ಪುಟ:Mrutyunjaya.pdf/೫೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಮೃತುಂಜಯ

೫೬೫

ರುಂಡ ಮುಂಡದಿಂದ ಬೇರ್ಪಟ್ಟಿತು.
ಮಂಜು ಕವಿದ ಸಹಸ್ರ ಕಣ್ಣಗಳು: ಸಿಡಿದೆದ್ದ ಸಂಕಟ...
ಜನನಮೂಹದಿಂದ ಗಗನಕ್ಕೇರಿತು ರೋದನ.
ಘೋಷ :
"ಓ ಮೆನೆಪ್ ಟಾ ! ಓ ಮೆನೆಪ್ ಟಾ !"
ಧ್ವನಿಸಿ, ಪ್ರತಿಧ್ವನಿಸಿತು :
" ಓ ಮೆನೆಪ್ ಟಾ ! ಓ ಮೆನೆಪ್ ಟಾ !?"
“ ಹೊಡೆದಟ್ಟಿ ಹೊರಕ್ಕೆ!” ಎಂದು ಯೋಧರಿಗೆ ಬಕಿಲ ಅರಚಿ ಹೇಳುತ್ತಿದ್ದಂತೆ,
ಉಪ್ಪರಿಗೆಯಲ್ಲಿ ಪೆರೋನ ಮುಂದೆ ನಿಂತು ಅಮಾತ್ಯ ನುಡಿದ:
"ಓ ಪೆರೋ! ವೈರಿ ಹತನಾಗಿದ್ದಾನೆ: ನ್ಯಾಯ ನಿನ್ನೆದುರು ಸುಭದ್ರವಾಗಿ
ನಿಂತಿದೆ."
ಉಪ್ಪರಿಗೆಯ ಮೇಲಿದ್ದವರು ಜಯಕಾರ ಮಾಡಿದರು :
ಓ ಪೆರೋ ! ಓ ಪೆರೋ ! "
“ ಓ ದೇವರೂಪ ! ಓ ದೇವರೂಪ !”
ಯೋಧರು ಜನರ ಮೇಲೆ ಬಿದ್ದರು.
ಬಯಲಿನಿಂದ ಘೋಷ :
ಓ ಮೆನೆಪ್ ಟಾ ! ಓ ಮೆನೆಪ್ ಟಾ!"
(ಮೆನ್ನ ಬಟಾನಿಗೆಂದ : "ಓಡೋಣ---ಓಡೋಣ---ಉದ್ಯಾನದಲ್ಲಿ
ಸೇರೋಣ.”)
ಯೋಧರು ಈಟಿಗಳಿಂದ ಚುಚ್ಚಿದರೆಂದು ಎದುರು ಇದ್ದವರು ಚೀರಿದರು.
ಚೀರುತ್ತ ಓಡಿದರು. ನೂಕುನುಗ್ಗಲಲ್ಲಿ ಕೆಲವರು ಬಿದ್ದರು. ಉಳಿದವರು
ಅವರನ್ನು ತುಳಿದು ತಮ್ಮ ಜೀವದ ರಕ್ಷಣೆಗಾಗಿ ಪಲಾಯನ ಮಾಡಿದರು.
ಅಮಾತ್ಯನ ಅನುಜ್ಞೆಯನ್ನು ಟಿಹುಟಿ ಬಕಿಲನಿಗೆ ತಿಳಿಸಿದ.
"ಅರಮನೆಯ ಪ್ರವೇಶದ್ವಾರದ ಬಳಿ ಪ್ರಕಾರದ ಮೇಲಿನಿಂದ ತೂಗ
ಹಾಕು." ಮೆನೆಪ್ಟಾನ ದೇಹಾಂತವಾದೊಡನೆಯೇ ಮಹಾ ಅರ್ಚಕ ಉಪ್ಪರಿಗೆ