ಪುಟ:Mrutyunjaya.pdf/೫೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ಬಿದು ಬಿದು ನಗ್ತಾರೆ. ಅಥವಾ ವಿಸ್ಮಿತರಾಗಾರೆ. ಅಥವಾ....')

ಅವನ ತೋಳುಗಳಿಗೆ ಬಿಗಿದಿದ್ದ ಹಗ್ಗಗಳನ್ನು ಎಡ ಬಲಗಳಲ್ಲಿ ಯೋಧರು ಹಿಡಿದೇ ಇದ್ದರು. ದಳಪತಿ “ಜತನ! ತಪ್ಪಿಸ್ಕೊಂಡಾನು!” ಎಂದು ಕೂಗುತ್ತ ಮತ್ತಷ್ಟು ಯೋಧರೊಡನೆ ಕಟಾಂಜನದ ಬಳಿಗೆ ಬಂದು ಆ ಯೋಧರು ಕಟಾ೦ಜನವನ್ನು ಸುತ್ತುವರಿದು ನಿಂತರು. “ ಸೈನ್ಯ ಗಡಿಯಿಂದ ಬಂದವರು ನಾಳೆ ದಂಡಯಾತ್ರೆಗೆ ಹೊರಡ್ತಾರಂತೆ. ಅದಕ್ಕೆ ಇವತ್ತು ವಿಶ್ರಾಂತಿಯಂತೆ- ನಾನೇನೋ ಹೇಳಿಬಿಟ್ಟೆ : ಸಾಯಂಕಾಲವೂ ಹೀಗೆಯೇ ಗದ್ದಲ ಇದ್ದರೆ ದೊಡ್ಡ ದಂಡು ಬರಲೇಬೇಕು” ಅಂತ ಎಂದು ದಳಪತಿ ಗೊಣಗಿದ. ಹೊರಗಿದ್ದವರು ಮೆನೆಪ್ ಟಾನನ್ನು ನೋಡಿ ಹೋಗಲೆಂದು ಒಳಗೆ ಬರತೊಡಗಿದ್ದರು. “ಇದೇನು ಕುಣಿತದ ಬಯಲು ಕೆಟ್ಟು ಹೋಯ್ತಾ? ನಡೀರಿ!" ಎಂದು ದಳಪತಿ ಗದರಿದ, ಸಭಾಭವನದ ಎಲ್ಲ ಬಾಗಿಲುಗಳನ್ನೂ ಮುಚ್ಚಿಸಿದ.
  ಯೋಧರು ಒಬ್ಬೊಬ್ಬರಾಗಿ ಊಟಕ್ಕೆ ಹೊರಟರು. ಅವರ ಸ್ಥಾನದಲ್ಲಿ ಹೊಸಬರು ಬಂದು ನಿಂತರು.
  ಮೆನೆಪ್ ಟಾಗೆ ಅನಿಸಿತು : ' ಈ ವಿರಾಮ ಇಲ್ಲದೆ ಒಮ್ಮೆಗೇ ಮುಗಿದಿದ್ದರೆ ಚೆನ್ನಾಗಿರ್ತಿತ್ತು..... ಸಹನೆಯ ಪರೀಕ್ಷೆ...'
  ಅವನು ಗೋಡೆಗೊರಗಿದ.
  ಒಬ್ಬ ಭಟ ಮೆಲುದನಿಯಲ್ಲಿ “ ಕೂತ್ಕೋಳ್ಳಿ ಬೇಕಾದರೆ” ಎಂದ. ಮೆನೆಪ್ಟಾ ನೆಲದ ಮೇಲೆ ಕುಳಿತುಕೊಂಡ. ವಿವಿಧ ಭಂಗಿಗಳಲ್ಲಿ ಭಟರೂ ಅವನ ಬಳಿ ಕುಳಿತರು. 
  ನಾಯಕ ಅಂದುಕೊಂಡ: “ಇವರೆಲ್ಲ ಬಡವರು.. ನನ್ನ ಮೇಲೆ ಇವರಿಗೆ ದ್ವೇಷವಿಲ್ಲ. ಹೊಟ್ಟೆಪಾಡಿಗಾಗಿ ಈ ಉದ್ಯೋಗ ಹಿಡಿದಿದ್ದಾರೆ.'

ಭಟರು ಹಿಂದಿನ ದಿನದ ಉತ್ಸವವನ್ನು ಕುರಿತು (ಆಟದ ಬಯಲಿನಲ್ಲಿ ನಡೆದ ವಿವಿಧ ವಿನೋದಾವಳಿ, ದೀಪಾಲಂಕಾರ, ಪೆರೋ ಪರಿವಾರದ ನೌಕಾ ವಿಹಾರ) ಮಾತು ಆರಂಭಿಸಿದರು ಆ ಮಾತುಗಳಿಗೆ ಮೆನೆಪ್ಟಾ ಕಿವಿಗೊಟ್ಟ. 'ನಾನು ನೋಡದೇ ಇದ್ದ ಸೆಡ್ ಉತ್ಸವ.' ಈ ಹೊತ್ತಿನಲ್ಲಿ ಅವರಿಗೆಲ್ಲ ಅದು ನಾಯಸ್ಥಾನವಲ್ಲ, ಹರಟೆಯ ಸ್ಪಳ. ಗೋಡೆಯ ತುಂಬ ಒಸೈರಿಸನ ನ್ಯಾಯ ಸ್ಥಾನದ ಚಿತ್ರಗಳು. ಸಾಲಾಗಿ ನಿಂತ ವಿದೇಶೀಯ ಕೈದಿಗಳು ('ಇವತ್ತಿನ