ಪುಟ:Mrutyunjaya.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯು೦ಜಯ

೪೩

ಆ ಜನರಿಗೆ ತಮ್ಮವರು ಯಾತ್ರೆಯಿಂದ ಮರಳಿದರೆಂಬ ಸಂತಸ ಸಹಜವಾದರೂ
ಕಾಣದ ಕಡಿವಾಣ ಅದನ್ನು ಹಿಡಿದು ಜಗ್ಗುತ್ತಿತ್ತು.
ರಾಜಗೃಹದಲ್ಲಿ ಮೇಜವಾನಿ ನಡೆಯುತ್ತಿರಬೇಕು ಎಂದುಕೊ೦ಡ
ಮೆನೆಪ್ಟಾ. ಕಂದಾಯದ ಅಧಿಕಾರಿ ಊರಲ್ಲಿದ್ದಷ್ಟು ದಿನ ಸಂಭ್ರಮದ
ಸತ್ಕಾರ. ಓಲೈಸುವವರು ಊರಿನ ಆಢ್ಯರು, ಭೂಮಾಲಿಕರು, ತಂಡ ತೆರಳಿದ
ಮೇಲೆ ಸತ್ಕಾರದ ವೆಚ್ಚವನ್ನು ತುಂಬಲೆಂದು ಜನರಿ೦ದ ವಿಶೇಷ ಕರ
ವಸೂಲಿ.
ಮನೆ ಸೇರುತ್ತಿದ್ದಂತೆ ನೆಫಿಸ್ಳನ್ನು ಪಕ್ಕದ ಮನೆಯ ನೆಜಮುಟ್
ಕೇಳಿದಳು :
"ಹೋಗಿ ಬಂದ್ರಾ?"
"ಹೂಂ, ಅಕ್ಕ."
ಅವಸರ ಅವಸರವಾಗಿ ಬಿಸಿಬಿಸಿ ರೊಟ್ಟಿ ತಟ್ಟಿದಳು ನೆಫಿಸ್. ರಾಮೆ
ರಿಪ್ಟಾ ನಿದ್ದೆ ಗಣ್ಣಿನಲ್ಲೇ ಊಟ ಮಾಡಿದ; ಉಂಡವನೇ ಮೈ ಚಾಚಿದ.
ಹೊರಗೆ ನೆರೆಯ ಕುಶಲಕರ್ಮಿ ಸ್ನೊಫ್ರುವಿನೊಡನೆ ಮಾತನಾಡುತ್ತ
ನಿಂತಿದ್ದ ಗ೦ಡನನ್ನು ನೆಫಿಸ್ ಕರೆದಳು .ಮೆನೆಪ್ಟಾ ಬಹಿರ್ದೆಶೆಗೆ ಹೋಗಿ
ಬಂದು, ಕೈ ಕಾಲು ತೊಳೆದು ಒಲೆಯ ಬುಡದಲ್ಲಿ ಕುಳಿತ ಎದುರು
ಗೇಣೆತ್ತರದ ಅಟ್ಟಣಿಗೆ. ಅದರ ಮೇಲೆ ಕಲ್ಲಿನ ಬಟ್ಟಲು. ಬಟ್ಟಲಲ್ಲಿ ರೊಟ್ಟಿ
ಉಪ್ಪು ಹಾಕಿದ ಮೀನು, ಈರುಳ್ಳಿ.
"ನೀನೂ ಕೈ ಹಾಕು,"ಎಂದ ಮೆನೆಪ್ಟಾ.
ನೆಫಿಸ್ "ಹೂಂ"ಅಂದಳು.
ಅರ್ಧ ಊಟದ ಮಧ್ಯೆ ಬೆರಳುಗಳು ಪರಸ್ಪರ ಮುಟ್ಟಿ ನೋಡಿದುವು.
ಸ್ಪರ್ಶ ಸಂದೇಶ. ಮೊದಲು ಯಾರು ನೀಡಿದರೆಂದು ಹೇಳುವುದು ಕಷ್ಟ.
ಬಹುಶಃ ಇಬ್ಬರೂ ಏಕಕಾಲದಲ್ಲೇ, ಬಯಕೆಯ ನೋಟಗಳು....
ಕೈ ತೊಳೆದ ಮೆನೆಪ್ಟಾ ಜಾಲಂದ್ರವನ್ನೂ ಬಾಗಿಲನ್ನೂ ಮುಚ್ಚಿ
ಬಂದ. ನೆಫಿಸ್ ಬಟ್ಟಲು ತೊಳೆದಿರಿಸಿ, ಹುಲ್ಲಿನ ಚಾಪೆ ಹಾಸಿದಳು. ಬುಡ್ಡಿ
ದೀಪವನ್ನು ಮೆನೆಪ್ಟಾ ಆರಿಸಿದ.
ಗಂಡನನ್ನು ತಬ್ಬಿಕೊಂಡು ಮತ್ತೇರಿದ ಧ್ವನಿಯಲ್ಲಿ ನೆಫಿಸ್ ಅಂದಳು: