ಪುಟ:Mrutyunjaya.pdf/೫೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪೮ ಮೃಯತ್ಯುಂಜಯ ಆಡಳಿತಗಾರರು-ಅರ್ಚಕರು. ಸುಲಿಗೆಯ ಸೂತ್ರ ಈ ವ್ಯವಸ್ಥೆಯನ್ನು ಬಿಗಿದು ಕಟ್ಟಿದೆ.” ...ಕಂಚಿನ ದೀವಟಿಗೆಗಳು ಬರತೊಡಗಿದುವು. (ಹೊರಗೆ ಮಬ್ಬ ಗತ್ತಲು.) ದೀವಟಿಗೆಗಳನ್ನು ಇರಿಸುವ ಕೆಲಸ ಪೂರ್ಣವಾಗಲೆಂದು, ಮೆನೆಪ್ ಟಾ ಮಾತು ನಿಲ್ಲಿಸಿದ. ಎಷ್ಟೋ ವರ್ಷಗಳ ಹಿಂದೆ ಗಡಿಯಲ್ಲಿ ಯುದ್ಧವಾದಾಗ ದೀಪಗಳ ಬೆಳಕಿನಲ್ಲಿ ಅಮಾತ್ಯ ಕಾರ್ಯನಿರತನಾಗಿದ್ದ . ಕೆಲವರಿಗೆ ಅದರ ನೆನಪಿತ್ತು, ಆದರೆ ನ್ಯಾಯಸ್ಥಾನ ಆ ರೀತಿ ಕಾರ್ಯಕಲಾಪ ನಡೆಸಿದು ಅದೇ ಮೊದಲು. ಆ ಬೆಳಕಿನಲ್ಲಿ ಅಲ್ಲಿದ್ದವರು ದಿಟ್ಟಿಸಿ, ಮುಂದುವರಿಸಲು ನ್ಯಾಯ ಮೂರ್ತಿ ಸೂಚನೆ ನೀಡುವುದಕ್ಕೆ ಮೊದಲೇ ಮೆನೆಪ್ ತಟಾ ಮುಗುಳುನಕ್ಕು ಮಾತನಾಡಿದ: - “ಸುಲಿಗೆಯ ಸೂತ್ರ ಈ ವ್ಯವಸ್ಥೆಯನ್ನು ಬಿಗಿದು ಕಟ್ಟಿದೆ, ಅಂದೆ. ನಮ್ಮ ಪ್ರಾಚೀನರ ಮಾತಿನ್ಂತೆ,ಮುಂಗೈ ಜೋರಿನಿಂದ ಏನನ್ನೂ ಸಾಧಿಸಲು ಆಗುವುದಿಲ್ಲ, ಆದರೆ ನಮ್ಮ ನಡವಳಿಕೆ ಆ ಮಾತನ್ನು ಸುಳ್ಳು ಮಾಡಿದೆ. ಕಂದಾಯ ವಸೂಲಿ, ಗೋರಿ ನಿರ್ಮಾಣ, ಗಣಿ ಕೆಲಸ ಇವೆಲ್ಲ ಬಲಪ್ರಯೋಗ ದಿಂದಲೇ ನಡೀತವೆ. ದಾಸದಾಸಿಯರ ಬಲಾತ್ಕಾರದ ದುಡಿಮೆಯಿಂದ ನಮ್ಮಲ್ಲಿ ಸಂಪತ್ತು ಉತ್ಪನ್ನವಾಗ್ತದೆ. ఇದು ಸ್ವರ್ಣಪಿಶಾಚಿಗಳ ಸಮಾಜ... ಮನುಷ್ಯ ಜೀವಕ್ಕೆ ಇಲ್ಲಿ ಬೆಲೆ ಇಲ್ಲ, ಹೋರಾಟದಲ್ಲಿ ಸೆರೆಸಿಕ್ಕಿದವರು ನಮ್ಮ ವ್ಯವಸ್ಥೆಯ ಗುಲಾಮರಾಗಿದ್ದಾರೆ. ಅವರನ್ನು ಕೆಡವಿದಾಗ ಅವರ ಬಲಗೈಯನ್ನೋ ಯೋని ಯನ್ನೋ ಕತ್ತರಿಸಿ ನಮ್ಮ ವೀರಯೋಧರು ಅರಮನೆಯ ಲೆಕ್ಕಿಗನಿಗೆ ತೋರಿಸಿ ದಾಖಲೆ ಇದಿಸೋದಕ್ಕೆ. ಆ ಸಾಧನೆಯ ಪ್ರಮಾಣಕ್ಕೆ ಅನು ಸಾರವಾಗಿ ಬಹುಮಾನ! ಇದಲ್ಲವಾ ನಾಗರಿಕತೆ?...” ಅಮಾತ್ಯ ಸಿಟ್ಟು ಬೆ೦ಕಿಯಾಗಿ ಗುಡುಗಿದ : “ಸಾಕು ಮಾಡು! ನೀನು ಹೇಳೋದಕ್ಕೂ ಈ ವಿಚಾರಣೆಗೂ ಸಂಬಂಧವಿಲ್ಲ !" ಅದನ್ನು ಗಮನಿಸದೆ ಮೆನೆಪ್ ಟಾ ಮುಂದುವರಿದ: