ಪುಟ:Mrutyunjaya.pdf/೫೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ

೫೭೩

“ರಾಜಧಾನಿಯಲ್ಲಿ ನಾಯಕರ ತಂಡದ ಖರ್ಚಿಗೆ ಬೇಕಾದೀತು ಅಂತ
ಇಪ್ಯುವರ್ ಇದನ್ನು ಕೊಟ್ಟ..... ಖಾಲಿಯಾಗುವ ಚೀಲ ಒಂದು ಬಿಟ್ಟು ಬೇರೇನೂ
ಉಳಿಸಬೇಡ ಅಹೂರಾ.”

“ ಹೂಂ ಅಣ್ಣ.”
" ಬನ್ನಿ. ಅಪೋಫಿಸ್ನ ಅಂಗಡಿ ತೋರಿಸ್ತೇನೆ.”
....ಅದೃಷ್ಟದ ಬೀದಿಯಲ್ಲಿ ಆ ಅಂಗಡಿ....
(ಅದೃಷ್ಟದ ಬೀದಿ. 'ಎಷ್ಟು ಕೆಟ್ಟ ಅದೃಷ್ಟ ನಮ್ಮದು!')
ಎಲ್ಲೋ ಒಂದೆರಡು ಮನೆಗಳಲ್ಲಷ್ಟೇ ದೀಪಗಳಿದ್ದುವು.
ಮುಚ್ಚಿದ್ದ ಒಂದು ಕದದ ಎದುರು ನಿಂತು ಬಟಾ ಪಿಸುನುಡಿದ :
"ಇದೇ. ಅಂಗಡಿ__ಮನೆ ಎರಡೂ, "ಅಪೋಫಿಸ್ ಅಯ್ಯ!"ಅಂತ
ಕೂಗು, ಅಡೂರಾ. ಬಾಗಿಲು ಬಡಿ, ನಾನು ಬೀದಿ ಮೂಲೇಲಿ ಕಾಯೇನೆ.”
ಬಟಾ ಹೊರಟೊಡನೆ, "ಅಪೋಫಿಸ್ ಅಯ್ಯ!ಅಪೋಫಿಸ್ ಅಯ್ಯ !”
ಎಂದು ಅವಳು ಕೂಗಿ ಕರೆದಳು. ಬಾಗಿಲು ತಟ್ಟಿದಳು. ಉತ್ತರದ ದಾರಿ
ನೋಡಿ ಮತ್ತೊಮ್ಮೆ ಹೆಸರು ಹಿಡಿದು ಕೂಗಿದಳು.
ಆಕೆಯ ಗಂಡನೂ ಕರೆದ :
"ಅಪೋಫಿಸ್ ಅಯ್ಯ ! » ಧರಿಸಿ
ಸದ್ದಿಲ್ಲವಲ್ಲ ; ಈ ಅಯ್ಯನನ್ನು ಎಬ್ಬಿಸುವುದು ಹೇಗೆ ?-ಎಂದು
ಅಹೂರಾ ಯೋಚನೆಗೆ ಈಡಾದಳು, ಅಷ್ಟರಲ್ಲೇ ಜಾಲಂದ್ರದ ಮುಚ್ಚಳ ತೆರೆದ
ಸಪ್ಪಳವಾಯಿತು,
ಅಪೋಫಿಸ್ ಜಾಲಂದ್ರದ ಮೂಲಕ ಕೇಳಿದ :
"ಯಾರು ? ಏನು ಬೇಕು ?"
ಈತ ಅಯ್ಯನಿರಬಹುದು ಎಂದುಕೊಂಡು, ಅಹೂರಾ ಉತ್ತರಿಸಿದಳು :
" ನಾವು ಪರ ಊರಿನವರು. ಒಂದಿಷ್ಟು ಸಾಮಗ್ರಿ ಬೇಕು ಅಯ್ಯ.”
“ಈ ಅಪರಾತ್ರಿಯಲ್ಲಿ ? ಎಂಥ ಸಾಮಗ್ರಿ ?"
ಅಹೂರಾಳ ಗುಂಡಿಗೆ ಬಡಿತ ತೀವ್ರವಾಯಿತು. ಅಧೀರಳಾಗದೆ,
ಧ್ವನಿಯ ಕಂಪನವನ್ನು ಮರೆಮಾಚಿ ಅವಳೆಂದಳು :
“ ಶವಲೇಪನ ಸಾಮಗ್ರಿ ಅಯ್ಯ.”