ಪುಟ:Mrutyunjaya.pdf/೫೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೫೨ ಮ್ರುತ್ತ್ಯುಂಜಯ

ಅಧಿಕಾರ ದಂಡವನ್ನು ಆತ ಬಿಗಿಯಾಗಿ ಹಿಡಿದುಕೊಂಡ. ಈಗ ತುಸು ಮೇಲೆ ಎನಿಸಿತು. ಅಮೆರೆಬ್: "ತಟ್ಟಿದ ಕಳಂಕವನ್ನು ಈ ನ್ಯಾಯಸ್ಥಾನ ತೊಡೆದು ಹಾಕ್ತದೆ! ಈತ ಚಾಪೆಯ ಕೆಳಗಿನ ಹಾವು! ಈ ಹಾವನ್ನು ಸಾಯಿಸಬೇಕು! ನೀರಾನೆ ಪಾಂತದ ಬಂಡಾಯಿ ನಾಯಕ ಬಡ ರೈತ ಮೆನೆಪ್ ಟಾಗೆ, ದೇವರೂಪ, ಪೆರೋ ಪೇಪಿಯ ಈ ನ್ಯಾಯಸ್ಥಾನ ಶಿರಚ್ಛೇದನದ ಶಿಕ್ಷೆ ವಿಧಿಸ್ತದೆ.... ಒಡೆಯನ ವಿರುದ್ಧ ಬಂಡಾಯವೆದ್ದವನಿಗೆ ಅಂತ್ಯ ಸಂಸಾರವಿಲ್ಲ. ಪ್ರದರ್ಶನದ ಬಳಿಕ ಶವ ಮೊಸಳೆಗಳಿಗೆ ಆಹಾರವಾಗ್ತದೆ....ಪೆರೋನ ಆಯುರಾರೋಗ್ಯ ವರ್ಧಿಸಲಿ !" ಅಧಿಕಾರ ದಂಡದಿಂದ ವೇದಿಕೆಯ ನೆಲವನ್ನು ಕುಟ್ಟಿ ಅಮಾತ್ಯ ಎದ್ದ. ಪೆರೋ, ಪರಿವಾರ, ಮಹಾ ಅರ್ಚಕ ಹಾಗೂ ಬಳಗ, ಟೆಹುಟಿ, ಗೇಬು ಮತ್ತಿ ತರರು-ಎಲ್ಲರೂ ಎದ್ದರು. ಪ್ರತಿಷ್ಠಿತರಿಂದ ಘೋಷ ಹೊರಟಿತು.: "ಪೆರೋನ ಆಯುರಾರೋಗ್ಯ ವರ್ಧಿಸಲಿ!” ದಳಪತಿಯೂ ಮತ್ತಷ್ಟು ಭಟರೂ ಧಾವಿಸಿ ಬಂದರು, ಮರಣದಂಡನೆಗೆ ಗುರಿಯಾದವನನ್ನು ಸುತ್ತುವರಿಯಲು.

ಮೆನೆಪ್ಟಾನ ತುಟಿಗಳ ಮೇಲೆ ಮೂಡಿದ ಮಂದಹಾಸ ಕರಗಲೇ ಇಲ್ಲ. ಘೋ‍‍‍‍ಷ ಮೊಳಗುತ್ತದೆ. ಶಿರಚ್ಛೇದನದ ಶಿಕ್ಷೆ ಎಂದನಲ್ಲ? ('ಚಾಪೆಯ ಕೆಳಗಿನ ಹಾವು-ಅಸಹ್ಯಕರ ಹೋಲಿಕೆ) ಶಿರಚ್ಛೇದನ...ಈಗಲೊ ? ಮತ್ತೆಯೊ ? ಅಂತೂ ಮುಗಿಯಿತು....ದೊಡ್ಡ ಕತೆ ಮುಗಿಯಿತು.ಅವರೆಲ್ಲ ಹೊರಟರು. ಈ ಸಾಮಾನ್ಯ ಜನ ಹೋಗುತ್ತಿಲ್ಲ.( ಓ ಬಟಾ, ಓಬೆಕ್-ಔಟಿ, ರಾಮೇರಿ, ನೆಫಿಸ್ ) ಮೆನ್ನ ಆಗಲೇ ಹೊರಬಿದ್ದನೇನೋ...ಬಂಧುಗಳಿಗೆ ಆತ ಸುದ್ದಿ ತಿಳಿಸಬೇಕು....ಹಿಂದಿನ ರಾತ್ರೆ ತಪ್ಪಿಸಿಕೊಂಡು ಹೋಗಲು ಒಪ್ಪಿದ್ದರೆ-.... "ಸಿಂಹವಾಗಿ ಬಂದವನು”...... ಋಜುಮಾರ್ಗ-ಕಡೆಯವರೆಗೂ ಆ ಮಾರ್ಗ ದಲ್ಲೇ ನಡೆದೆ- ಅಮಾತ್ಯನ ಹಿಂದೆ ಹೋಗಿದ್ದ ಸೆನೆಬ್ ಮತ್ತೆ ವೇದಿಕೆಗೆ ಬಂದು ದಳಪತಿ ಯತ್ತ ನೆನೀಡಿ ಕೂಗಿ ಹೇಳಿದ: