ಪುಟ:Mrutyunjaya.pdf/೫೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



೫೫೮

ಮೃತ್ಯುಂಜಯ

ಅರ್ಧವೃತ್ತಾಕಾರದ ಬಯಲು.ನೇರ ಅಂಚಿನ ಒಂದು ಮೂಲೆಯಲ್ಲಿ
ಅರಮನೆ ಉಪ್ಪರಿಗೆಯ.ಇನ್ನೊಂದು ಮೂಲೆಯಲ್ಲಿ ವಧಸ್ಥಾನ.ನಾಲ್ಕು
ಕಡೆಗಳಿಂದಲೂ ಮೆಟ್ಟಲುಗಳು ಮೇಲಕ್ಕೆ ಸಾಗಿದ್ದವು, ಅಗಲ ಕಿರಿದಾಗುತ್ತ.
ಎರಡಾಳೆತ್ತರದಲ್ಲಿ ನಾಲ್ಕು ಜನ ನಿಲ್ಲುವಷ್ಟು ಸಮತಟ್ಟು ಸ್ಪಳ. ಅಲ್ಲಿ ಎರಡು
ತುದಿಗಳಲ್ಲಿ ಕಲ್ಲನ್ನು ಎತ್ತರಿಸಿ ಅಡ್ಡವಾಗಿ ಮರದ ದಿಮ್ಮಿ ಇರಿಸಿದ್ದರು,
ಉಪ್ಪರಿಗೆಗೆ ಮುಖಮಾಡಿ.
ವಧಸ್ಥಾನದ ಬಳಿ ನೂರಾರು ಪಂಜುಗಳು ಉರಿಯುತ್ತಿದ್ದುವು.
ಉಪ್ಪರಿಗೆಯ ಬಳಿಯಲ್ಲೂ ಬೆಳಕು.ನೇರ ಅಂಚಿನುದ್ದಕ್ಕೂ ಯೋಧರ ಸಾಲು.
ಹೊಳೆಯುವ ಈಟಿಗಳು. ಇವರೆಲ್ಲ ಸೈನ್ಯ ಗಡಿಯಿಂದ ಬಂದವರು.ಅರಮನೆಯ
ಕಾವಲು ಭಟರೂ ಅಲ್ಲಿದ್ದರು. ಬಯಲಿನಲ್ಲಿ ಸಹಸ್ರ ಸಂಖ್ಯೆಯನ್ನೂ ವಿಾರಿ
ನೆರೆಯತೊಡಗಿದ್ದ ಜನರೆಡೆಗೆ ಅವರು ಕೂಗಿ ನುಡಿಯುತ್ತಿದ್ದರು :
“ಸದು ಮಾಡ್ಬೇಡಿ! ಪೆರೋ ಬರುವ ಹೊತ್ತಾಯು!”
ವ್ಯೂಹ ರಚನೆ ಬಕಿಲನದು. ಟೊಂಕದಲ್ಲಿ ಕಠಾರಿ ತೂಗಹಾಕಿ,
ಕೈಯಲ್ಲಿ ಈಟಿ ಹಿಡಿದು, ಆತ ಅತ್ತ ಇತ್ತ ನಡೆಯುತ್ತಿದ್ದ, ಅವನ ಏಕ
ದೃಷ್ಟಿ ಬಯಲಿನ ಪ್ರವೇಶದ್ವಾರದ ಮೇಲೆ ನೆಟ್ಟತು. ಕಳೆದು ಹೋದ ಕಣ್ಣಿನ
ಕೆಳಭಾಗದ ಕೆನ್ನೆ ಸಮನೆ ಕಿವಿಚುತ್ತಿತ್ತು.
(ದಂಡಿನ ನಾಲ್ವರು 'ಐವತ್ತರ ಶ್ರೇಷ್ಟ'ರಿಗೆ ಕೋಷ__ಇದ್ದಕ್ಕಿದ್ದಂತೆ
ಬಕಿಲನನ್ನು ತಮ್ಮ ಮೇಲಣ ಅಧಿಕಾರಿಯಾಗಿ ಮಾಡಿದರಲ್ಲ ಎಂದು. ಇವತ್ತಿನ
ಮಟ್ಟಿಗಷ್ಟೇ ಇದ್ದೀತು ಎಂಬ ಭಾವನೆ. ಅದರಿಂದ ಒಂದಿಷ್ಟು ಸಮಾಧಾನ.
'ನೀರಾನೆ ಪ್ರಾಂತಕ್ಕೆ ಹೋಗಿ ಕಣ್ಣು ಕಳೆಕೊಂಡು ಬಂದವನು.ಇದೊಂದು
ಗೌರವ ಅಂತ ಹೀಗೆ ಮಾಡಿದ್ದಾರೆ.' ಮಾರನೆಯ ದಿನ ದಂಡಯಾತ್ರೆ.
ಇವತ್ತು ಪೂರ್ತಿ ವಿರಾಮ ದೊರೆಯಬೇಕಿತ್ತು. ಬಂಡಾಯಗಾರ ನಾಯಕನ
ಶಿರಚ್ಛೇದನ ಅಂತ ಈ ಹೆಚ್ಚಿನ ಕೆಲಸ.')
ಬಯಲಿನ ವರ್ತುಲ ಅಂಚಿನಲ್ಲಿ ದೂರ ನಿಂತರು అಬ್ಟು ಯಾತ್ರಿಕರು.
ಬಕಿಲನನ್ನು ಮೊದಲು ಗುರುತಿಸಿದವರು ರಾಮೆರಿಪ್ಟಾ, ಬಟಾ ಮತ್ತು
ಮೆನ್ನ. ಮುಂದೆ ಉಳಿದವರೂ "ಹೌದು, ಅವನೇ,"ಎಂದರು.