ಪುಟ:Mrutyunjaya.pdf/೫೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೭೦

ಮೃತ್ಯುಂಜಯ



ಕೋಸ್ಕರ ಆ ಖರೀದಿ ಅನ್ನೋದು ಅವರಿಗೆ ಗೊತ್ತಾಗಬಾರದು. (ಅದಾದ
ಮೇಲೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ತೂಗಾಡ್ತಿರೋ ಶವವನ್ನು ವಶ
ಪಡಿಸಿಕೊಂಡು ಸುರಕ್ಷಿತವಾಗಿ ದೋಣಿಗೆ ಸಾಗಿಸ್ಬೇಕು. ಇದು ಸದುಗದ್ದಲ
ಇಲ್ದೆ ಆಗಬೇಕಾದ ಕೆಲಸ.ಅದಾದ ತಕ್ಷಣ ಈ ರಾಜಧಾನಿ ಬಿಡ್ಬೇಕು.”
"ಆಗಲಿ ಅಯ್ಯ.”
" ಲೇಪನ ಸಾಮಗ್ರಿ ಕೊಳ್ಳೋದಕ್ಕೆ ವಿನಿನಯ ಸಾಮಗ್ರಿ ಬೇಕಲ್ಲ?”
" ದೋಣೀಲಿದೆ.ಆಪೋಫಿಸ್ ನ ಅಂಗಡಿಯೇ ಹತ್ತಿರದು, ನಾನು
ನೋಡಿದ್ದೇನೆ.”
“ನೀನು ಹೋಗಬಾರದು ಬಟಾ.”
"ಗೊತ್ತು. ದೂರದಲ್ಲಿ ನಿಂತು ಅಹೋರಾಗೆ ಅಂಗಡಿ ತೋರಿಸ್ತೇನೆ.
ಅವಳೂ ಅವಳ ಗಂಡನೂ ಖರೀದಿ ಮಾಡ್ತಾರೆ.”
“ ತುರ್ತು ಲೇಪನದ ಸಾಮಗ್ರಿ ಅಂತ ಕೇಳ್ಲಿ. ಜತೆಗೆ ಅನೂಬಿಸ್
ದೇವತೆಯ ಒಂದು ಮುಖವಾಡ ಬೇಕು. ಇಲ್ಲೇ ಹತ್ತಿರದ ಊರಿನವರು,
ಸತ್ತಿರೋ ಅಣ್ಣನ ಶವಲೇಪನಕ್ಕೆ ಸಾಮಗ್ರಿ__ಅಂತ ಹೇಳ್ಲಿ ನಾವು ದೋಣಿ
ಹತ್ತಿರಕ್ಕೆ ಹೋಗ್ತೇನೆ.”
“ ನೀವು ಹೋಗಾ। ಇರಿ. ನಮ್ಮವರನ್ನು ನೋಡೋಂಡು ನಾನೂ
ಬಂದ್ದಿಟ್ಟೆ ವಿನಿಮಯ ಸಾಮಗ್ರಿ ತರಬೇಕಲ್ಲ.”
“ ಹೂಂ,” ಎನ್ನುತ್ತ ಮೆನ್ನ ಹೊರಟೇ ಬಿಟ್ಟ.

****

ಪ್ರವೇಶ ದ್ವಾರದ ಸವಿಾಪದಲ್ಲಿ ಎದುರುಗಡೆ, ಅಲ್ಲಲ್ಲಿ, ಅವರೆಲ್ಲ ಕುಳಿ
ತಿದ್ದರು-ಕತ್ತಲಿನ ಮರೆಯಲ್ಲಿ.
" ಬಂದಿಯಾ ಬಟಾ ಅಣ್ಣ ? ದಾರಿ ನೋಡ್ತಾ ಇದ್ದೇವೆ,” ಎಂದಳು
ಅಹೂರಾ.
ಬಟಾ ನಾಯಕನ ತೂಗಾಡುತ್ತಿದ್ದ ಶವವನ್ನೊಮ್ಮೆ ನೋಡಿದ
ಹೃದಯದ ಆಳದಿಂದ ಮೇಲೆದ್ದ ಆರ್ತನಾದವನ್ನು ಹತ್ತಿಕ್ಕಿದ.ಬಂಧುಗಳೆಡೆಗೆ