ಪುಟ:Mrutyunjaya.pdf/೫೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಮೃತ್ಯುಂಜಯ

೫೬೧

ರಾಮೆರಿಪ್ ಟಾ ತುಟಿ ಎರಡು ಮಾಡದೆ, ಕಣ್ಣೆ ವೆಗಳನ್ನು ತೋಯಿಸದೆ
ರೋದಿಸಿದ:
"ಅಪ್ಪಾ, ಅಪ್ಪಾ, ಅಪ್ಪಾ...."
ಬಟಾ ಕಣ್ಣುಗಳನ್ನು ಮುಚ್ಚಿಕೊಂಡು ಗಂಟಲಿನಿಂದ ಗೊಗ್ಗರ ಧ್ವನಿ
ಹೊರಡಿಸಿದ.
ಬಿಕ್ಕುತ್ತ,, ಎವೆಇಕ್ಕದೆ, ಔಟ ಮತ್ತು ಬೆಕ್ ನೋಡಿದರು. ಅವರ
'ತುಟಿಗಳು ಒಂದೇ ಸಮನೆ ಅದುರಿದುವು.
ಶೀಬಾ ಚಿಂತಿಸಿದಳು. ನೇರ ಗೆರೆಯಲ್ಲೇನೋ ದೂರದಲ್ಲಿ ಅವಳ ಗಂಡ
ನಿದ್ದ. ಜನರನ್ನು ತಿವಿಯಲಾರ, ಕೊಲ್ಲಲಾರ.ಈ ಪರಿಸ್ಥಿತಿಯಲ್ಲಿ ಬೇರೆ
ಯಾವ ನೆರವು ಅವನಿಂದ ಸಾಧ್ಯ ?
ಕಟ್ಟೆಯ ಪೂರ್ವಭಾಗದಿಂದ ಇಬ್ಬರು ದೀವಟಿಗೆಯ ಭಟರು ಮೆಟ್ಟಲು
ಗಳನ್ನೇರಿದರು. ಒಂದು ಹೆಜ್ಜೆ ಕೆಳಗಿಂದ ಅವರ ನಡುವೆ, ಮೆನೆಪ್ ಟಾ.
(ಮೆನ್ನ : ಉದಿಸುತ್ತಿರುವ ರಾ– ಎದುರಿಗೆ ಸೆತ್ ಆರಾಧಕರು.'
ಶೀಬಾ: ಇವನು ಮನುಷ್ಯನಲ್ಲ; ದೇವರು.
ಅಹೂರಾ: ಒಸೈರಿಸ್, ನಮ್ಮ ಒಸೈರಿಸ್'.)
ಮೆನೆಪ್ಟಾನ ಬಳಿಕ ಹಗ್ಗ ಹಿಡಿದವರು, ಎರಡು ಪಕ್ಕಗಳಲ್ಲಿ. ನಾಲ್ಕು
ಕಡೆ ಪ್ರತಿಯೊಂದು ಮೆಟ್ಟಲಿನ ಮೇಲೂ ಯೋಧ ವ್ಯೂಹ.
ಸಮತಟ್ಟು ಸ್ವಲದ ಮೇಲೆ ದೀವಟಿಗೆಗಳ ಬೆಳಕಿಲ್ಲ ಮೆನೆಪ್ ಟಾ ನಿಂತ.
ಅವನ ದೃಷ್ಟಿ ಎದುರು ದಿಕ್ಕಿನತ್ತ ಹರಿಯಿತು. ಬರಿದಾದ ಉಪ್ಪರಿಗೆಯ ಮುಖ
ಮಂಟಪ. ಕಿಟಕಿಗಳಲ್ಲಷ್ಟೇ ಹಲವು ಹಲವು ತಲೆಗಳು. ಕೆಳಗೆ ಹೊಳೆಯುವ
ಈಟಿಮೊನೆಗಳು, ಯೋಧಗಣ.ಇತ್ತ ಜನ ಜಂಗುಳಿ.
ಮೆನೆಪಟಾನ ದೃಷ್ಟಿ ಮಬ್ಬು ಬೆಳಕನ್ನು ದಾಟುತ್ತ, ಕತ್ತಲನ್ನು ಇರಿ
ಯುತ್ತ, ಜನರ ನಡುವೆ ಅಲೆಯಿತು. ಬಕಿಲನನ್ನು ಆಗಲೇ ಆತ ಕಂಡಿದ್ದ.
ಒಂದು ದನಿ ಮೆಲ್ಲನೆ ಒಳಗಿನಿಂದ ಹೇಳುತ್ತಿತ್ತು: 'ಎಚ್ಚರ! ಎಚ್ಚರ!
ಬಾಂಧವರು ಯಾರು ಕಣ್ಣಿಗೆ ಬಿದ್ದರೂ ಗುರುತು ಸಿಕ್ಕಿತೆಂದು ತೋರಿಸಿಕೊಳ್ಳ
ಬೇಡ! ಅವರಿಗೆ ಅಪಾಯ! ಅವರಿಗೆ ಅಪಾಯ!'
೩೬