ಪುಟ:Mrutyunjaya.pdf/೫೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ಬಂಧುಗಳ ಸವಿಸಾನ್ನಿಧ್ಯ ಇಲ್ಲವೆ?...)

  ಒಬ್ಬ ಯೋಧ ಬಂದು ಪೆಪೈರಸ್ ಎಲೆಗಳನ್ನು ಬಾಚಿ, ಅಂಗೈಯಲ್ಲಿ ಮುದುಡಿ ಹಿಡಿದು, ಎಸೆಯಲೆಂದು ಹೊರಹೋದ.  
  ಹಗ್ಗ ಹಿಡಿದುಕೊಂಡಿದ್ದ ಒಬ್ಬ ಪಿಸುದನಿಯಲ್ಲಿ ಕೇಳಿದ :
  "ಜಲಬಾಧೆ?"
  ('ಸಂಜೆಯ ವರೆಗೂ ಹೀಗೆಯೇ ಇರಬೇಕಿನ್ನು. ಹೋಗಿ ಬರೋದು ಮೇಲು.')
  ಇನ್ನೊಬ್ಬನೆಂದ :
  "ಬನ್ನಿ, ಅಮಾತ್ಯರಿಗೋಸ್ಕರ ಕಟ್ಟಿಸಿರೋದು ವೇದಿಕೆಯ ಆ ಬಬಿಗಿದೆ. ”
  ಮೂವರೂ ಎದ್ದರು. ಆ ಕೊಠಡಿಗೆ ಒಬ್ಬನನ್ನೇ ಬಿಟ್ಟು ಭಟರು ಬಾಗಿಲಲ್ಲಿ ನಿಂತರು. ಹರಿಯುವ ನೀರು. ಕೈಬಾಯಿ ಮುಖ ತೊಳೆದುಕೊಂಡ. ತಲೆ ಗೂದಲಿಗೂ ನೀರು ಹನಿಸಿ ಬೆರಳುಗಳಿಂದ ಹಿಂದಕ್ಕೆ ಬಾಚಿದ. ಮುಂಡವನ್ನು ತಣೀರಿನಿಂದ ಒರಸಿದ. ಮಾಲಿನ್ಯ ಕಳೆದು, ಶುಚಿ ಎನಿಸಿದಾಗ, ಬೊಗಸೆ ನೀರು ಕುಡಿದಾಗ, ನೀಲನದಿಯಲ್ಲಿ ಈಸ ಮುಳುಗಿ ಎದ್ದು ಬಂದಷ್ಟು, ಸಮಾಧಾನವಾಯಿತು.
  ಮೆನೆಪ್ಟಾ ಜಲಬಾಧೆಗೆಂದು ಎದ್ದೊಡನೆ ಇಬ್ಬರು ಯೋಧರು ತಲೆ ವಾಗಿಲಿನತ್ತ ಧಾವಿಸಿದ್ದರು. ಅದನ್ನು ತುಸು ತೆರೆದು ಹೊರನೋಡುತ್ತ ನಿಂತಿದ್ದರು. ಅದು ಇದ್ದಕ್ಕಿದ್ದಂತೆ ದಳಪತಿ ಬಂದು ಬಿಡದಂತೆ ಮುನ್ನೆಚ್ಚರಿಕೆ. ಮೆನೆಪ್ಟಾ ಕಟಾಂಜನದತ್ತ ಮರಳಿದೊಡನೆ ಆ ಯೋಧರೂ ಹಿಂತಿರುಗಿದರು.
  ಎಲ್ಲ ಸದ್ದುಗಳೂ ಸ್ವಲ್ಪ ಕಾಲ ಕುಗ್ಗುವಂತೆ ಮಾಡುವ ಪ್ರಖರತೆರಾನದು. ಆತ ಪಶ್ಚಿಮದತ್ತ ವಾಲಿದ ಮೇಲೆಯೇ ಬದುಕಿನ ಹತ್ತು ಸಪ್ಪಳ.
  ರಾ ನಡು ನೆತ್ತಿಯ ಮೇಲೆಯೇ ನಿಂತನೇನೋ, ಇವತ್ತು ಹೊತ್ತು. ಕ್ರಮಿಸುತ್ತಿಲ್ಲವೇನೋ_ ಎನಿಸಿತು ಮೆನೆಪ್ಟಾಗೆ.ಹೊರಗಿನಿಂದ ಆ ಶಬ್ದ

ಕೇಳಿ ಮತ್ತೂ ಸ್ವಲ್ಪ ಹೊತ್ತಾದ ಮೇಲೆ, ದಳಪತಿ ದಪ್ಪ ಹೆಜ್ಜೆಗಳನ್ನಿಡುತ್ತ ಬಂದ.

  ಅವನೆಂದ :
  "ಕೈದೀನ ಯಾಕೆ ಕೂತ್ಕೋಳ್ಳೋದಕ್ಕೆ ಬಿಟ್ಟಿರಿ? ಹಿಡಿದು ನಿಲ್ಲಿಸಿ. ಎಲ್ಲಿ ಇದ್ದೀರಿ ಎನ್ನುವ ಕಲ್ಪನೆ ಇಲ್ಲವಾ ನಿಮಗೆ ? ಬುದ್ಧಿ ಇಲ್ಲದ ಕತ್ತೆಗಳು.