ಪುಟ:Mrutyunjaya.pdf/೫೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೮೨

                           ಮೃತ್ಯುಂಜಯ

ರಿಪ್ಟಾ, ಅವರನ್ನು ಹಿಂಬಾಲಿಸಿ ಕತ್ತೆ, ಅದರ ಮಗ್ಗುಲಲ್ಲಿ బಟಾ. ಹಿಂಬದಿ ಯಲ್ಲಿ ಔಟ, ಬೆಕ್........

   ನಡಿಗೆ ನಿದಾನವಯಿತು ಎಂದು ಬಟಾನಿಗೆ ಕಸಿವಿಸಿ. ಹೇರನ್ನು ತಾವೇ ತಲೆಯ ಮೇಲೆ ಹೊತ್ತು ಓಡಿದರೊ? ಆಗ ಸಜ್ಜನರ ದೃಷ್ಟೀಯಲ್ಲಿ ತಾವು ಕಳ್ಳರಾದೇವು.  ಅವರೇ ತಮ್ಮನ್ನು ಹಿಡಿಯಬಹುದು. ಈ నిದಾನ ನದಿಗೆಯೇ ಸರಿ. ಒಳನಾಡಿನ ಹಾದಿ ಪ್ರವಾಸಿಗರು ತಾವು.....
        ತನ್ನ ಮನಸ್ಸು ಛಿದ್ರಛಿದ್ರವಾದ, ಅದು ಗರಿಮೋಡವಾದ, ಆ ಮೋಡ ವನ್ನು ತಾನು ಅಮುಕಿ ಅಂಗೈಯಲ್ಲಿ ಹಿದಿದ ಅನುಭವ ಬಟಾನಿಗೆ.
            ಒಂದಾನೊಂದು ಕಾಲದಲ್ಲಿ ಈ ಬೀದಿಯಲ್ಲೋ ಮಗ್ಗುಲು ಬೀದಿ ಯಲ್ಲೋ ತಾನು ನಡೆದು ಹೋಗಿದ್ದೆ, ಕತ್ತೆಯ ಜತೆ. ಅದರ ಮೇಲಿತ್ತು, ನೀರಾನೆ ಪ್ರಾಂತದ ಕಾಣಿಕೆಯ ಗಡಿಯಾರವಿದ್ದ ಪೆಟಾರಿ ಮತ್ತು ನಾಯಕರ ಗಂಟುಗದಡಿ. ಈಗ ಕತ್ತೆಯ ಮೇಲಿರುವುದು ತಮ್ಮ ಬುಡಕಟ್ಟಿನ ಜನರ ಸರ್ವಸ್ವ, ಅದನ್ನು ಹೊತ್ತ ಪ್ರಾಣಿಯ ಮಗುಲಲ್ಲೆಯೊಂದು జంತು, ತಾನು.
   ಔಟ, ಬೆಕ್ ಏನನ್ನೂ ಯೋಚಿಸುತ್ತಿರಲಿಲ್ಲ, ಅವರೀಗ ಉಸಿರಾಡುತ್ತ ಚಲಿಸುವ ಮರದ ಮೂರ್ತಿಗಳು.
        ಮುಂದೆ ಹೊರಟಿದ್ದ ತಂಡದವರು ನಡಿಗೆಯನ್ನು ನಿಧಾನಗೊಳಿಸಿದ್ದರು. ಈಟ ಕಣ್ಣಗಳು ತಿರುತಿರುಗಿ ನೋಡುತ್ತಿದುವು. ಯಾರಾದರೂ ತಡೆದು ನಿಲ್ಲಿಸಿದರೆ-ತಮ್ಮ ನೆರವು ಅಗತ್ಯವಾದರೆ.....
      ಮಧ್ಯರಾತ್ರೆಯ ಅನಂತರದ ಗಾಢನಿದ್ದೆ ನಾಗರಿಕಗೆ, ಎಲ್ಲೋ ಕೆಲವೆಡೆ ಕುಳಿತಿದ್ದ ಕಾವಲುಭಟರಿಗೆ ಮಂಸರು.
       ಆದರೂ, ದೋಣಿ ಕಟ್ಟೆಯನ್ನು ಬಳಸಿ ಸಾಗುತ್ತಿದ್ದಂತೆ ಒಬ್ಬ ಕಾವಲು ಗಾರ ದೂರದಿಂದ ಕೇಳಿದ :

“ ಯಾಕ್ರಪ್ಪೋ, ಶಬ್ದ ಮಾಡ್ಡೆ ಹೋಗ್ರಿದೀರಾ?” ತಂಡವನ್ನು ಸಮಾಸಿಸಿದ ಬಟಾನೆಂದ : “ ಅಲ್ಲಿ ಸಿಕ್ಸ ಕಾವಲ್ನೋರು ಒಬ್ರೂ, ಗಲಾಟೆಮಾಡ್ಲೆ ಹೋಗಿ - ಅಂದ್ರು. ನೀವು ಮಾಡು ಅಂದರೆ ಮಾಡ್ತೇವೆ.”