ಅಮಾತ್ಯ : “ಇದು ಖಂಡಿತವಾಗಿಯೂ ಹುಚ್ಚುಚ್ಚಾರ...”
ಮೆನೆಪ್ ಟಾ : నిಮಗೆ ಬೇಡದನರಿಗೆ ಹುಚ್ಚ ಅನ್ನೋ ಬಿರುದು ಕೊಡ್ತೀರಿ!”
ಬೆಳಕು ಕಡಿಮೆಯಾಗಿತ್ತು. ಇನ್ನು ಮುಚ್ಚಂಜೆ, ಅದಾದ ಮೇಲೆ ఇರುಳು.
ಆಮೆರಬ್ ಗೆ ಚಿಂತೆ, ಸಿಡುಕು. ಈತ ನಿಲ್ಲಿಸುವ ಲಕ್ಷಣಗಳೇ ಕಾಣಿಸುತ್ತಿಲ್ಲವಲ್ಲ...
ಅಮಾತ್ಯ : ಆಯಿತೋ, ಮಾತನಾಡಿ ? ಮಹಾ ಅರ್ಚಕರಿಗೆ ಸಂಧ್ಯಾ ಪೂಜೆಗೆ ತಡವಾಗ್ತದೆ.”
ಮೆನಪ್ ಟಾ : " ಪೂಜೆಗೆ ಅಡ್ಡಿಯಾಗಲಾರೆ. ಅವರು ಹೋಗಿ ಬರಲಿ.”
ಅಮಾತ್ಯ: “ನಿನ್ನಿಂದಾಗಿ ಮಹಾಪ್ರಭು ಮಹಾರಾಣಿ ಎಲ್ಲರಿಗೂ ತೊಂದರೆ.”
ನ್ಯಾಯಸ್ಥಾನದಲ್ಲಿ ಪ್ರೇಕ್ಷಕರು ಗುಜುಗುಜು. ಸಾಮಾನ್ಯ ಪ್ರೇಕ್ಷಕರು ಜೀವ ತಳೆದು ತಮ್ಮೊಳಗೆ ಮಾತನಾಡತೊಡಗಿದರು. ಇಳಿದನಿಯಲ್ಲಿ ಆಮೆರಬ್ ಹೇಪಾಟ್ ವಿಚಾರ ವಿನಿಮಯ...ಸೆನೆಬ್ ಆಜ್ಞಪ್ತನಾಗಿ ಅತ್ತಿತ್ತ ಓಡಿದ.
ಧ್ವನಿ ಏರಿಸಿ ಆಮೆರಬ್ ಅಂದ :
“ಸದ್ದು! ಸದ್ದು! ಎಲ್ಲರೂ ನ್ಯಾಯಸ್ಥಾನದ ಪಾವಿತ್ರ್ಯ ಕಾಪಾಡ್ಬೇಕು. ದೀಪಗಳನ್ನು ಬೆಳಗೋದಕ್ಕೆ ಅನುಜ್ಞೆ ನೀಡಿದ್ದೇವೆ. ಅಪರಾಧಿ ಮುಂದುವರಿಸಿ ಬೇಗನೆ ಮುಗಿಸಲಿ."
ಮೆನೆಪ್ ಟಾ :
“ಉಸಕೃತನಾಗಿದ್ದೇನೆ. ఐಗುಪ್ತದ ಸಾಟಿ ಇಲ್ಲ ದ ಪ್ರಾಚೀನ ಸುಸಂಸ್ಕೃತ ನಾಗರೀಕತೆ. ನಮ್ಮ ಸಮಾಜ ವಿಸ್ತಾರ ಬುನಾದಿಯ ಮೇಲಿನ ಹತ್ತಾಳು ಎತ್ತರದ ಗೋರಿ. ಈ ಸೋಪಾನ ವ್ಯವಸ್ಥೆ ನಿಂತಿರೋದು ಸಹಸ್ರ ಸಹಸ್ರ ಶ್ರಮಜೀವಿಗಳ ಭುಜಗಳ ಮೇಲೆ ಎತ್ತರಕ್ಕೆ ಹೋಗ್ತಾ ಅಗಲಕಿರಿದು. ದುಡಿಸುವ ಕಾಸೀರುಗಳು.ಭೂಮಾಲಿಖರು, ವರ್ತಕರು, ಸೈನ್ಯ,