ಪುಟ:Mrutyunjaya.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃ‍ತ್ಯುಂಜಯ

೪೭

ಹೌದೋ ಗೇಬು ?"
" ಈ ಗೊಂದಲದಲ್ಲಿ ಕೆಲವು ಪ್ರಾಂತಪಾಲರು ಬಲಿಷ್ಠರಾಗಿದ್ದಾರೆ,
ನನ್ನಂಥ ಕೆಲವರು ಅಸಹಾಯಕರಾಗಿದ್ದಾರೆ___ಅಂತಲೂ ಕೇಳಿದ್ದೇನೆ "
" ನೀಲ ನದಿಯ ಉದ್ದಕ್ಕೂ ಕಿಂವದಂತಿಗಳು ಸಂಚಾರ ಮಾಡ್ತಿರೋ
ಹಾಗಿದೆ. ಅಮಾತ್ಯರಿಗೆ ಇದನ್ನು ತಿಳಿಸ್ಬೇಕು."
" ಅಮಾತ್ಯರು ಒಮ್ಮೆ ಬಂದಿದ್ದರೆ___"
" ಟೆಹುಟಿ ಉದ್ಧಟ ಅಂತ ದೂರು ಹೇಳಬಹುದು ಅಂತಲೊ ?"
" ಟೆಹುಟಿ, ಯಾರಿಗೆ ಗೊತ್ತು ? ನಾಳೆ ನೀವೇ ಅಮಾತ್ಯರಾಗ
ಬಹುದಲ್ಲ?"
ಟೆಹುಟಿ ನಕ್ಕ. ಸ್ವರ ತಗ್ಗಿಸಿ ಅಂದ:
" ಗೇಬು ನೀವು ದಡ್ಡರಲ್ಲ. ಒಪ್ತೇನೆ."
" ನೀವು ದೊಡ್ಡವರು. ವಿದ್ಯೆ ವಯಸ್ಸು ಎರದರಲ್ಲೂ ನಾನು
ಚಿಕ್ಕವ."
" ಗೇಬು, ಮುಖಸ್ತುತಿ ಬೇಡ. ಇಲ್ಲಿ ನಿಮಗಿರೋ ತೊಂದರೆ
ಏನು ?"
" ಹತ್ತು ಜನ ಕಾವಲುಭಟರ ಸಹಾಯದಿಂದ ಒಂದು ಪ್ರಾಂತ
ಆಳೋದು ಹ್ಯಾಗೆ? ಭೂಮಾಲಿಕರ ಬೆಂಬಲ ನೆಚ್ಕೊಂಡು ನಾನು
ಬದುಕ್ಬೇಕು. ಈಗ ನೋಡಿ, ಈ ಪ್ರಾಂತದ ಅತಿ ದೊಡ್ಡ ಭೂಮಾಲಿಕ
ನುಟ್ಮೋಸ್ ಊರಲ್ಲಿಲ್ಲ. ಅದೃಷ್ಟ ಪರೀಕ್ಷೆಗೆ ರಾಜಧಾನಿಗೆ ಹೋಗಿದ್ದಾನೆ
ಪೆರೋ ಪಲ್ಲಕಿ ಹೊರೋ ಅವಕಾಶ ಸಿಗ್ತದೋ ಅಂತ ನೋಡೋದಕ್ಕೆ.
ಪ್ರಾಯಶಃ ಅಬ್ಟುಗೆ ಹೋಗಿ ರಾಜಧಾನಿಗೆ ವಾಪಸಾಗ್ತಿರ್ಬೌದು. ನನಗೆ
ಗೊತ್ತು. ಹೆಚ್ಚು ಕಮ್ಮಿ ಎಲ್ಲ ಭೂಮಾಲಿಕರಿಗೂ ಅಷ್ಟೆ. ರಾಜಧಾನಿ
ಯಲ್ಲಿ ಮಜವಾಗಿರೋದು ಇಷ್ಟ."
" ಮೂರ್ಖರು. ಕುಡಿತದ ಮನೆ ಕುಣಿತದ ಮನೆ___ಇದು ತಾನೆ ರಾಜ
ಧಾನಿಯ ಆಕರ್ಷಣೆ ?"
ಮಾತು ಮುಂದುವರಿಸಲು ಗೇಬು ಬಾಯಿ ತೆರೆದ. ಆದರೆ, ಟೆಹುಟಿ
ಆಕಳಿಸಿದುದನ್ನು ಕಂಡು, ಸುಮ್ಮನಾದ.