ಪುಟ:Mrutyunjaya.pdf/೫೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

చృతే్యుంజయ 352.2. ದಲ್ಲಿ ಲೇಪನ ಸಾಮಗ್ರಿಗಳನ್ನಿಟ್ಟು, ಅಹೂರಾ ಆ ಚೀಲವನ್ನೆತ್ತಿ ಕೋಂಡಳು.

  • ಅಯ್ಯ ->

“ ಹಾಗ್ಟಂದ್ರಿ? ಕತ್ತೆಗಳ ಮೇಲೊ? ದೋಣೀಲೊ?” ನಮ್ಮದು ಒಳನಾಡು.. ಕತ್ತೆಗಳ ಮೇಲೆ ಬಂದೆವು. ಸಾರಿಗೆ ಕಟ್ಟೀలి ಕಟ್ಟಿದ್ದೇವೆ. xx ... ನನ್ನ ಅಂಗಡಿ ಇಲ್ಲಿರೋದು ಯಾರು ಹೇಳಿದ್ರು ತಾಯಿ ನಿಮಗೆ ? " “ ಅದೃಷ್ಟದ ಬೀದಿಗೆ ಹೋಗೀಂತ ಕಟ್ಟೆಯೋರು ಹೇಳದ್ರು.”

  • ಸರಿ! ಅಂತೂ ನನ್ನ, ನಿದ್ದೆ ಹೋಯ್ತು, ಹೊರಡಿ ಇನ್ನು ನೀನು ಏನೂ ಚಿಂತಿಸ್ಬೇಡ ತಯಿ. ನಿನ್ನಣ್ಣ ಒಸೈರಿಸ್ ರಾಜ್ಯಕ್ಕೆ ಹೋನೆ.”

ಗದ್ಗದಿತಳಾಗಿ ಅಹೂರಾ ಅಂದಳು : “ ಹೊ೦. ಅಯ್ಯ...." [ಅಹೂರಾ ಗಂನೋಡನೆ ಹೊರೆಟಳು..... ಅಪೋಫಿಸ್ ಕದವಿಕ್ಕಿ, ವಿನಿಮಯವಾಗಿ ಪಡೆದ ವಸ್ತುಗಳನ್ನು ಮತ್ತೊಮ್ಮೆ ನೋಡಿ. ಪರಮ ಸಂತುಷ್ಟನಾಗಿ ದೀಪ ಆರಿಸಿ, ಹೆಂಡತಿ ಮಲಗಿ ದ್ದೆಡೆಗೆ ಸಾಗಿದ. ಅವಳಿಗೆ ಗಾಢನಿದ್ದೆ, ಈತ ಕಣ್ಣೆವೆಗಳನ್ನು ಗಟ್ಟಿಯಾಗಿ ಮುಚ್ಚಿದ. 'ಪ್ ಟಾ ಹೊಟೆಪ' ಎಂದ, ಮನಸ್ಸಿನಲ್ಲೇ. ಇದ್ದಕ್ಕಿಂತೆ ನೀರಾನೆ ಪ್ರಾಂತದ ದೋಣಿಕಾರನ ನೆನಪಾಯಿತು. ದೇವತಾಮೂರ್ತಿಗಳನ್ನು ಆ ಕಳ್ಳ ತರಲೇ ಇಲ್ಲ. ಅವನ ನಾಯಕನ ವಧೆ ಯಾಯಿತು ಇವತ್ತು, ಸತ್ತವನು ಮೊಸಳೆಗೆ ಆಹಾರವಾಗ್ಗಾನೆ. ಆತ ಪಟಾಹೊಟೆಪ್ ಅಲ್ಲ-ಮೆನೆಪ್ ಟಾ.. ಈ ಶವಲೇಪನ ಸಾಮಗ್ರಿ? ಛೆ!ಛೆ! ಅದಕ್ಕೂ ಇದಕ್ಕೂ ಇದಕ್ಕೂ ಖಂಡಿತ ಸಂಭಂಧವಿರದು... ನಿದ್ದೆ ಬರಲೆಂದು ಮನಸ್ಸಿನಲ್ಲೇ ಆತ ಸ್ತೋತ್ರ ಆರಂಭಿಸಿದ: ' ಜಗ ದ್ರಕ್ಶಕ ಪ್ ಟಾ ಸರ್ವಜನಪೂಜಿತ ಪ್ ಟಾ ಏನೇ ಇರಲಿ, ಬೆಳಿಗ್ಗೆ ಬೇಗನೆ ಮಹಾಮಂದಿರಕ್ಕೆ ಹೋಗಿ, ರಾತ್ರಿ ಯಾವಳೋ ಹೆಂಗಸು ಬಂದು ಶವಲೇಪನ ಸಾಮಗ್ರಿ ಖರೀದಿ ಮಾಡಿದಳು ಅಂತ ಮಹಾ ಅರ್ಚಕರಿಗೆ ತಿಳಿಸಬೇಕು-ಎಂದುಕೊಂಡ..] 3. ಅಹೂರಾ ಆ ಚೀಲವನ್ನೆತ್ತಿಕೊಂಡಳು. × -k * * తిడి