ಪುಟ:Mrutyunjaya.pdf/೫೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮ್ರುತ್ಯುಂಜಯ ಅರ್ಚಕ ಮಹಾಪ್ರಬುವಲ್ಲ. ಬಟಾ ಅಂದುಕೊಂಡ : ಎಚ್ಚರವಿರುತ್ತಿದ್ದರೆ ಮೆನೆಪ್ಟಾ ಅಣ್ಣ ಹೇಳುತ್ತಿದ್ದ : “ ಅವರಿಗೇನೂ ಮಾಡ್ಬೇಡಿ.” ಅಸಹಾಯರಾಗಿ ಭಟ್ಟರು ನೆಲದಮೇಲಿದುದನ್ನು ನೋಡುತ್ತ “ಬೇಗ! ಬೇಗ! " ఎండా బటా.

     ತಂಡದವರು ಆರೆಂಟು ಜನ ರಸ್ತೆಯ ಈ ಮಗುಲಿಗೆ బంದರು.ಬಟಾನ ನಿರ್ದೆಶದಂತೆ, ಬಿದ್ದಿದ್ದವರನ್ನು ಎತ್ತಿ ತುಸು ದೂರ ಒಯ್ದು ಕತ್ತಲಲ್ಲಿ ಎಸೆದು ಮರಳಿದರು.

“ ಬೇಗ ! ಬೇಗ !” ಎಂದ ಬಟಾ, ಪುನಃ ಪುನಃ. ಔಟ ಮತ್ತು ಬೆಕ್ ಆಗಲೇ ಮಹಾದ್ವಾರದ ಗೋಪುರವನ್ನೇರಿದ್ದರು. ಬೇರೆ ಕೆಲವರು ಪ್ರಾಕಾರರನ್ನು ಹತಿ ನಿಂತರು. ಶಿರಸ್ಸು ಮೊದಲು ಕೆಳಕ್ಕೆಳಿಯಿತು. ಅಹೂರಾ ಅದನ್ನು ಎದೆಗೆ ಅನಚಿ ಕೊಂಡಳು. "ಖಿವವ ಚೀಲದೊಳಗಿಡು" ಎಂದ ಬಟಾ. ಮೆನಪಟಾನ ಶವದ ಪಾದಗಳಿಗೆ ಹಾಕಿದ್ದ ಕುಣಿಕೆಯನ್ನು ತಪ್ಪಿಸಿದರು. ಇಬ್ಬರೂ ಕೆಳಕ್ಕೆ ಸರಿಸಿದ ಮುಂಡವನ್ನು ಪಾಕಾರದ ಮೇಲಿದ್ದವರು ಸ್ವೀಕರಿಸಿ ದರು. ಅವರ ಕೈಗಳಿಂದ ನೆಲದಲ್ಲಿದ್ದವರು ಅದನ್ನು ಪಡೆದರು. ಬಟಾ ತಂದಿದ್ದ ಸೆಣಬಿನ ಚೀಲವನ್ನು ಮುಂಡ ಸೇರಿತು. ಇನ್ನೊಬ್ಬ ಆಂಬಿಗನಾಗಲೇ ಕತ್ತೆಯನ್ನು ಅಲ್ಲಿಗೆ ತಂದಿದ್ದ. ಅದರ ಮೇಲೆ ಎರಡೂ ಚೀಲಗಳನ್ನಿರಿಸಿ ಹಗ್ಗಗಳಿಂದ ಬಿಗಿದರು. ಬಟಾ ನಿರ್ದೆಶವಿತ್ತ : “ ಹೊರಡಿ! ನಿಶ್ಯಬ್ದ!” ತಂಡದವನೊಬ್ಬ ಎರಡು ಈಟಿಗಳನ್ನೂ ಎತ್ತಿಕೊಂಡ. ತಂಡದವರು ನದೀ ತಟದತ್ತ ಸಾಗತೊಡಗಿದ ಮೇಲೆ, ಕತ್ತೆಯ ಕತ್ತಿನ ಹಗ್ಗವನ್ನು ಹಿಡಿದು ಬಟಾ ತುಸು ಎಳೆದ, ಹೇರಿನ ಸ್ಪರ್ಶವಾದೊಡನೆಯೇ ಹೊರಡಲು ಅದು ಸಿದ್ಧವಾಗಿತ್ತು. ಈಗ ಚಲಿಸತೊಡಗಿತು. ಮಗುವನ್ನೆತ್ತಿಕೊಂಡಿದ್ದ ಅಹೂರಾಳ ಗಂಡ, ಅತ್ತೆಯ ಕೈಹಿಡಿದು, ನೀರಿನ ಆಳದಲ್ಲಿ ಉಸಿರಾಟವಿಲ್ಲದೆ ಈಸುತ್ತಿದ್ದವನಂತೆ ನಡೆಯುತ್ತಿದ್ದ ರಾಮೆ