ಪುಟ:Mrutyunjaya.pdf/೫೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೫೬

ಮೃತ್ಯುಂಜಯ

ಔಟ ತಿಳಿಯ ಬಯಸಿದ :
"ತೀರ್ಪು ಕೊಟ್ಟರಾ ? ಅಣ್ಣ ಎಲ್ಲಿ ?"
ಶೀಬಾ ಮಾತನಾಡಲಿಲ್ಲ. ಮಗ್ಗುಲು ಹಟ್ಟಿಗೆ ಹೋಗಿ ಮಗುವನ್ನು
ಬಿಟ್ಟು ಬಂದಳು.
ಕಾತರದ ಧ್ವನಿಯಲ್ಲಿ ಔಟನೆಂದ :
"ತಂಗಿ,ನಿಜ ಸಂಗತಿ ತಿಳಿಸು."
ಒಳಗಿನ ಯಾತನೆಯನ್ನು ಹತ್ತಿಕ್ಕಿ ಶೀಬಾ ತಡೆತಡೆದು ಮಾತನಾಡಿದಳು:
"ಬಟಾ ಅಣ್ಣ ಇನ್ನೂ ನಾಯಕರನ್ನು ನೋಡಿಲ್ಲ....ನಾವು ಆಟದ
ಬಯಲಿಗೆ ಹೋಗ್ಬೇಕು....ಅಲ್ಲಿಗೆ ಅವರನ್ನು ತರ್ತಾರೆ...”
“ ನಾಯಕರನ್ನು ಬಯಲಿಗೆ?”
" ಹ್ಞ."
ಕಂಪಿಸುವ ಸ್ವರದಲ್ಲಿ ಬೆಕ್ ಅಂದ :
“ ಅಲ್ಲಿಯೇ ಅಲ್ಲವಾ ವಧಸ್ಥಾನ ಇರೋದು ?”
ಉತ್ತರವೀಯುವ ಗೊಡವೆಗೆ ಹೋಗದೆ ಶೀಬಾ ನುಡಿದಳು :
"ಬಯಲಲ್ಲಿ ಕತ್ತಲೆ. ದೂರ ಇರೋಣ. ಮೆನ್ನಯ್ಯ ಬಟಾ అಣ್ಣನಿಗೆ
ಸುದ್ದಿ ತಿಳಿಸೋದಕ್ಕೆ ಹೋಗಿದ್ದಾರೆ. ನೀವು ಅವರನ್ನು ಕಂಡು__"
ಔಟ ಅವಸರಪಡಿಸಿದ.
“ಹ್ಞ.ಹ್ಞ.ಹೋಗೋಣ."
" ಗುರುತು ಸಿಕ್ಕಿದರೆ ಅಪಾಯ. ನಾನು ಬಳಸುದಾರೀಲಿ ಕರಕೊಂಡು
ಹೋಗ್ತೇನೆ. ನನ್ನ ಹಿಂದೆ ಹತ್ತು ಹತ್ತು ಮಾರು ದೂರದಲ್ಲಿ ಒಬ್ಬೊಬ್ಬ
ರಾಗಿ ಬನ್ನಿ." * * * *
ಗರೋದ್ಯಾನದ ಮೂರು ಮೂಲೆಗಳಲ್ಲಿ, ಪ್ರವೇಶದ್ವಾರಗಳಿಂದ ದೂರ
ವಾಗಿ, ಅಬ್ಟು, ಯಾತ್ರಿಕರು ಮೂರು ಗುಂಪುಗಳಾಗಿ ಕುಳಿತಿದ್ದರು. ಬಟಾ
ಇದ್ದ ತಾಣವನ್ನು ಮೆನ್ನ ಸವಿಾಪಿಸಿದ ಮೇಲೆ ಉಳಿದವರೂ ಅಲ್ಲಿಗೆ ಬಂದರು.
బಟಾ ಒಬ್ಬನನ್ನೇ ಮೆನ್ನ ಸ್ವಲ್ಪ ದೂರ ಕರೆದೊಯ್ದ ಎಂದು ಇತರರಿಗೆ