ಪುಟ:Mrutyunjaya.pdf/೫೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೪೪ ಮ್ರತ್ಯುಂಜಯ ಗಳನ್ನು ಮುಚ್ಚಿ ಗಟ್ಟಿಯಾಗಿ ಅಂದ:

  "ಹೌದು."
  "ಏನಪ್ಪ ಎಲ್ಲರೂ ಸುಳ್ಳು ಹೇಳ್ತಾರೆ ಅಂತ ನೀವು ಕೂಡಾ-? 

ಅವತ್ತು ನಮ್ಮ ದಳಪತಿ ಖೈಮಹೊಟೆಪ್‍ನ ಮನೇಲಿ ಊಟ ಮಾಡಿದಿರಿ, ವಿಶ್ರಾಂತಿ ಪಡೆದಿರಿ, ಸಾಯಂಕಾಲ ದೋಣಿ ಹತ್ತಿ ಮರುಪ್ರಯಾಣ ಬೆಳೆಸಿದಿರಿ. ಅರ್ಚಕ ನಿಮ್ಮನ್ನು ಕಾಣಲಿಲ್ಲ, ಯಾವ ದೂರನ್ನೂ ಒಪ್ಪಿಸಲಿಲ್ಲ. ನಿಜವಾ ?"

 ರಾಜದೂತನ ಮುಖ ಕಪ್ಪಿಟ್ಟಿತು. ನ್ಯಾಯಮೂರ್ತಿ ಗದರಿದ:

"ಹೀಗೆಲ್ಲ ಪ್ರಶ್ನೆ ಕೇಳೋದಕ್ಕೆ ಅನುಮತಿ ಕೊಡೋದಿಲ್ಲ! ಮುಂದು ವರಿಸು!"

  "ನ್ಯಾಯಮೂರ್ತಿಗಳೆ, ನೀವು ಅಮಾತ್ಯ ಪಾತ್ರದಲ್ಲಿದ್ದಾಗ, ನೀರಾನೆ ಪ್ರಾಂತದಿಂದ ಬಂದ ನನ್ನನ್ನು ಭೇಟಿಗೆ ಕರೆದಿದ್ದಿರಿ. ಮಹಾ ಅರ್ಚಕರು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡ್ತಿದಾರೆ ಅಂತ ಸೂಚ್ಯವಾಗಿ ನನಗೆ ತಿಳಿಸಿದಿರಿ. ಆಗ ನಾನು 'ನಮ್ಮೂರಿನ ಅರ್ಚಕ ಅಪೆಟ್ ತನ್ನ ಕೆಲಸ ಎಷ್ಟೋ ಅಷ್ಟು ಮಾಡ್ಕೊಂಡು ಹೋಗ್ತಾರೆ. ಮಂದಿರದ ಖರ್ಚು ವೆಚ್ಚ ನಾವು ನೊಡ್ಕೊಳ್ತೇವೆ' ಅಂದೆ. ನೀವು, 'ಅಷ್ಟೇ ಸುಲಭವಾಗಿ ದೇಶದ ವ್ಯಾಪ್ತಿಯಲ್ಲೂ ಆ ಸಮಸ್ಯೇನ ಬಗೆಹರಿಸೋದು ಸಾಧ್ಯವಿದ್ದರೆ!' ಅಂತ ಉದ್ಗಾರ ತೆಗೆದಿರಿ. ಹೌದೆ?”
  ಮಹಾ ಅರ್ಚಕ ಸುಟ್ಟುಬಿಡುವವನಂತೆ ಅಮಾತ್ಯನನ್ನು ದಿಟ್ಟಿಸಿದ. ಆಮೆರಬ್ ಹೇಪಾಟ್‌ನ ನೋಟವನ್ನು ಇದಿರಿಸಲು ಹೋಗಲಿಲ್ಲ. ಸಿಟ್ಟಾಗಿ ನುಡಿದ :
   "ಏನು ನೀನು ಹೇಳ್ತೀರೋದು ? ಕಲ್ಪನೆಯ ನಾವೆಯಲ್ಲಿ ವಿಹಾರ ಮಾಡ್ತಿದ್ದೀಯಾ?"
   "ನಿಜವಾದ ದೋಣಿಯಲ್ಲಿ ಐದು ಹಗಲು ಐದು ಇರುಳು ಪ್ರವಾಸ ಮಾಡಿ ಇಲ್ಲಿಗೆ ಬಂದೆ. ಇದಿರ್ಗೊಳ್ಳೋದಕ್ಕೆ ದೋಣಿಕಟ್ಟೆಗೆ, ನೀರಾನೆ ಪ್ರಾಂತದಿಂದ ಓಡಿ ಬಂದಿದ್ದ ಪ್ರಾಂತಪಾಲರನ್ನು ಅಮಾತ್ಯರು ಕಳಿಸಿದ್ರು. ರಾಜದ್ರೋಹಿಗೆ, ದೈವದ್ರೋಹಿಗೆ ಎಂಥ ಸ್ವಾಗತ! ಅವರು ನನ್ನ ಎರಡೂ