ,....'ಬಟಾಗೆ ನನ್ನ ಉತ್ತರದಿಂದ ಬೇಸರವಾಗಿದ್ದೀತು. ಆದರೆ ಮನವರಿಕೆಯಾದಾಗ, ಸಮಾಧಾನವೂ ಆಗಿರಬಹುದು. ಅವರು ಯಾರೂ ನ್ಯಾಯಸ್ಥಾನಕ್ಕೆ ಬರಬಾರದು; ಬರಲಾರರು. ರಾಮೆರಿ, ಪುಟ್ಟ ರಾಮೆರಿ....ಇಲ್ಲ. ಗೊತ್ತಿದ್ದೂ ಗೊತ್ತಿದ್ದೂ; ಗಂಡಾಂತರಕ್ಕೆ ತಲೆ ಒಡ್ದುವುದು ಸರಿಯಲ್ಲ. ನನ್ನಬಂಧುಗಳು ದುಡುಕಿ ಏನನ್ನೂ ಮಾಡರು...')

       ಬಾಗಿಲ ಸದ್ದು, ದಳಪತಿಯ ಸ್ವರ:
      “ ಅಪರಾಧಿ! ಹೊರಗೆ ಬಾ !”
      (ಓಹೋ..ನಾನು ಅಪರಾಧಿ ಎನ್ನುವುದು ತೀರ್ಮಾನವಾಗಿಯೇ ಬಿಟ್ಟಿದೆ !') ಹೊರಬಾಗಿಲ ಬಳಿ ಎಂಟು ಹತ್ತು ಜನ ಯೋಧರು. ಇಬ್ಬರ ಕೈ ಗಳಲ್ಲಿ ಸೆಣಬಿನ ಹುರಿಹಗ್ಗಗಳು. ಮೆನೆಪ್ ಟಾನ ತೋಳುಗಳಿಗೆ.
      ( 'ಇದು ಅನಗತ್ಯ –ಎನ್ನಲೆ? ಊಹೂಂ ಅವರಿಗಿಷ್ಟ ಬಂದಂತೆ ಮಾಡಲಿ.' )
      "ನಡೀರಿ ಆಚೆಗೆ!"
     (ಇದು ನಾಯಕರಿಗೆ ದಾರಿಬಿಡಿ, ಅಲ್ಲ, ಇವರು ನನ್ನ ಪರಿಚಿತರು. ಮಾತನಾಡಿಸುವ ಬಯಕೆ ಆವರಿಗೆ- ಆದರೆ ಈ ದಿನ ಮೂಕರು. ನಾನು ಮುಗಳು ನಗುಬೇಕು....')
     ಎಲ್ಲ ಕೆಲಸಗಳನ್ನೂ ಬಿಟ್ಟು ಬಂದಿದ್ದರು. ಅರಮನೆಯ ಸೇವಕ ಸೇವಿಕೆಯರು.

('ಅವರಲ್ಲೊಬ್ಬಳು ಮಹಾತಾಯಿ ಶೀಬಾ.')