ಪುಟ:Mrutyunjaya.pdf/೫೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೫೬೩

ಬಟಾ ನಡುವಸ್ತ್ರವನ್ನು ಮುಟ್ಟಿ ತೋರಿಸಿದ.
"ಬಾಕು".
ಬೆಕ್ ಅದನ್ನೆತ್ತಿಕೊಂಡ....
(ಅಲ್ಲಿ ಪೆರೋ, ಮಹಾ ಅರ್ಚಕ, ಅಮಾತ್ಯ-ಏನು ಮಾಡಬೇಕು?
ದೂರವನ್ನು ಸೇರದು.)
ವಧಸ್ಥಾನದಲ್ಲಿ ಮೆಟ್ಟಿಲುಗಳ ಮೇಲಿನ ಯೋಧರು ದಾರಿ ಬಿಟ್ಟರು.
ಸ್ಕೂಲ ಶರೀರದ ಹಂತಕ ಗಾತ್ರದ ತನ್ನ ಕತ್ತಿಯೊಡನೆ ಮೇಲಕ್ಕೆ ಬಂದ.
ಉಪ್ಪರಿಗೆಯತ್ತ ನೋಡಿ ನಮಿಸಿದ. (ಈ ಹಂತಕ ಆರಮನೆಯವನು . ಕಸಾಯಿ
ವೃತ್ತಿಯವನು. ಪರಿಚಾರಕರು ಬಲ್ಲರು, ರಾಜಧಾನಿಯ ಜನ ಬಲ್ಲರು, ಆ
ದಿನವಷ್ಟೇ ಹರಿತಗೊಳಿಸಿದ್ದ ಕತ್ತಿ.)
ಬಕಿಲನ ಗಮನ ಉಪ್ಪರಿಗೆಯತ್ತ,
ಕತ್ತಲಿನೊಡನೆ ಬೆರೆತು ಘನೀಭವಿಸಿದ ನೀರವತೆ.
ಮೆನೆಪ್ ಟಾ ಈಗ ಮನೋವಿಹಾರಿ. ನೀರಾನೆ ಪ್ರಾಂತದ ಮುಖ್ಯ
ಪಟ್ಟಣದ ತನ್ನ ಮನೆಯಲ್ಲಿ, ಮಡದಿ ನೆಫಿಸಳ ಬಳಿ ; ರಾಜಗೃಹದಲ್ಲಿ, ಹಿರಿ
ಯರ ಸಮಿತಿ ಸಭೆಯಲ್ಲಿ.
__'ಬಟಾ ಆ ಹಾಡು ಬಾರಿಸು....
ನನ್ನ ನಲ್ಲೆಯ ಒಲವು ನಲಿದಿದೆ ನದಿಯ ತಟದಲ್ಲಿ
'ಕ್ರೂರ: ಮೊಸಳೆಯು ಅವಿತು ಕುಳಿತಿದೆ ನೆರಳ ಮರೆಯಲ್ಲಿ'
__'ನೆಫಿಸ್ ಬೇಯಿಸಿ ಮಾಡಿದ ಮಾನಿನ ಉಪ್ಪೇರಿ ಬಹಳ ಇಷ್ಟ.'
__ರಾಮೆರಿ, ತಾಯಿ ಹತ್ತಿರವೇ ಇರು, ಹೆತ್ತ ತಾಯಿ ನಿನಗಾಗಿ
ಏನೇನು ಮಾಡಿರುವಳೆಂಬುದನ್ನು ಮರೆಯಬೇಡ.'
__'ದೋಣಿಕಟ್ಟೆಯಲ್ಲಿ ಖೈಮ್ ಹೊಟೆಪ್ ಅಂದ : ಅಣ್ಣ ಏನಾದರೂ
ಹೇಳಿ, ನಾನೆಂದೆ: ನಾನು ಮೆಂಫಿಸಿಗೆ ಹೋಗಿ ಬತ್ತೇನೆ.”
__'ಬಟಾ ನೀನು ಕೇಳ್ವೆ : ನಿನಗೆ ಸವಿಾಪವಾಗಿದವನಾಗಿ ನಾನು
ದೊಡ್ಡವ ಅನಿಸಿಕೊಂಡಿಲ್ವಾ? -------- ಇಲ್ಲ ಬಟಾ, ನೀವೆಲ್ಲ ನನಗೆ ಸವಿಾಪದವ
ರಾದ್ದರಿಂದಲೇ ನಾನು ದೊಡ್ಡವ ಅನಿಸಿಕೊಂಡೆ.'
__'ದೇಶಕೆ ಪಾಪ ಹೊಡೆದಿದೆ. ನಾ ಬಾಗಿರುವೆ.......ಮೆನ್ನ,