ಪುಟ:Mrutyunjaya.pdf/೫೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಮೃತ್ತ್ಯುಂಜಯ ೫೫೩

"ಡಂಗುರ ಸಾರಿಸ್ತೆನೆ! ಜನರೆಲ್ಲ ಅರಮನೆಯ ಆಟದ ಬಯಲಿಗೆ ಬರಲಿ ವ್ಯವಸ್ಥೆ ನೋಡಿಕೊಳ್ಳೋದಕ್ಕೆ ಬಕಿಲ ನಿಯೋಜಿತನಾಗಿದ್ದಾನೆ. ಪೆರೋ, ಮಹಾ ಅರ್ಚಕರು, ಅಮಾತ್ಯರು, ದಂಡ ನಾಯಕರು, ಸರುಸದಸ್ಯರು, ಪ್ರಾಂತಪಾಲರು-ಎಲ್ಲ ಮಹಾಮನೆಯ ಉಪ್ಪ ರಿಗೆಯಲ್ಲಿ ನಿಂತು ನೋಡ್ತಾರೆ. ಹೊತ್ತಿನಲ್ಲೇ ಇವನನ್ನು ವಧಸ್ಥಾನಕ್ಕೆ ಏಳಕೊಂಡು ಬಾ.”
ವಧಸ್ಥಾನಕ್ಕೆ....ಸ್ವಲ್ಪ ಹೊತ್ತಿನಲ್ಲೇ...... ಅವನನ್ನು...'ನಾಯಕರೆ.' ಎನ್ನುತ್ತ ಕಪಟ ವಿನಯ ತೋರಿಸುತ್ತಿತ್ತು ಕಾಣಿಕೆ' ಬಯಸಿದ ಆ ನರಜಂತು. ಒಂದು ರೀತಿಯಲ್ಲಿ ಇದು ಮೇಲು. ಈ ಕಾರಿರುಳಿನಲ್ಲೇ ಮುಗಿದು ಹೋಗು ತ್ತದೆ. ರಾಮೆರಿ,ಬಟಾ,ಬೆಕ್ , ಅಹೂರಾ...ನೀವೆಲ್ಲ ಸುರಕ್ಷಿತವಾಗಿ ಊರಿಗೆ ಮರಳಬೇಕು.' ಮೆನ್ನ-ಮೆನ್ನ-ಇಷ್ಟುಹೊತ್ತಿಗೆ ಸುದ್ದಿ ತಿಳಿಸಿರ್ತಾನೆ....

ಮೇಲ್ವಿಚಾರಣೆಗಾಗಿ ಬಕಿಲ ನಿಯೋಜಿತನಾಗಿದ್ದಾನೆಂದು ಅರಮನೆಯ ಕಾವಲು ಪಡೆಯ ಮುಖ್ಯಸ್ಥನಿಗೆ ಸಿಟ್ಟು. ಜತೆಗೆ, ಹೋಗಲಿ ಶ್ರಮ ತಪ್ಪಿತುಎಂದು ಸ್ವಲ್ಪ ಸಮಾಧಾನ. ಹೊರಹೋಗಲು ನಿರಾಕರಿಸಿ, ಮೆನೆಪ್ಟಾನನ್ನು ನೋಡುತ್ತ ನಿಂತ ಸಾಮಾನ್ಯ ಜನರೆಡೆಗೆ ಹೊರಳಿ ದಳಪತಿ ಗದರಿದ : "ಹಿರಿಯ ಲಿಪಿಕಾರ ಹೇಳಿದು ಕೇಳಿಸ್ಥಿಲ್ಲವಾ ನಿಮಗೆ ? ಇಲ್ಲೇನು ಕೋತಿ ಕುಣಿಸ್ತಿದೀವಾ ? ನಡೀರಿ ಬಯಲಿಗೆ !” ಹೊರಗೆ ಡಂಗುರ. ಅರಮನೆಯ ಆವರಣದಿಂದಲೇ ಸ್ವರ : "ಕೇಳಿರಿ! ಕೇಳಿರಿ! ನೀರಾನೆ ಪ್ರಾಂತದ ಬಂಡಾಯಗಾರ ನಾಯಕ ಮರಣ ದಂಡನೆಗೆ ಗುರಿಯಾಗಿದ್ದಾನೆ. ಶಿರಚ್ಛೇದನ ನೋಡಲು ಜನರೆಲ್ಲ ಅರ ಮನೆಯ ಆಟದ ಬಯಲಿನಲ್ಲಿ ಈಗಲೇ ನೆರೆಯಬೇಕೂಂತ ಆದೇಶ ನೀಡಲಾಗಿದೆ. ಕೇಳಿರಿ! ಕೇಳಿರಿ!"