ಪುಟ:Mrutyunjaya.pdf/೫೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೬೬

ಮೃತ್ಯುಂಜಯ

ಯಿಂದ ಕೆಳಕ್ಕಿಳಿದ. ವೈರಿ ಹತನಾಗಿ ನ್ಯಾಯ ಸುಭದ್ರವಾಗಿ ನಿಂತಿದೆ ಎಂದು
ಅಮಾತ್ಯ ವಿಧ್ಯುಕ್ತನಾಗಿ ತಿಳಿಸಿದ ಮೇಲೆ ಅರಸನೂ ಅರಸಿಯ ಕೆಳಕ್ಕಿಳಿ
ದರು. ಅವರನ್ನು ಅಮಾತ್ಯ ಹಿಂಬಾಲಿಸಿದ. ಅವನ ಹಿಂದಿನಿಂದ ಇತರರು
ಬಂದರು.
ಆದರೆ, ಜನರನ್ನು ಚೆದರಿಸುವ ಕೆಲಸ ಇನ್ನೂ ನಡೆದಿತ್ತು ತಮ್ಮ
ತಮ್ಮ ನಿವಾಸಗಳಿಗೆ ತೆರಳಬೇಕಾಗಿದ್ದವರು, ಮಹಾದ್ವಾರದ ಮೂಲಕ ಪಲ್ಲಕಿ
ಗಳು ಹಾದು ಹೋಗಲು ಅವಕಾಶವಿಲ್ಲದೆ ಸ್ವಲ್ಪ ಹೊತ್ತು ಕಾಯ
ಬೇಕಾಯಿತು.
ಹಂತಕನ ಪಾದಕ್ಕೆ ಆಗಿದ್ದುದು ಗೀರು ಗಾಯ ಮಾತ್ರ. ಟಣ್ಣನೆ ಕೆಳಕ್ಕೆ
ಬಿದ್ದ ಬಾಕುವನ್ನು ఒಬ್ಬ ಯೋಧ ಎತ್ತಿಕೊಂಡು ತನ್ನ ನಡುವಸ್ತ್ರದೊಳಕ್ಕೆ
ಸೇರಿಸಿದ್ದ.
ವೆುನೆಪಟಾನ ರುಂಡ ಮುಂಡಗಳನ್ನು ಯೋಧರು ಕಟ್ಟೆಯಿಂದ ಕೆಳಕ್ಕೆ
ಎಳೆದರು.
ಹಂತಕ ಇಳಿದು ಬಂದು ಬಕಿಲನೊಡನೆ ದೂರಿದ:
“ಯಾರೋ ನನ್ನ ಕಡೆಗೆ ಏನೋ ಎಸೆದರಲ್ಲ?”
బಕಿಲನೆಂದ:

“ನಿನ್ನ ಕಡೆಗೆ? : ಛೆ! ಛೆ! ಆ ನೀರಾನೆಗೆ ತಗಲ್ಬೇಕೂಂತ ಯಾರಾ
ದರೂ ಎನಾದರೂ ಏಸೆದಿರಬಹುದು. ಹೋಗು ಮನೆಗೆ.”

೧೩


అರಮನೆಯ ಆರಾಳು ಎತ್ತರದ ಪ್ರವೇಶ ಗೋಪುರದ ಮಧ್ಯದಲ್ಲಿ,
ಅಂಚುಗಳಲ್ಲಿ, ಮರದ ತೊಲೆ ಎಡಬಲಗಳಿಗೆ ಎರಡೆರಡು ಮೊಳ ಚಾಚಿತ್ತು.
ಬಲಗಡೆ ಆ ತೊಲೆಗೆ ಹುರಿಮಾಡಿದ ಸೆಣಬಿನ ಹಗ್ಗವನ್ನು ಬಿಗಿದಿದ್ದರು.
ಮಾರುದ್ದದ ಆ ಹಗ್ಗದ ಇನ್ನೊಂದು ತುದಿ ಮೆನೆಪ ಟಾನ ಶಿರಸ್ಸಿಲ್ಲದ ಶವದ
ಪಾದಗಳಿಗೆ ಕುಣಿಕೆಯಾಗಿತ್ತು, ತೂಗಾಡುತ್ತಿದ್ದ ಶವ, ತೋಳುಗಳು ಅಡ್ದಾ