ಪುಟ:Mrutyunjaya.pdf/೫೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೬೦

ಮೃತ್ಯುಂಜಯ

ಬೆಕ್ ಉಮ್ಮಳವನ್ನು ಹತ್ತಿಕ್ಕುತ್ತ ಅಂದ :
"ಬಟಾ ಅಣ್ಣ ,ಈಗ ನೀವೇ ಮುಖಂಡರು. ಹೇಳಿ,ಕೊಲ್ಲು ಅಂದರೆ
ಕೊಲ್ತೇನೆ.ಸಾಯು ಅಂದರೆ ಸಾಯ್ತೇನೆ."
"ನಾನೆಂಥ ಮುಖಂಡ ? ಅಯ್ಯೋ..,” ಎಂದ ಬಟಾ.
ಮೆನ್ನನ ಯೋಚನೆಗಳು ಧ್ವನಿಪಡೆದುವು.
“ಅವರದು ಸಂಘಟಿತ ಶಸ್ತ್ರಬಲ. ಆ ಬಲಕ್ಕಿದಿರು ನಾವು ನಾಲ್ವತ್ತು
ಜನ. ಬಹುಮಟ್ಟಗೆ ನಿರಾಯುಧರು. ಈ ಜನಸಮೂಹದಲ್ಲಿ ನಮ್ಮ ಮಿತ್ರ
ರೇನೋ ಕೆಲವರಿದ್ದಾರೆ. ಹೆಚ್ಚೆಂದರೆ ಅವರು ಸಹಾನುಭೂತಿ ತೋರಿಸಬಹುದು.
ಉಳಿದವರಲ್ಲಿ ಕೆಲವರು ಪೆರೋ ಕಾಣಿಸಿದೊಡನೆ ಮಂಡಿಯೂರ್ತಾರೆ. ಬೇರೆ
ಸ್ವಲ್ಪ ಜನ ಕ್ರೂರ ವಿನೋದ ನೋಡೋದಕ್ಕೇಂತ బంದವರು; ಬೇಕಿದ್ದರೆ
ನಮ್ಮನ್ನು ಹಿಡಿದು ಯೋಧರ ಕೈಗೆ ಒಪ್ಪಿಸೋದಕ್ಕೂ ಅವರು ಸಿದ್ದ."
ಬಟಾ ಅಂದುಕೊಂಡ:
“ಖ್ನೆಮ್ ಹೊಟೆಪ್ ಇರಬೇಕಾಗಿತ್ತು ಈಗ. ತಪ್ಪಾಯಿತು. ಎಲ್ಲ
ತಪ್ಪಾಯಿತು. ಮೆನೆಪ್ಟಾ ಅಣ್ಣ ನಿನ್ನೆ ರಾತ್ರೆ ತಪ್ಪಿಸಿಕೊಳ್ಳಲು
ಒಪ್ಪಿದ್ದರೆ...."
ಮೆನ್ನನೆಂದ:
“ವಿಚಾರಣೆಯಾದದ್ದು ನಾಯಕರದಲ್ಲ ; ಪೆರೋ__ಮಹಾಅರ್ಚಕ__
ಅಮಾತ್ಯರದು. ತೀರ್ಪು ಕೊಟ್ಟದ್ದು ಮೆನೆಪ್ಟಾ ಅಣ್ಣ, ಅವರಲ್ಲ....”
ಬಟಾ "ಬಂದರು" ಎಂದ.
ಮೆನ್ನನ ಮಾತು ಅರ್ಧಕ್ಕೇ నింತಿತು.
ನೀರವತೆ. ಪಂಜುಗಳು ಮತ್ತು ಯೋಧರು. ನಡುವೆ ಮೆನೆಪ್ಟಾ
ತೋಳುಗಳಿಗೆ ಬಿಗಿದ ಹಗ್ಗ ಹಾಗೆಯೇ ಇತ್ತು. ಎತ್ತಿದ ತಲೆ. ನೇರ ನೋಟ.
ಶಾಂತ ಮುಖಮುದ್ರೆ. ಅವಸರವಿಲ್ಲದ ಲಯಬದ್ಧ ಹೆಜ್ಜೆಗಳು. ವಧಸ್ಥಾನ
ದತ್ತ ನಡಿಗೆ.
"ಆಗೋ ಮಾವ," ಎಂದಳು ಅಹೂರ ತನ್ನ ಮಗುವಿಗೆ.
ಆ ಮಗುವಿಗೆ ಅವ್ಯಕ್ತ ಭೀತಿ. ಅದು ಚಿಟ್ಟನೆ ಚೀರಿತು. ಜನಸಮು
ದಾಯದ ಮೌನದ ಕಟ್ಟೆಯೂ ಒಡೆಯಿತು.