ಪುಟ:Mrutyunjaya.pdf/೫೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



                        ಮೃತ್ಯುಂಜಯ                          ೫೨೯  
ಮುಖಭಂಗವಾಯಿತು ಪಾಪ! ಸುಮಾರು ಒಂದು ವರ್ಷದ ಅಜ್ಞಾತವಾಸ. ಬಹಳ ತಾಪದಾಯಕವಾಗಿರಬೇಕು ಈಗೇನು ಹೇಳುವನೋ ? ಮತ್ತೆ ಅಂದಿನ ಮಾತುಗಳು ? ಅದೇ ಕೂಗಾಟ ?
  “ಈ ದುರುಳನ ಅಕೃತ್ಯ ಇಡೀ ಐಗುಪ್ತಕ್ಕೆ ಗೊತ್ತಿದೆ. ಆದರೂ ನ್ಯಾಯ ಸ್ಥಾನಕ್ಕೆ ಮನವರಿಕೆಯಾಗಲೆಂದು ಮತ್ತೊಮ್ಮೆ ಸಾರಿ ಹೇಳ್ತೇನೆ. ಕಳೆದ ವರ್ಷ ಅಬ್ಟು ಉತ್ಸವದ ಮಾರನೆಯ ದಿನ ಕಂದಾಯ ವಸೂಲಿಯ ಕರ್ತವ್ಯಪಾಲನೆಗಾಗಿ ನಾನು ನೀರಾನೆ ಪ್ರಾಂತ್ಯದ ಮುಖ್ಯ ಪಟ್ಟಣಕ್ಕೆ ಹೋದೆ. ಆ ರಾತ್ರಿ ಈ ಅಪರಾಧಿಯೂ ಸಂಗಡಿಗರೂ ಅಬ್ಟುವಿನಿಂದ ವಾಪಸಾದರು.ಕಂದಾಯಸಂಗ್ರಹವನ್ನು ಇದಿರಿಸ್ಬೇಕು, ನನ್ನನ್ನು ಸಾಯಿಸಿ ನೀಲ ನದಿಗೆ ಎಸೀಬೇಕು ಅಂತ ಪಿತೂರಿ ನಡೆಸಿದ್ರು. ಬೆಳಗಾಗೋ ಹೊತ್ತಿಗೆ ಇಡೀ ಊರನ್ನೇ ನನ್ನ ವಿರುದ್ಧ ಎತ್ತಿ ಕಟ್ಟಿದ್ರು. ರಾಜಗೃಹದಲ್ಲಿ ನಾನು ಊರಿನ ಪ್ರಮುಖರ ಸಭೆ ಕರೆದಾಗ, ಮನವಿ ಸಲ್ಲಿಸೋ ನೆಪದಲ್ಲಿ ಈತ ರೈತರನ್ನೂ ಕುಶಲಕರ್ಮಿಗಳನ್ನೂ ಕರೆದುಕೊಂಡು ಆ ಸಭೆಗೆ ನುಗ್ಗಿದ. ಮಹಾ ಪ್ರಭು, ಮಹಾ ಅರ್ಚಕ ಮತ್ತು ಅಮಾತ್ಯವರ್ಯ ರನ್ನು ಧಿಕ್ಕರಿಸಿ ಮಾತನಾಡಿದ. ನನ್ನ ಮೇಲೆ ಕೈ ಮಾಡಿದ. ನನ್ನ ಭಟರ ಮುಖ್ಯಸ್ಥನ ಕಣ್ಣು ಕಿತ್ತ. ಶಾಂತಿ ಸ್ಥಾಪನೆಗಾಗಿ ನಾನು ಮಾಡಿದ ಪ್ರಯತ್ನ ವೆಲ್ಲ ವಿಫಲವಾಯ್ತು. ಪ್ರಯಾಸಪಟ್ಟು ಪ್ರಾಣ ಉಳಿಸಿಕೊಂಡೆ. ಪ್ರಾಂತಪಾಲ ನನ್ನೂ ಉಳಿಸಿದ. ಸೃಷ್ಟಿಕರ್ತ ರಾನ ಆಳ್ವಿಕೆಯಲ್ಲಿ ಕೆಲವು ಜನ ಸೆತ್ ನ ಆರಾ ಧಕರಾದದು, ರಾ ಅವರನ್ನು ದಂಡಿಸಿದ್ದು ನಮಗೆ ಗೊತ್ತಿದೆ. ಆದರೆ ಇಡಿಯ ಸಮಾಜದ, ದೇಶದ ವಿರುದ್ಧ ಬಂಡಾಯ ನಡೆದಿರುವುದು ಐಗುಪ್ತದ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಇದೇ ಮೊದಲು. ಐಗುಪ್ತದ ನಾಲ್ವತ್ತು ನೂರು ಸಹಸ್ರ ಜನಸಂಖ್ಯೆಯಲ್ಲಿ ನೂರರಲ್ಲಿ ಒಂದು ಭಾಗ ಜನ ಮಾತ್ರ ಬಂಡಾಯ ವೆದ್ದ್ದಿದ್ದಾರೇಂತ ಸುಮ್ಮನಿರೋಣವೆ? ಮರಳುಗಾಡಿನ ಈ ಕಿಡಿಯನ್ನು ಕಡೆ ಗಣಿಸಿದರೆ ನಾಳೆ ನೀಲನದಿಗೇ ಜ್ವಾಲೆ ಅಂಟೀತು; ಐಗುಪ್ತದ ನಾಗರಿಕತೆ ನಾಶವಾದೀತು; ಭೂಮಿಯ ಮೇಲೆ ರಾನ ಪ್ರಭುತ್ವ ಮುಕ್ತಾಯವಾದೀತು. ಇಷ್ಟೇ ನನ್ನ ದೂರು. ಇಷ್ಟೇ.”
  ಮಹಾ ಅರ್ಚಕ ಟೆಹುಟಿಯತ್ತ ನೋಡಿ ಕಂಡೂ ಕಾಣಿಸದಂತೆ ಮಂದ ಹಾಸ ಬೀರಿದ. ಟೆಹುಟಿ ಸಂತೃಪ್ತ. 'ಹೆಚ್ಚು ಎಚ್ಚರ ವಹಿಸದಿದ್ದರೆ ಟಹುಟಿಯೇ
            ೪೩