ಪುಟ:Mrutyunjaya.pdf/೫೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



                  ಮೃತ್ಯುಂಜಯ                              ೫೮೩


[ಬಟಾನಿಗೆ ಸಮಾಧಾನ, ತಾನೇ ಅಲ್ಲವೆ ಈ ಮಾತನ್ನು ಆಡಿದ್ದು? ತಾನೇ ಅಲ್ಲವೆ.?] ಕಾವಲುಗಾರ ಗದರಿದ : "ನಡಿರಿ ಹೇಗೇನೇ" ಹಾಗೆಯೇ ನ್ದೆದು ಅವರು ದೋಣಿ ತಲಪಿದರು. ತಣ್ಣಗಾಗಿದ್ದ ಮರಳು. ಸ್ತಬ್ದವಾಗಿದ್ದ ನದಿ, ಜೀವ ತಳೆದ ಅಂಬಿಗರು ಅಂಜೂರ ವೃಕ್ಷದಡಿಯಿಂದ ಮೆನ್ನ ಎದು ಬಂದ. ಕತ್ತೆ ಬಿಡುಗಡೆ ಪಡೆದು ನಿಜವಾದ ಒಡೆಯನನ್ನು ಹುಡುಕುತ್ತ ಹೋಯಿತು. ನೀರಾನೆ ಪ್ರಾಂತದ ಸರ್ವಸ್ವ ದೋಣಿಯ ಒಡಲಿನಲ್ಲಿ ರಕ್ಷಣೆ ಪಡೆಯಿತು. "ಬೇಗ ! ಬೇಗ! " ఎంದ బಟಾ. ಅವರೆಲ್ಲ ನೀರಿಗೆ ತಳ್ಳಿದ ದೋಣಿ ನೋಡನೋಡುತ್ತಿದ್ದಂತೆಯೇ ತುಂಬಿದ ಪಾತ್ರೆಯಾಯಿತು. ಹೊರಮೈಯ ಅರ್ಧಕ್ಕೂ ಹೆಚ್ಚು ಭಾಗವನ್ನು ನೀರು ಮುಚ್ಚಿತು. ಅಂಬಿಗರು ಹುಟ್ಟು ಹಾಕಿದಂತೆ ದೋಣಿ ದಕ್ಷಿಣಾಭಿ ಮುಖವಾಗಿ ಚಲಿಸತೊಡಗಿತು. ತೆರೆದ ಹಾಯಿಯಲ್ಲಿ ಗಾಳಿ ತುಂಬಿಕೊಂಡು ದೋಣಿಯ ಚಲನೆಯ ಗತಿ ಹೆಚ್ಚಿತು. ಈಗ ಬಟಾ ದೋಣಿಕಾರ. ಕಾಲದ, ದೂರದ, ವೇಗದ ಪ್ರಜ್ಞೆಯುಳ್ಳ ವನು. ಮನಸ್ಸಿನಲ್ಲೇ ಅವನು ಪ್ರಾರ್ಥಿಸಿದ : “ ಓ ಅಮನ್ ! ಅಪೂರ್ವ ಯಾನ ಕೈಕೊಂಡಿದ್ದೇನೆ. ಲೋಕದಲ್ಲಿ ಅತ್ಯಂತ ಅಮೂಲ್ಯವಾದ ಸರಕನ್ನು ಸಾಗಿಸ್ತಿದ್ದೆನೆ. ನನ್ನ ಬಾಹುಗಳಿಗೆ ಅಧಿಕ ಬಲ ಕೊಡು. ದೋಣಿಗೆ ಬಾಣದ ವೇಗವನ್ನು ನೀಡು, ಓ ಅಮನ್ ! ನನ ಯಾನ ಸುರಕ್ಷಿತವಾಗಲಿ! ಯಾನ ಸುರಕ್ಷಿತವಾಗಲಿ !”

                    ೧೪

ಹಿಂದೆ ಮೆನೆಪಟಾನ ಜತೆ ರಾಜಧಾನಿಗೆ ಹೋಗುವ ಅವಕಾಶ ದೊರೆ