ಪುಟ:Mrutyunjaya.pdf/೫೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೭೪

ಮೃತ್ಯುಂಜಯ

“ ಹ್ಞ? ಯಾವ ಜನ ನೀವು ?”
“ ರೈತ ಜನ ಅಯ್ಯ.”
“ ನಿಮ್ಮೂರಿನ ಭೂಮಾಲಿಕ ಕಳಿಸಿದಾನೆ ? ಎಪ್ಪತ್ತು ದಿವಸಗಳ
ಲೇಪನ ಮಾಡ್ತೇವೆ? »
“ ಅಲ್ಲ. ನನ್ನ ಅಣ್ಣ ತೀನ್ನೊಂಡ ಅಯ್ಯ. ನಾಳೆ ಬೆಳಿಗ್ಗೆಯೇ
ಲೇಪನ ಮಾಡ್ತವೆ.”
“ ಹಾಗೋ ? ನಿಮ್ಮ ಸ್ವಂತಕ್ಕೊ ? ಬೇಡ ಅನ್ನೋದಕ್ಕೆ ನಾನು
ಯಾರು ? ಆದರೆ, ಇದೆಲ್ಲ ಖರ್ಚಿನ ಬಾಬು, ಐವತ್ತು ಉಟೆನ್ ಆಗ್ತದೆ.
ಅಷ್ಟು
ನಾಲ್ಕಕ್ಕೆ ವಿನಿಮಯ ಸಾಮಗ್ರಿ ತಂದಿದೀರಾ ? »
ಅನೂಬಿಸ್ ದೇವತೆಯ ಮುಖವಾಡವೂ ಬೇಕು. ಅದೂ ಸೇರಿಸ್ನಿ
ಐವತ್ತು ಮಾಡ್ಕೊಳ್ಳಿ.”
“ ಇಲ್ಲ. ಅರುವತ್ತಾಗದೆ.”
“ ದೀಪ ಹಚ್ಚಿ ಅಯ್ಯ, ಬಾಗಿಲು ತೆರೀರಿ.”
ಮತ್ತೆ ಮೌನ, ಪತ್ನಿ ಎದ್ದು ಹಚ್ಚಿಕೊಟ್ಟ ಹಣತೆಯನ್ನು ಕೈಯಲ್ಲಿ
ಹಿಡಿದು ಅಪೋಫಿಸ್ ಬಾಗಿಲು ತೆರೆದ. ತುಸು ಮುಂದೆ ಬಂದು, ಬೀದಿಯಲ್ಲಿ
ನಿಂತಿದ್ದವರನ್ನು ಹಣತೆಯ ಬೆಳಕಿನಲ್ಲಿ ನೋಡಿದ.
“ ಮೂಟೆ ಇಳಿಸಿ,” ಎಂದ.
“ ಮೂಟೆ ಬಿಚ್ಚಿ ಅಯ್ಯನಿಗೆ ತೋರಿಸು,” ಎಂದಳು ಆಹೂರಾ, ತನ್ನ
ಗಂಡನಿಗೆ.
ಆತ ಹೇರನ್ನು ಕೆಳಗಿಳಿಸಿ ಜಗಲಿಯ ಮೇಲಿಟ್ಟು, ಕಟ್ಟುಗಳನು
ಬಿಚ್ಚಿದ, ಚೀಲದಲ್ಲಿದ್ದುದನ್ನು ಒಂದೊಂದಾಗಿ ಎತ್ತಿ ಹೊರಗಿಟ್ಟ..
ಅಪೋಫಿಸ್ ದೀಪ ಕೆಳಗಿರಿಸಿ ವಿನಿಮಯ ಸಾಮಗ್ರಿಗಳನ್ನು ಪರೀಕ್ಷಿಸಿದ,
ರಾತ್ರೆ ಹೊತ್ತು ಸಾಮಾನ್ಯ ಮಟ್ಟದ ಸಾಮಾನನ್ನೂ ದಾಟಿಸೌದು.
ಅಲ್ಲವಾ ?” ಎಂದು ವ್ಯಂಗ್ಯೂಕ್ತಿಯಾಡಿದ.
ಅಹೂರಾ ಪ್ರತಿಭಟಿಸಿದಳು :
“ಅಂಥ ಮಾತು ಹೇಳಬಾರದು, ಅಯ್ಯ. ತಾನು ಸತ್ತಾಗ ಶವಲೇಪನ ಆಗ್ಬೇ
ಕೂಂತ ಅಣ್ಣ ಯಾವಾಗ್ಲ ಹೇಳ್ತಿದ್ದ. ಅವನ ಆ ಆಸೆ ಈಡೇರಿಸೋದಕ್ಕೆಂತ