ಪುಟ:Mrutyunjaya.pdf/೫೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



೫೫೪

ಮೃತ್ಯುಂಜಯ

ನ್ಯಾಯಸ್ಥಾನದ ಹೊರಗೆ ನಿಂತಿದ್ದ ಶೀಬಾ ಪಾಶ್ವ್ರದಾರದಿಂದ ಮೆನ್ನ ಆಗಲೆ ಹೊರಬಿದ್ದು ಓಡಿಹೋದದನ್ನು ಕಂಡಿದ್ದಳು. ಕಪ್ಪಿಟ್ಟಿದ್ದ ಮುಖ. ಯಾಕೊ ಭಯವೆನಿಸಿತ್ತು. ಪ್ರತಿಷ್ಠಿತರು ನಾಯಸ್ಥಾನದಿಂದ ಹೊರಬರತೊಡಗಿದರು. (ಅಮಾತ್ಯರು ಮೊದಲಾದವರು ಇನ್ನೊಂದು ಬಾಗಿಲಿನಿಂದ ಅರಮನೆಯತ್ತ ಹೋದರು.) ತೀರ್ಪು ಇಂಥದೇ ಇದ್ದೀತೆಂದು ಶೀಬಾ ಊಹಿಸಿಕೊಂಡಳು. ಕಣ್ಣು ಕತ್ತಲಿನ ಅನುಭವ. ಅಷ್ಟರಲ್ಲೇ ಸುದ್ದಿಯ ಅಲೆ ರಭಸದಿಂದ ಬಂತು. ಅವಳ 'ಅಯ್ಯೋ ' ಆರ್ತನಾದ ಗಂಟಲಲ್ಲೇ ಇಂಗಿತು. ಅವುಹುಗಚ್ಚಿ ಕಸಾಯಿ ಮನೆಯಾಚೆಗಿನ ತನ್ನ ಹಟ್ಟಿಯತ್ತ ಧಾವಿಸಿದಳು. ಹೋಗುತ್ತ ಕಾತರ ಭಾವದಿಂದ ತನ್ನೆಡೆಗೆ ನೋಡಿದ ಪರಿಚಾರಕ ಪರಿಚಾರಿಕೆಯರಿಗೆ, ಶಿರಚ್ಛೇದನ್ನ ಎಂದು ಮೂಕ ಭಾಷೆಯಲ್ಲಿ ನುಡಿದಳು. ಮುಗುಲು ಹಟ್ಟಿಯ ಹುಡುಗಿ ಎತ್ತಿಕೊಂಡಿದ್ದ ಮಗು ತಾಯಿಯನ್ನು ಕಂಡೊಡನೆ ಇತ್ತ ಜಿಗಿಯಿತು. ಕತ್ತಲಲ್ಲಿ ಮೂಲೆಯೂಡಿಸತೊಡಗಿದಳು ಕಣೀರಿನ ಅಣೆಕಟ್ಟು ಬಿರಿಯಿತು. ಇದೇನು ?-ಎಂದು ರಂಪ ಮಾಡಿತು ಮಗು, ಮೊಲೆ ಚೀಪಲು ನಿರಾಕರಿಸಿ.. ಹೊರಗೆ ಪ್ರಾಂಗಣದ ಬೆಳಕಿನಲ್ಲಿ ಈಟಿಮೊನೆ ಚಕಚಕಿಸಿತು. ಗಂಡ. " ಶೀಬಾ. " " ಹ...." " ಗೊತ್ತಾಯ್ತಾ ? " " ಹ... " " ನಾನು ಬಯಲಿಗೆ ಹೋಗ್ತೇನೆ." " ನಾನು ಅಲ್ಲಿರ್ತೇನೆ. ಮಗು ಹಾಲು ಕುಡೀತಾ ಇಲ್ಲ. ಕುಡಿಸಿ ಹೊರಡ್ತೇನೆ " " ಹೂಂ....." “ ಏನಾದರೂ ಮಾಡ್ತೀಯಾ ?” “ ಯಾವುದು ?”