ವಿಷಯಕ್ಕೆ ಹೋಗು

ಪುಟ:Mrutyunjaya.pdf/೫೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮೃತ್ಯುಂಜಯ
೫೭೯


" ಉತ್ಸವ ಮುಗಿದಮೇಲೂ ಇಲ್ಲಿಯೇ ಟಳಾಯಿಸ್ತಾ ಇದೀಯಲ್ಲ. ಯಾಕೆ ?” “ ಇ ಹ್ಹಿ ಹ್ಹಿ!” "ಮಕ್ಕಳಿಲ್ಲವಾ 2 ” “ಎರಡಿವೆ. ನಿದ್ದೆ ಹೋಗಿದಾವೆ. ಊಟ ಆಯ್ತಾ ಅಣ್ಣ?” ಇನ್ನೊಬ್ಬ ಭಟ ದಪ್ಪ ಗಂಟಲಲ್ಲಿ ಅಂದ: “ ಎಲ್ಲೀದು ಊಟ ? ಮಧಾಹ್ನದಿಂದ ಇಲ್ಲಿ ಸಾಯ್ತಾ ಇದ್ದೇವೆ. ಆ ನಾಯಕ ಸತ್ತು ಬಿಡುಗಡೆ ಪಡೆದ ನಾವು ಬದುಕಿದ್ದೇವೆ-ನಮಗೆ ಬಂಧನ.” ಆಹೂರಾ ರಾಗವೆಳೆದಳು : "ಒಂದಿಷ್ತು ಬುತ್ತಿ-ಚೀಲದಲ್ಲಿ ಸ್ವಲ್ಪ ಖಿವವ-ಉಳಿದಿವೆ. ಬೇಕಾ?” ವೊದಲಿನ ಭಟನೆಂದ : "ಬಿಟ್ಟಿ ಕೊಡ್ರೀಯಾ ?” “ ನಾನು ರೈತ ಹೆಂಗಸು. ತಿನ್ನೋದಕ್ಕೆ ಕುಡಿಯೋದಕ್ಕೆ ಯಾರಿ ಗಾದರೂ ಕೊಟ್ರೆ ವಿನಿಮಯಕ್ಕೆ ಏನೂ ತಗೊಳೋದಿಲ್ಲ-ಪಟ್ಟಣದವರ ಹಾಗೆ” - “ ಓಹೋಹೋ! ತಗೊಂಡ್ಬಾ, ಎಲ್ಲಿಟ್ಟಿದೀಯಾ ?” "ಓ అల్లి........" “ ಕಿಸಪಿಸ ಮಾತು ಕೇಳ್ತದಲಾ ? ಬೇರೆಯವರೂ ಯಾರೋ ఇದ್ದಂಗಿದೆ." "ನಮ್ಮ ಪಕ್ಕದ ಹಳ್ಳಿದು ಒಂದೆರಡು ಸಂಸಾರ,” ಎಂದು ನುಡಿದು ಅಹೂರಾ ಬುತ್ತಿ ತರಲು ಹೋದಳು. ದಪ್ಪ ಗಂಟಲಿನ ಭಟನೆಂದ: “ ಏನು ಯೋಚೈ? “ಪಸಂದಾಗಿದಾಳೆ.” "ಹೆಣ ಕಾಯೋದು ಬಿಟ್ಟಟ್ಟು -------- » “ಅದೆಲ್ಲಿಗೆ ಹೋಗ್ರದೆ? ದಳಪತಿಗೆ ಗೊತ್ತಾಗಬಾರದು, ಅಷ್ಟೆ. » "ಸರಿ...ಊಟ ಬರ್ಲಿ ಮೊದಲು.”