ಪುಟ:Mrutyunjaya.pdf/೫೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪೬ ಮುಚ್ಚೋದು ಜಾಣತನ, ಶಾಂತಿ ಮುಖ್ಯ, ಶಾಂತಿ అంದ್ರು. ఒంದು ಪಕ್ಕದಲ್ಲಿ ಹೆಖ್ವೆಟ್, ಇನ್ನೊಂದು ಪಕ್ಕದಲ್ಲಿ ಗೇಬು. ಆಗ ನಾನು ನಿಮಗೆ ಬಹಳ ಸಮೀಪವಾಗಿದ್ದೆ, ಭಾರಿ ಔತಣ, ಸುರೆಯ ವಿಷಯದಲ್ಲಿ ಗೇಬು ಹೇಳಿದ್ರು: 'ಪೆರೋಗೆ ಅತ್ಯಂತ ಹಳೆಯ ಸುರೆಯೇ ಬೇಕು. ಪೂರ್ವಜರ ಕಾಲದ್ದು, ರಾ ಐಗುಪ್ತವನ್ನು ಆಳುತ್ತಿದ್ದಾಗಲೇ ಮಾಡಿದ ಸುರೆ! ಯಾವುದಕ್ಕೂ ఒంದು ಮಿತಿ ಬೇಡವೆ?'...." ಅಮಾತ್ಯ : “ಇಲ್ಲ, ಇಲ್ಲ! ವೈಯಕ್ತಿಕವಾದದ್ದೇನೂ ಇಲ್ಲಿ ಮಾತಾಡಬಾರದು.” ಮೆನೆಪ್ ಟಾ : “ನನ್ನ ಬಂಧು ಬಟಾನಿಗೆ ನಾನು ಹೇಳ್ದೆ :' ವೈಯಕ್ತಿಕನಾಗಿ ನನಗೆ ಏನು ಆಗ್ತದೆ ಅನ್ನೋದು ಮಹತ್ವದ್ದಲ್ಲ. ನೀರಾನೆ ಪ್ರಾಂತದ ಜನ ನೆಮ್ಮದಿಯಿಂದ ಬದುಕೋದು ಸಾಧ್ಯವಾಗಬೇಕು. ಇದಕ್ಕೆ ರಾಜಧಾನಿ ಆಸ್ಪದ ಇತ್ತರೆ ಎಲ್ಲರಿಗೂ ಹಿತ.” ಅಮಾತ್ಯ : “ಇದು ಬೆದರಿಕೆಯ ಮಾತು! ನಿಮಗಿಷ್ಟ ಬಂದಂತೆ ಬಾಳೋದಕ್ಕೆ ಆಸ್ಸದನೀಯದಿದ್ದರೆ ಅನಾಹುತವಾದೀತು ಅಂತಲೊ?” ಮೆನಪ್ ಟಾ : ಸರಳದ ಎರಡು ಪದಗಳಿಗೆ ನ್ಯಾಯಮೂರ್ತಿಯಣಾರು ವಿಸರೀತಾರ್ಥ ಕಲ್ಸಿದ್ದಾರೆ.” ಅಮಾತ್ಯ: “ನ್ಯಾಯಸ್ಥಾನವನ್ನು ನಿಂದಿಸುವ ಎದೆಗಾರಿಕೆ ! ಮೆನೆಪ್ ಟಾ! ನಿನ್ನದು ವಿಪರೀತ బుದ್ಧಿ. ಪಶ್ಚಾತ್ತಾಪ ಪಡಬೇಕಾದೀತು. ಜೋಕೆ!" ಮೆನೆಪ್ ಟಾ : “ಜೀವ ತೇದು ದುಡಿಯುವ ಜನರಿಗೆ ಅರೆಹೊಟ್ಟೆ, ಚಾಟಿ ಏಟು ; ಕೊಬ್ಬಿದ ಭೂಮಾಲಿಕರಿಗೆ ಅರಮನೆ ಪಲ್ಲಕಿ! ದರಿದ್ರರ ಶವಗಳ ಮೇಲೆ ತುಣುಕು ಬಟ್ಟೆಯೂ ಇಲ್ಲ; ಆದರೆ ಮಂದಿರದ ಸೋಮಾರಿ ಬೆಕ್ಕು ಸತ್ತಾಗ ಅದಕ್ಕೆ ಶವಲೇಪನ! ಅರ್ಚಕ ವರ್ಗದ ಕಾಮ ತೃಷೆಗೆ ದೇವ ಸೇವಿಕೆಯರ ಬಲಿ: ಮುದ್ದು ಮಕ್ಕಳ ತಾಯಂದಿರಾಗಬೇಕಾದ ಹೆಂಗೆಳೆಯರಿಗೆ ಮಂದಿರದ ಪವಿತ್ರ ಗೂಳಿ ಪವಿತ್ರ ಟಗರುಗಳ ಜತೆ ಕಡ್ಡಾಯ ಸಂಭೋಗ!” ಅಮಾತ್ಯ : "ಅಶ್ಲೀಲ ಪದಗಳನ್ನು ಆಡ್ತೀಯಲ್ಲ. తెల్ ಕೆಟ್ಟಿದೆಯಾ?” ಮೆನೆಪ್ ಟಾ : “ಕಂಡುದನ್ನು ಕಂಡಂತೆ ಹೇಳೋದು ತಪ್ಪೆ?"