ಪುಟ:Mrutyunjaya.pdf/೫೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಮ್ರತ್ಯುಂಜಯ ೫೪೫

ಕೈ ಹಿಡಿದು ತೊಟ್ಟಲಾಡಿಸಿದ್ರು. 'ನಾನು ನಿಮ್ಮ ಬಂಧು. ನನ್ನ ಹೆಸರು ಹಿಡಿದು ಗೇಬು ಅಂತ ಕರೀರಿ' ಅಂದ್ರು. 'ನಮ್ಮೂರು ಲಿಷ್ಟ್‍‍‍‍‍‍‍‍ನಂಥ ಸುಂದರ ಪಟ್ಟಣ ಐಗುಪ್ತದಲ್ಲೇ ಬೇರೆ ಇಲ್ಲ. ಹುಣ್ಣಿಮೆ ರಾತ್ರೀಲಿ ನದೀಲಿದ್ಕೊಂಡು ಅದರ ಸೊಬಗು ನೋಡ್ಬೇಕು. ಮುಂದಿನ ಹುಣ್ಣಿಮೆಗೆ ಹೋಗ್ಬರೋಣ' ಅಂದ್ರು. (ಗೇಬುವಿನತ್ತ ಹೊರಳಿ) ಗೇಬು! ನಿಮ್ಮ ಸಂಸಾರದ ಎల్ల ಸಾಮಾನುಗಳನ್ನೂ ಎರಡು ದೊಡ್ಡ ಪೆಟಾರಿಗಳಲ್ಲಿ ಹಾಕಿ ಮುದ್ರೆ ಒತ್ತಿ, ಸುರಕ್ಷಿತವಾಗಿ ಇಟ್ಟಿದ್ದೇವೆ-ಅಂತ ನಾನು ಹೇಳಿದು ನೆನಪಿದೆಯಾ ?"
  ಅಮಾತ್ಯ : "ಇಂಥ ಅಡ್ಡ ಪ್ರಶ್ನೆಗಳಿಗೆ ಯಾರೂ ಉತ್ತರ ಕೊಡ ಬೇಕಾಗಿಲ್ಲ."
  ಮೆನೆಪ್‍ಟಾ: "ಏನು ಉತ್ತರ ಕೊಟ್ಟಾರು ಪಾಪ ! ಅಮಾತ್ಯರಿಗೆ ವಯಸ್ಸಾಯ್ತು, ಆಡಳಿತದ ಮೇಲಿನ ಬಿಗಿ ಸಡಿಲವಾಗಿದೆ ಅಂತ ಟೆಹುಟಿಯ ದೂರು; ಆಮೆರಬರನ್ನು ಮನೆಗೆ ಕಳುಹಿಸಿ ತಾನೇ ಅಮಾತ್ಯನಾಗಬೇಕು ಅನ್ನೋ(ಆಸೆ ಅವನಿಗೆ ; ಆಗಲೇ ಗುಟ್ಟಾಗಿ ಮಹಾ ಅರ್ಚಕರ ಪಕ್ಷ ವಹಿಸಿದ್ದಾನೆ-ಅಂತಲೂ ಹೇಳಿದ್ರು ನಮ್ಮ ಗೇಬು !.. [ತುಸು ತಡೆದು] ಅಮಾತ್ಯರು ಮಾಡಿದ ಏರ್ಪಾಟಿನಂತೆ ಮಹಾಪ್ರಭುವನ್ನೂ ನಾನು ಕಂಡೆ."
 ಅಮಾತ್ಯ : "ದೇವಸ್ವರೂಪನ ವಿಷಯ ನಾಯಸ್ಥಾನದಲ್ಲಿ ಪ್ರಸ್ತಾಪಿಸ ಬಾರದು."  

ಮೆನೆಪ್‍ಟಾ  : "ಪೆರೋನ ಆಯುರಾರೋಗ್ಯ ವರ್ಧಿಸಲಿ ! ರಾ ಪುತ್ರ ಅಪ್ಪಣೆ ಕೊಡಿಸಿದ್ರು: 'ತನ್ನ ಮಂದೆಯ ಸುಖದುಃಖ ಮಹಾಕುರುಬ ಚೆನಾಗಿ ಬಲ್ಲ. ದೊಡ್ಡ ಕುಟುಂಬ, ಸಣ್ಣಪುಟ್ಟು ವಿರಸ ಸ್ವಾಭಾವಿಕ. ಎಲ್ಲರ ತಂದೆಯ ಒಲವಿನ ಹೊನಲಿನಲ್ಲಿ ತಾಪಗಳು ಮಾಯವಾಗ್ತವೆ, ಗಾಯಗಳು ಮಾಯವಾಗ್ತವೆ, ಅಂತ. ಇನ್ನೂ ಒಂದು ಮಾತು ಅವರು ಹೇಳಿದ್ರು : ಜನರೊಡನೆ ಹೊಣೆಗೆಟ್ಟು ನರ್ತಿಸಿದವನು ಅರ್ಹ.' ಆ ವ್ಯಕ್ತಿ ಟೆಹುಟಿ ಅಂತ ನಾನು ತಿಳಿಕೊಂಡೆ."

  ಅಮಾತ್ಯ: "ನಿಲ್ಲಿಸು! ಪೆರೋ ಆಡಿದ ಮಾತುಗಳ ಬಗ್ಗೆ ನ್ಯಾಯ ಸ್ಥಾನದಲ್ಲಿ ಚರ್ಚೆ, ಟೀಕೆ ನಿಷ್‍ದ್ಧ...."

ಮೆನೆಪ್‍ಟಾ  : "ಸರು ಸದಸ್ಯರಿಗೆ ಔತಣ ಕೊಟ್ಟಿರಿ. ನನ್ನನ್ನೂ ಕರೆదిరి. ನಿಮ್ಮ ಹಿರಿಯ ಸದಸ್ಯ ಹೆಖ್ವೆಟ್ 'ಬಿರುಕು ಬಿರುಕೇ, ಸಕಾಲದಲ್ಲಿ ೩೫