ಪುಟ:Mrutyunjaya.pdf/೫೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ೫೨೫

ಇಲ್ಲಿ ಪ್ರೇಕ್ಷಕರು. ಇವತ್ತು ಇವರಿಗೆ ದುಡಿಮೆ ಇಲ್ಲವೇನೋ, ಕುತೂಹಲ ?
ಕನಿಕರ? ಆ ಮೂಲೆಯಲ್ಲಿ ಯಾರೊ ಬಚ್ಚಿಟ್ಟು ಕೊಂಡಿರುವನಲ್ಲ? ತಲೆಗೆ
ಸುತ್ತಿದ ಬಟ್ಟೆ. ತನ್ನನ್ನು ಕದ್ದು ನೋಡುತ್ತಿರುವಂತಿದೆ...‍ಆ‍ಹ್-ಮೆನ್ನ-ದಿವ್ಯ
ಜೀವ....ಯಾರೂ ಗುರುತು ಹಿಡಿಯಬಾರದೆಂದು ಎಚ್ಚರ ವಹಿಸುತ್ತಿದ್ದಾನೆ....
ಅವನ ಪಾಲಿನ ಹದ್ದು ಈ ಕಡೆಗಿದೆ. ಸೆನೆಬ್. (ಬಟಾ ಹೇಳಿದ್ದ : 'ಐಗುಪ್ತದ
ಆಡಳಿತ ಭಾರವೆಲ್ಲ ಇವನ ಮೇಲೆಯೇ ಇದೆ ಅಂದ್ಕೋಬೇಕು ಯಾರಾದರೂ.')
ಪಾರ್ಶ್ವ ದ್ವಾರದಿಂದ ಸೆನೆಬ್ ಓಡಿ ಬಂದು ಅಮಾತ್ಯನ ಕಿವಿಯಲ್ಲಿ ಏನನ್ನೋ
ಉಸುರಿದ. ಅಮಾತ್ಯ ತಲೆಯಾಡಿಸಿದ. ಹಿಂಬದಿಯ ಬಾಗಿಲಿನಿಂದ ಪೆರೋ
ಬರುತ್ತಿದ್ದಾರೆ ಎಂದೆ? ಬರುವುದು ತಡವಾಗುತ್ತದೆ ಎಂದೆ?

ತಡವಾಗಲಿಲ್ಲ. ಪಾರದರ್ಶಕ ಪರದೆಯೊಳಗಿಂದ ಕಿರೀಟಗಳ ಪ್ರಭೆ ಕಾಣಿಸಿತು. ಪೆರೋ, ಮಹಾರಾಣಿ, ರಾಜಕುಮಾರ ಮತ್ತು ಗೇಬುವಿನ ಪತ್ನಿ ನೆಹನವೇಯ್ಟ್.

ಸಭಾಭವನದಲ್ಲಿ ಕುಳಿತಿದ್ದವರೆಲ್ಲ ಎದ್ದರು.ಅಮಾತ್ಯ ಹಿಂದಕ್ಕೆ ಹೊರಳಿ
ನಮಿಸಿದ:

“ ದೇವಸಮಾನ ಪೆರೋನ ಆಯುರಾರೋಗ್ಯ ವರ್ಧಿಸಲಿ !"

ಎದ್ದವರು ಮತ್ತೆ ಕುಳಿತರು. ('ನಾನು ಹೀಗೆ ಮಾಡಬೇಕಾಗಿಲ್ಲ, ನಿಂತೇ ಇರಬಹುದು. ಸುಲಭ.')

ಪರದೆಯೊಳಗಿನ ವೇದಿಕೆಯ ಮೇಲೆ ಸೇವಕರ ದರ್ಶನ. ದೊರೆಗೆ ಚಾಮರ
ಸೇವೆ. ನವಯುವಕ ಪೆರೋಗೆ ಬಿಸಿಲೇರುವುದಕ್ಕೆ ಮೊದಲೇ ಸೆಖೆಯಾಗ್ತಿರ ಬೇಕು.

ಅರಸ ತನ್ನ ಬಳಿಯ ಮುಗ್ಗಾಲು ಪೀಠದ ಮೇಲಿನ ಹೊಳೆಯುವ ತಟ್ಟೆ
ಯಲ್ಲಿ ಏನನ್ನೋ ಇರಿಸಿದ. ('ಏನಿರಬಹುದು? ಆಂಖ್ ಲಾಂಛನ....')

ಯಾರ ದಾರಿ ನೋಡುತ್ತಿದ್ದಾರೆ ? ಆರಂಭಿಸುತ್ತಿಲ್ಲವಲ್ಲ. ಇನೇನಿ ಬಂದ.
ವಿನಯಪೂರ್ವಕವಾಗಿ ಎರಡು ಹೆಜ್ಜೆ ಇರಿಸಿ. ಓಡಿ ಬಂದ ಸೆನೆಬ್ ಗೆ ಏನನ್ನೋ
ಹೇಳಿ, ಪುನಃ ಉದ್ಯಾನಕ್ಕಿಳಿದ. ಸೆನೆಬ್ ನ್ಯಾಯಮೂರ್ತಿಯಲ್ಲಿಗೆ. ಅಲ್ಲಿಂದ
ಪೆರೋ__ಮಹಾರಾಣಿಯಠ ಸಮ್ಮುಖಕ್ಕೆ, ಮರಳಿ ನ್ಯಾಹುಮೂರ್ತಿಯಲ್ಲಿಗೆ, ಆಡಿದ ತಲೆಗಳು.

ಆ ಪೀಠದ ಮೇಲಿನ ಚಿರತೆ ಚರ್ಮ....ಮಹಾ ಅರ್ಚಕರು ಬರುವರೇನು?