ಪುಟ:Mrutyunjaya.pdf/೫೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

33ご○ వాృతెర్మింజయు ಅಹೂರಾ ಬಂದಳು. ಭಟರು ಉಣ್ಣಲು ಕುಡಿಯಲು ತೊಡಗಿದರು. ಮೊದಲ ಭಟ ಅಹೂರಾಳತ್ತ ನೋಡಿ ಅಂದ : ... ಕೂತ್ಕೋ ಈ ಖಿವವ ವೈನಾಗಿದೆ. ನಮ್ಮತೆ ನೀನೂ ತೆಗೋ.”

  • ನೀವು ತಗೊಳ್ಳಿ. ನಮ್ಮೂರಲ್ಲಿ ಖಿವವದ ಕೊಳವೇ ಇದೆ,” ಎಂದಳು ಅಹೂರಾ ಅವರೆದುರು ಕುಳಿತುಕೊಳ್ಳುತ್ತ...”

“ಆಹಾ! ನಿಮೂರಲ್ಲಿ ಬೇರೆ ಹೆಂಗಸ್ತೂ ನಿನ್ನ ಹಾಗೆ ಇದಾರಾ?"

  • ಅದನ್ನು ನಾನು ಹ್ಯಾಗೆ ಹೇಳ್ಳಿ?”

ಆಷ್ತು ಹೊತ್ತಿಗೆ ಕುಡಿದವರಂತೆ ನಟಿಸುತ್ತ, ತೂರಾಡಿಕೊಂಡು), ಔಟಿ ಮತ್ತು ಬೆಕ್ ಅಲ್ಲಿಗೆ ಬಂದರು ఔಟನೆಂದ :

  • ಮೆಮಜಾ ಮಾಡ್ತಾ ಇದ್ದೀರಾ ?”

ಕತ್ತಲು ಮುಖ ಕಾಣಿಸುತ್ತಿರಲಿಲ್ಲ ಆದರೂ ದಷಟ್ ಗಂಟಲಿನ ಕಾವಲು ಗಾರನಿಗೆ ಈ ಧ್ವನಿಯನ್ನೆಲ್ಲೋ ಕೇಳಿದ್ದೇನೆ ಎನಿಸಿತು.” ಅವನೆಂದ: “ಏಯ! ತೆಪ್ಪಗೆ ಹೊರಟೋಗ್ರಿ ! ಮೇಲೆ ನೋಡಿದ್ರೋ ಇಲ್ಲೋ?” ... ಅಯ್ಯಯ್ಯಪ್ಪ ಹೆಣ!” ಎಂದ ಬೆಕ್ ಗಾಬರಿಯ ಧ್ವನಿಯಲ್ಲಿ. ಭಟರಿಬ್ಬರೂ “ ಹೊಹೊಹೊ " ಎಂದು ನಕ್ಕರು ನಗು ಮುಗಿಯುವುದರೊಳಗೆ ಬೆಕ್ ಮತ್ತು ಔಟ ಒಬ್ಬೊಬ್ಬ ಭಟನ ಹಿಂದಿನಿಂದ ಬಂದು, ತೋಳು ಹಾಕಿ ಕತ್ತನ್ನು ಬಳಸಿ ಒತ್ತಿದರು. ಉಸಿರು ಕಟ್ಟಿದಂತೆ, ನಗೆ ಚಡಪಡಿಸುವ ಗೊಗ್ಗರ ಸಪ್ಪಳವಾಗಿ ಮಾರ್ಪಟ್ಟಿತು. ಬಟಾ ಮತ್ತು ಒಬ್ಬ ಅಂಬಿಗ ಧಾವಿಸಿ ಬಂದರು. ಬಾಯಿಗಳಿಗೆ ಚಿಂದಿ ಬಟ್ಟೆ, ತುರುಕಿದರು. ಕಣ್ಣ ಗಳು ಕಾಣಿಸದಂತೆ ಪಟ್ಟಿ ಬಿಗಿದರು. ಬೆನ್ನ ಹಿಂದೆ ಎರಡೂ ಕೈಗಳನ್ನು ಕಟ್ಟಿದರು. ಕಾಲುಗಳಿಗೂ ಹಗ್ಗ ಸಂಕೋಲೆ ಯಾಯಿತು ನೆಲದಮೇಲೆ ಬಿದ್ದಿದ್ದವರ ಕತ್ತು ಕುಯ್ಯಬಹುದು; ఇల్లವೆ ತಿವಿದು ಕೊಲ್ಲಬಹುದು. ಆದರೆ ಅವರು ಬಡಪಾಯಿಗಳು. ಅಮಾತ್ಯನಲ್ಲ, ಮಹಾ