ಪುಟ:Mrutyunjaya.pdf/೫೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೪೨

ಮೃತ್ಯುಂಜಯ

"ಕೋಪಿಸ್ಕೋಬೇಡಿ, ಶಿಷ್ಟಾಚಾರಕ್ಕೆ ಸಂಬಂಧಿಸಿದ್ದು. ಎಪ್ಪತ್ತು
ದಿನಗಳಿಗೆ ಹಿಂದೆ ನಿಮ್ಮನ್ನು ನಾನು ಭೇಟಿಯಾದಾಗ, ಅತಿಥಿಗ್ರಹದಲ್ಲಿ ಎಲ್ಲ
ಅನುಕೂಲವಾಗಿದೆಯಾ?-ಅಂತ ಕೇಳಿದ್ದಿರಿ. ಕಾರಾಗೃಹದಲ್ಲಿ ಎಲ್ಲ
ಅನುಕೂಲವಾಗಿದೆಯಾ?-ಅಂತ ಇವತ್ತು ಕೇಳಲಿಲ್ಲವಲ್ಲ..."
"ಮುಂದುವರಿಸು!"
" ಸೆಡ್ ಉತ್ಸವಕ್ಕೆ ಹತ್ತು ದಿನ ಮುಂಚಿತವಾಗಿಯೇ ಬರಬೇಕೂಂತ
ಎಲ್ಲ ಪ್ರಾಂತಪಾಲರಿಗೂ ಕರೆ ಕಳಿಸಿದೆ; ನೀರಾನೆ ಪ್ರಾಂತದ ನಾಯಕ ಕೂಡ
ಈ ಉತ್ಸವದಲ್ಲಿ ಭಾಗವಹಿಸಬೇಕು-ಇದು ಮಹಾಪ್ರಭು ನನಗೆ ನೀಡಿದ
ಆದೇಶ. ಅಮಾತ್ಯರ ಮೂಲಕ. ಓ ಅಲ್ಲಿ ನಿಂತಿರೋ ರಾಜದೂತ ತಂದ್ಕೊಟ್ಟ.
ಹೊರಟು ಬಂದೆ. ಹತ್ತು ದಿವಸ ಅಲ್ಲ, ಎಪ್ಪತ್ತು ದಿವಸ ಕಾದೆ. ಉತ್ಸವ
ಮುಗೀತು. ಇವತ್ತು ನಾನು ಊರಿಗೆ ಹೊರಡಬೇಕಾದ, ನೀರಾನೆ ಪ್ರಾಂತದ
ನಾಯಕನಿಗೆ ನೀವು ವಿದಾಯ ನುಡಿಯಬೇಕಾದ, ದಿವಸ. ಯಾವ ಕಸಿ
ವಿಸಿಯೂ ಇಲ್ಲದೆ ಬರಲಿ ಅಂತ ಅಮಾತ್ಯರಾಗಿ ತಿಳಿಸಿದ್ದಿರಿ. ಯಾವ ಕಸಿ
ವಿಸಿಯೂ ಇಲ್ಲದೆ ಈ ಆಸ್ಥಾನದಲ್ಲಿ ನಾನೀಗ ನಿಂತಿದ್ದೇನೆ.
"ನಮ್ಮ ಮಾಟ್ ನಮ್ಮನ್ನು ಕಾಯ್ತದೆ ಅನ್ನೋ ನಂಬಿಕೆಯಿಂದ ನಾವು
ಋಜುಮಾರ್ಗ ಹಿಡಿದೆವು. ನಮ್ಮ ಪ್ರಾಚೀನ ಕಟ್ಟಳೆ ಏನು ಹೇಳ್ತದೆ?
'ಬಡವರು ಮತ್ತು ದೊಡ್ಡ ಮನುಷ್ಯರು ಇಬ್ಬರಿಗೂ ಹಕ್ಕು ಇರಲೆಂದೇ ಮಹಾ
ಪ್ರವಾಹವನ್ನು ನಾನು ಸೃಷ್ಟಿಸಿದೆ' ಅಂತ ದೇವರು ಸಾರಿದ ಎಂದಲ್ಲವಾ ? ಲಿಪಿ
ಸುರುಳಿ ಏನು ಬೋಧಿಸ್ತದೆ? 'ಒಂದು ಮೊಳ ಬುನಿಗಾಗಿ ಆಸೆಬುರುಕನಾಗ
ದಿರು; ವಿಧವೆಯ ಹೊಲಕೆ ಅತಿಕ್ರಮಿಸಿ ನುಗ್ಗದಿರು. ಅತಿಕ್ರಮಣದಿಂದ
ಗಳಿಸುವ ಐದುನೂರು ಬಳ್ಳಕ್ಕಿಂತ ದೇವರು ನಿನಗೀನ ಒಂದು ಬಳ್ಳವೇ
ಮೇಲು,' ಹೀಗಲ್ಲವಾ? [ಮಹಾ ಅರ್ಚಕ ಇನೇನಿಯತ್ತ ನೋಡಿದ. ಆತ
ಭಯ ಭಕ್ತಿಯಿಂದ ಹತ್ತಿರಕ್ಕೆ ಬಾಗಿದಾಗ, ಏನನ್ನೋ ಉಸುರಿದ.] ಎಲ್ಲ ಕಡೆ
ಬೋಧನೆಗೆ ಮಾತ್ರ ಮೀಸಲಾಗಿರುವ ಈ ತತ್ವಗಳನ್ನು ನೀರಾನೆ ಪ್ರಾಂತದಲ್ಲಿ
ಅನುಷ್ಠಾನಕ್ಕೆ ತಂದಿದ್ದೇವೆ. ಅದು ತಪ್ಪೆ ಸ್ವಾಮಿ?"
ಇನೇನಿ ಗಟ್ಟಯಾಗಿ ಅಂದ :
"ಮಹಾ ಅರ್ಚಕರು ಅಪ್ಪಣೆ ಕೊಡಿಸಿದ್ದಾರೆ: ತೀರಾ ಕೆಳಮಟ್ಟದ ಈ