ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ ನ್ಯಾಯಮೂರ್ತಿ ಒಸೈರಿಸೆನಲ್ಲ, ಆಮೆರಬ್. ನಾನು ವಿದೇಶೀಯನಲ್ಲ-ಇದೇ ಮಣ್ಣಿನ ಸಂತಾನ')ಪೆರೋ ಒಬ್ಬನ ಶಿರಚ್ಛೀದನ ಮಾಡುತ್ತಿದ್ದಾನೆ. ನಡು ಹಗಲಿನಲ್ಲಿ ಈ ಬಣ್ಣಗಳು ಜೀವ ತಳೆದಿವೆ. ಕರಗಿ ಹರಿಯುವಂತೆ ಕಾಣುತ್ತಿದೆ ಯಲ್ಲ ಆ ಕೆಂಪು ? ಇಷ್ಟಿದ್ದರೂ ಈ ನ್ಯಾಯಸ್ಥಾನವೀಗ ಬರಿಯ ಪೀಠಗಳ, ನೆಲಹಾಸುಗಳ, ಪರದೆಯ ಸಭಾಭವನ.
ಊಟ ಮುಗಿಸಿ ಬಂದ ಒಬ್ಬ ಕಾವಲುಭಟನೆಂದ :
"ದಳಪತಿಗೆ ಭಯ. ಪ್ರಾಕಾರ ದ್ವಾರಗಳನ್ನೆಲ್ಲ ಈಗಲೇ ಮುಚ್ಚಿಸಿಬಿಟ್ರು. ಮಹಾದ್ವಾರಕ್ಕೆ ವಿಶೇಷ ಕಾವಲು ಹಾಕಿದ್ದಾರೆ!”
ಇನ್ನೊಬ್ಬ ಪಿಸುದನಿಯಲ್ಲಿ ಅಂದ:
"ಇವರು ತಪ್ಪಿಸ್ಕೊಂಡು ಹೋಗ್ಬೌದು ಅಂತಲಾ?"
“ ಹೂಂ..”
ಒಂದು ಮಗ್ಗುಲು ಬಾಗಿಲು ತುಸು ತೆರೆದುಕೊಂಡಿತು. ಅರಮನೆಯ ಪರಿಚಾರಿಕೆ ಶೀಬಾ ಒಳಬಂದಳು. ('ಪರಿಚಿತ ಮುಖ.')
“ ಏನಕ್ಕ?” ಎಂದು ಕೇಳಿದ ಅವಳ ಪರಿಚಯವಿದ್ದ ఒಬ್ಬ ಯೋಧ.
ಅವಳು ಮಂದಹಾಸ ಬೀರಿದಳು.
" ನಿಮ್ಮದೆಲ್ಲ ಊಟ ಆಯ್ತಾ?"
"ಓಹೋ."
ಹತ್ತಿರ ಬಂದು ಮೆಲ್ಲನೆ ಕೇಳಿದಳು :
"ಇವರಿಗೇನಾದರೂ ಕೊಟ್ಟರಾ?"
ಆ ಯೋಚನೆ ಒಬ್ಬಿಬ್ಬರಿಗೆ ಬಂದಿತ್ತು. ಆದರೆ ? ಆದರೆ? ಒಬ್ಬ ನುಡಿದ :
"ಹ್ಯಾಗಕ್ಕ ಕೊಡೋದು ?"
"ಹೀಗೆ," ಎಂದಳು ಶೀಬಾ, ತನ್ನ ನಡುವಸ್ತ್ರ ಮಡಚಿದ್ದಲ್ಲಿಂದ ಬಾಡಿದ ಹಸುರು ಪೆವೈರಸ್ ಎಲೆಗಳಲ್ಲಿ ಸುತ್ತಿದ್ದೊಂದು ಸುರುಳಿಯನ್ನು ಹೊರತೆಗೆದು. "ಒಂದೇ ರೊಟ್ಟ,ತಿಂದ್ಬಿಡಿ ಅಣ್ಣ. ನನ್ನ ಗುರುತು ಸಿಗಲಿಲ್ಲವಾ, ನಾನು ಮಹಾತಾಯಿ, ಅಣ್ಣ,” ಎಂದು ಹೇಳಿ, “ ಆ ಮೇಲೆ ಆಎಲೆಗಳನ್ನು ಹೊರಕ್ಕೆ ಎಸೆದ್ಬಿಡು," ಎಂದೊಬ್ಬ ಯೋಧನಿಗೆ ನಿದ್ರೇಶವಿತ್ತು, ಅವಳು ಹೊರಟು