ಪುಟ:Mrutyunjaya.pdf/೫೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ಬಗೆಗೆ ತೀರ್ಪನ್ನು ಪೆರೋನ ಎದುರಲ್ಲಿ ಹಿಂದೆ ನೀಡಿದ್ದೆ. ಈ ಸಲ ಮಹಾ ಅರ್ಚಕನೂ ಇದ್ದಾನೆ. ತನ್ನ ಸಾಮರ್ಥ್ಯಕ್ಕೆ ಆಹ್ವಾನವಾಗಿ ಬಂದಿರುವ ಘಟನೆ ಇದು. ಆಮೆರಬ್ ಇಂದು ನೀಡುವ ತೀರ್ಪು ಥೊಥ್ ನ ಕಟ್ಟಳೆಯ ಹಾಗೆ ಶಾಶ್ವತವಾಗಬೇಕು. ಭೋಜನಕ್ಕಾಗಿ ವಿಶ್ರಾಂತಿಗಾಗಿ ಈಗ ಕೆಲಸ ನಿಲ್ಲಿಸಿ ಬಿಸಿಲು ಬಾಡಿದ ಮೇಲೆ ಮತ್ತೆ ಸೇರುವುದು ವಿಹಿತ. ಇವರು ಏನೆನ್ನುವರೊ ? ಅಮಾತ್ಯ ಸೆನೆಬ್ ನನ್ನು ಕರೆದು “ವಿಚಾರಣೆ ಸಂಜೆಯವರೆಗೂ ನಡೆಯಬಹುದು. ವಿಶ್ರಾಂತಿಯ ಅನಂತರ ಸೇರುವುದು ಮೇಲು ಅಂತ ತೋರ್ತದೆ, ಅನುಮತಿ ಬೇಕು ಅಂತ ಪೆರೋಗೆ ಬಿನ್ನವಿಸಿ ಬಾ,” ಎಂದ. ಮಹಾ ಅರ್ಚಕನಿಗೆ ತಾನೇಆ ವಿಷಯವನ್ನು ತಿಳಿಸಿದ.

          " ಸರಿ ,ಸರಿ . ಅಪೂರ್ವ ವಿಚಾರಣೆ ,ಅಪೂರ್ವ ತೀರ್ಪು ," ಎಂದ ಹೆಪಾಟ್ .ಪರಿಹಾಸ್ಯದ ನುಡಿ, ಚುಚ್ಚಿದರೂ ನೋವಾಗಿಲ್ಲ ಎನ್ನುವಂತೆ ಆಮೆರಬ್ ನಟಿಸಿದ .
          (ಸೆನೆಬ್ ತಂದ ಬಿನ್ನಹವನ್ನು ಆಲಿಸಿದೊಡನೆ ಆಂಖ ಲಾಂಛನವನ್ನೆತ್ತಿ ಕೊಂಡು ಪೆರೋ ಎದ್ದ. ಪರಿವಾರವೂ ಎದ್ದಿತು. ಹೊರಡುತ್ತ ಮಹಾರಾಣಿ ಅಂದಳು  : ‘ ಆ ಮೆನೆಪ್ ಟಾ  ಪ್ರಚಂಡ ಮಾತುಗಾರನಂತೆ. ಈ ನೆಹನ  ಹೇಳ್ತಾಳೆ. ತೀರ್ಪಿಗೆ ಮುಂಚೆ ಅವನಿಗೆ ಅವಕಾಶ ಕೊಡಬೇಕೂಂತ ಅಮಾತ್ಯರಿಗೆ ತಿಳಿಸು. "
           " ಅಪ್ಪಣೆ” ಎಂದು ಹೇಳಿ ಸೆನೆಬ್ ನೆಲದ ವರೆಗೂ ಬಗ್ಗಿ ನಮಿಸಿದ.) 
           ಪೆರೋ ನಿರ್ಗಮಿಸಿದೊಡನೆ ಹೆಪಾಟ್ ಎದ್ದ , ತನ್ನ ಪರಿವಾರದೊಡನೆ ಮಹಾಮಂದಿರಕ್ಕೆ ತೆರಳಲೆಂದು ಹೊರಬಿದ್ದ. ಮಹಾರಾಣಿಯಿಂದ ಸಂದೇಶವನ್ನು ಕೇಳಿ.“ಅದಕ್ಕೇನು?  ಅಗತ್ಯವಾಗಿ ಅವಕಾಶ ಕೊಡೋಣ,”ಎಂದು ನುಡಿದು,"ಬಿಸಿಲು ಬಾಡಿದ ಮೇಲೆ  ನ್ಯಾಯಸ್ಥಾನ ಮತ್ತೆ ಸೇರ್ತದೆ,” ಎಂದು ಘೋಷಿಸಿ, ತನ್ನ ನಿವಾಸಕ್ಕೆ ಹೊರಟ.
           ಮೆನೆಪ್ ಟಾ ನೋಡುತ್ತಲಿದ್ದಂತೆ ನ್ಯಾಯಸ್ಥಾನದಲ್ಲಿದ್ದ ಆಸಕ್ತ ಪ್ರತಿಷ್ಠಿತರೂ ಬರಿಯ ಪ್ರೇಕ್ಷಕರೂ ಚೆದರಿದರು. ('ಮೆನ್ನ ಇಲ್ಲ, ಯಾರ ಕಣ್ಣಿಗೂ ಬೀಳದಂತೆ ಹೊರಟಿರಬೇಕು.ಅವನು ಹೋಗಿ ಬಟಾನನ್ನು ಕಾಣ್ತಾನೆ. ಎಲ್ಲ ಬಂಧುಗಳಿಗೂ ಈವರೆಗೆ ನಡೆದ ವಿಚಾರಣೆಯ ಕಥೆ ಹೇಳ್ತಾನೆ. ಅವರು