ಪುಟ:Mrutyunjaya.pdf/೫೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೫೦ ಮೃತ್ಯುಂಜಯ ನೀರವತೆ, ಗಾಳಿ ಆಡಲಿಲ್ಲ, ಪಂಜುಗಳು ಢಾಳಾಗಿ ಉರಿದುವು. ದೀರ್ಘವೆನಿಸಿದ ಕ್ಷಣಗಳು.. (ಪೆರೋ ಕುಳಿತಲ್ಲಿ ಹೊರಳಿದ. ಮಹಾ అರ್ಚಕ ತನ್ನ ಅಧಿಕಾರ ದಂಡವನ್ನು ನೆಲದಮೇಲೆ ತುಸು ಮುಂದಕ್ಕೆ ಚಲಿಸಿದ. ಮುಖಗಳು ಕೆಸ್ಸಿಟ್ಟಿದರೂ ಅರ್ಚಕ ಪರಿವಾರ ಅಮಾತ್ಯನತ್ತ ನೋಡಿತು. ಕಳಾಹೀನರಾಗಿದ್ದ ಪ್ರತಿಷ್ಠಿತರು ತಮ್ಮೆದುರು ನೆಲದ ಮೇಲೆ ದೃಷ್ಟಿ ನೆಟ್ಟರು. ಪ್ರೇಕ್ಷಕರ ಮುಖಗಳು ಮಾತ್ರ ಏನೋ ಅರ್ಥವಾದಂತೆ ಬೆಳಗಿದುವು. ಆಮೆರಬ್ ತನ್ನ ಶ್ವಾಸೋಚ್ಛ್ವಾಸವನ್ನು ಕ್ರಮಬುದ್ಧಗೊಳಿಸುತ್ತ ಈಗ ಆದುದೇನು ಎಂದು ಗ್ರಹಿಸಲು ಯತ್ನಿಸಿದ, ಈ ಮೆನೆಪ್ ಟಾನೇ ತೀರ್ಪು ಕೊಟ್ಟಂತಾಯಿತಲ್ಲ. ಸದಾ ಕಾಲವೂ ಎಲ್ಲರೂ ನೆನಪಿಡುವಂಥ ದೀರ್ಘ ತೀರ್ಪನ್ನು ತಾನು ನೀಡಬೇಕು ಎಂದುಕೊಂಡಿದ್ದೆ . ಆದರೆ_ಆದರೆ... ಯೋಚಿಸಿದ್ದೆಲ್ಲ ನೆನಪಿನಿಂದ ಮರೆಯಾಗಿತ್ತು. (ಗಂಟಲು ಕಟ್ಟಿಕೊಂಡಿದೆ. ಮಾತು ಸರಿಯಾಗಿ ಹೊರಡದು. ಆದರೆ ಇನ್ನು ತಾನು ತಡ ಮಾಡಬಾರದು. ಮಹಾ ಅರ್ಚಕ ತನ್ನನ್ನೇ ನೋಡುತ್ತಿದಾನೆ.ಪೆರೋ...) ಆಮೆರಬ್ ಆರಂಭಿಸಿದ: “ ಘೋರ ಅಪರಾಧಗಳನ್ನು...” ಆಡಿದ ಪದಗಳು ಆತನಿಗೇ ಕೇಳಿಸಲಿಲ್ಲ, ತುಟಿಗಳನ್ನು ನಾಲಿಗೆಯಿಂದ ಸವರಿ, ಉಗುಳು ನುಂಗಿ ಮತ್ತೆ ಅದೇ ಪದಗಳನ್ನು ಉಚ್ಚರಿಸಿದ: “ ಘೋರ ಅಪರಾಧಗಳನ್ನು...ಮಾಡಿದವರಿಗೆ ನ್ಯಾಯಸ್ಥಾನ ವಿಧಿಸುವ ಶಿಕ್ಷೆಯ ವಿವರಗಳು ಹೀಗಿವೆ." ಆಮೆರಬ್ ಮತ್ತೊಮ್ಮೆ ತುಟಿಗಳನ್ನು ನಾಲಿಗೆಯಿಂದ ಸವರುತ್ತ ಸೆನೆಬ್ ನತ್ತ ನೋಡಿದ . - ಹಿರಿಯ ಲಿಪಿಕಾರ ತೆರೆದು ಸಿದ್ಧಗೊಳಿಸಿದ್ದ ಲಿಪಿಸುರುಳಿಯನ್ನೆತ್ತಿಕೊಂಡು, ಧ್ವನಿಯ ಕಂಪನವನ್ನು ಮರೆಮಾಚಲು ಯತ್ನಿಸುತ್ತ ಓದಿದ : • ಮೂಗು,ಕೈ,ನಾಲಗೆ ಕತ್ತರಿಸಿ ಅಂಗಛೇದನ;ಖಡ್ಗದಿಂದ ಸೀಳುವುದು : ಶೂಲ ಪ್ರಯೋಗ: ಜೀವಂತ ದಹನ : ಶಿರಚ್ಛೇದನ: ಬದುಕಿರು ವಾಗಲೇ ಶವಲೇಪನ' : ಸ್ವಹಸ್ತದಿಂದ ಮರಣ..” ಓದಿ ಮುಗಿಸಿ ಸೆನೆಬ್ ತುಸು ಹಿಂದಕ್ಕೆ ಸರಿದ.