ಪುಟ:Mrutyunjaya.pdf/೫೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮ್ರತ್ಯುಂಜಯ ೫೪೩ ಮನುಷ್ಯನಿಗೆ ಪವಿತ್ರ ಕಟ್ಟಳೆಗಳನ್ನು ಉಚ್ಚರಿಸುವ ಹಕ್ಕಿಲ್ಲ !"

  "ಮಹಾಪರಾಧವಾಯಿತಲ್ಲವಾ ನನ್ನಿಂದ? ತಿಳೀದೆ, ಅದಕ್ಕಿಂತಲೂ ದೊಡ್ಡ ಒಂದು ತಪ್ಪು ಮಾಡಿದ್ದೇನೆ. ನಮ್ಮ ನೇಕಾರ ಅನ್ನು ಟೆಹುಟಿಯ ಯೋಧರ ಬಾಣಕ್ಕೆ ಬಲಿಯಾದ. ಅವನನ್ನು ಮಣ್ಣು ಮಾಡೋದಕ್ಕೆ ಮುಂಚೆ ನಮ್ಮೂರಿನ ಅರ್ಚಕ ಅಪೆಟ್ ಕೈಲಿ 'ಬೆಳಕಿಗೆ ಆಗಮನ' ಗ್ರಂಥ ಓದಿಸಿದ್ದೇನೆ."
  "ಬಡ ನೇಕಾರನ ಶವಸಂಸ್ಕಾರಕ್ಕೆ 'ಬೆಳಕಿಗೆ ಆಗಮನ' ಗ್ರಂಥ ವಚನ! ಇದು ದೈವದ್ರೋಹದ ಪರಮಾವಧಿ!”
  "ದೊಡ್ಡವರೆಲ್ಲ ಸತ್ತ ಮೇಲೆ ಕತ್ತಲೆಯಿಂದ ಬೆಳಕಿಗೆ ಬರ್ತಾರೆ. ಹುತಾತು ನಾದ ಬಡ ಅನ್ಸುವಿಗೂ ಆ ಭಾಗ್ಯ ಇರೋದು ನಾಯಸಮ್ಮತ ಅಲ್ಲವಾ?"
"ಇದು ತಲೆಹರಟೆ!"
"ಈಗಲೆ ಕೇಳೋದು ಮೇಲು. ಅಯ್ಯ, ನಮ್ಮ ಅರ್ಚಕ ಅಪೆಟ್ ಸಲ್ಲಿಸಿದ ದೂರು ಅಂತ ಅದೇನೋ ಹೇಳಿದಿರಲ್ಲ? ಅದನ್ನು ಯಾರು ತಂದು ಕೊಟ್ರು ?"
 "ಅದಕ್ಕೆಲ್ಲ ನಮ್ಮದೇ ವ್ಯವಸ್ಥೆ ಇದೆ.”
 "ಬಲ್ಲೆ, ಐಗುಪ್ತದಲ್ಲಿ ಗೂಢಚರ್ಯೆ ಅರ್ಚಕ ವೃತ್ತಿಯ ವೈಶಿಷ್ಟ್ಯ."
 "ಅಪರಾಧಿಯ ಅಂಬೋಣವೇನು ? ಈ ದೂರು ಸೃಷ್ಟನೆ ಅಂತಲೊ?"
 "ಹೀಗೆಯೇ ಹೇಳು ಅಂತ ಮಹಾ ಅರ್ಚಕರು ಆಜ್ಞಾಪಿಸಿದರೆ ಅದನ್ನು ಪಾಲಿಸುವ ಮನುಷ್ಯನೇ ಅಪೆಟ್. ಅದರಲ್ಲಿ ಸಂದೇಹವಿಲ್ಲ. ಆದರೆ ತಾವಾಗಿ ಅವರು ಆ ದೂರು ಕಳಿಸಿದ್ರು ಅನ್ನೋದನ್ನು ನಂಬಲಾರೆ. ಹೇಳಿ, ಈ ದೂರು ಯಾವಾಗ ಬಂತು?"
 ಇನೇನಿಯ ಧ್ವನಿ ಮತ್ತಷ್ಟು ಏರಿತು :
 "ನೀರಾನೆ ಪ್ರಾಂತಕ್ಕೆ ಹೋಗಿದ್ದ ರಾಜದೂತ ತಂದುಕೊಟ್ಟ."
ಮೆನೆಪ್‍ಟಾ ಸರಕ್ಕನೆ ಪ್ರತಿಷ್ಟತರ ಸಾಲೆನ ಹಿಂದೆ ನಿಂತಿದ್ದ ರಾಜದೂತ ನತ್ತ ನೋಡಿ ಕೇಳಿದ :
 "ರಾಜದೂತರೆ, ತಂದುಕೊಟ್ಟಿದು ನಿಜವಾ?" 

ರಾಜದೂತ ತಬ್ಬಿಬ್ಬಾದರೂ ತಕ್ಷಣವೇ ಸುಧಾರಿಸಿಕೊಂಡು, ಕಣ್ಣು