ಪುಟ:Mrutyunjaya.pdf/೫೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

584 ಮೃತ್ಯುಂಜಯ

ಯದೆ ಇದ್ದಾಗ, “ಅಲ್ಲಿಂದ ಕರೆಕೊಂಡು ಬರೋದಂತೂ ನಾವೇ” ಎಂದಿದ್ದರು. ಅಬ್ಟು ಯಾತ್ರಿಕರು.

      ಈಗ ಅಲ್ಲಿಂದ ಕರೆದುಕೊಂಡು ಬರುತ್ತಲಿದ್ದವರು ಅವರೇ. ಆದರೆ, ಆದರೆ.....
           ತನ್ನೆದುರಿನ ಇರುಳನ್ನೂ ನೀರನ್ನೂ ನೋಡುತ್ತ ಹಾಯಿಕಂಬಕ್ಕೊರಗಿ ಕುಳಿತು ಅದುಮಿ ಹಿಡಿದಿದ್ದ ಸಂಕಟದ ಕಟ್ಟುಗಳನ್ನೆಲ್ಲ ಬಟಾ ಕಡಿದ. ಕಂಬನಿ ಧಾರೆಗಟ್ಟಿತು. ಅದೆಷ್ಟು ಹೊತ್ತು ಹಾಗೆ ಸದ್ದಿಲ್ಲದೆ ಅತ್ತನೋ? ಕಣ್ಣೀರಿನಿಂದ ಮಬ್ಬಾದ ದೃಷ್ಟಿಗೆ ಆಸ್ಪೆಷ್ಟ ಆಕೃತಿಗಳು ಕಾಣಿಸುತ್ತಿದುವು. ಸದುಗಳು ಅಯಾಚಿತವಾಗಿ ಕೇಳಿಸುತ್ತಿದ್ದುವು. ದಕ್ಷಿಣಾಭಿಮುಖವಾಗಿ ಸಾಗುತ್ತಿದ್ದ ಬೇರೆ ದೋಣಿಗಳು ನದಿಯಲ್ಲಿ. ಅವನ್ನು ಹಿಂದಿಕ್ಕಿ ತನ್ನ ದೋಣಿ ಮುಂದು ವರಿಯುತ್ತಿತ್ತು ಎದುರು ದಿಕ್ಕಿನಿಂದ ಬರುತ್ತಿದ್ದ ದೋಣಿಗಳೂ ಆಗೊಮ್ಮೆ ಈಗೊಮ್ಮೆ ಸಿಗುತ್ತಿದ್ದವು. ಅಂಥ ಸಂದರ್ಭಗಳಲ್ಲಿ ತನ್ನ ಅಂಬಿಗರು “ಹೋ ಹೋ ಹೋ” ಎನ್ನುತ್ತಿದ್ದರು. ಢಿಕ್ಕಿಯಾಗದಂತೆ ವಹಿಸುವ ಎಚ್ಚರ. ಬಟಾನ ನಿರ್ದೆಶಗಳಿಲ್ಲದೆ ಹಾಸೋಕ್ತಿ ಚಾಟಿಯೋಕ್ತಿಗಳಿಲ್ಲದೆ ಆತನ ದೋಣಿಯಲ್ಲಿ ಯಾನ ಸಾಧ್ಯವೆಂದು ಯಾರು ನಂಬಿದ್ದರು. ಈ ಸಲ ಅವನ ಸೂಚನೆಗಳ ಸಂಜ್ಞೆ ಗಳ ಯಾವ ಅಗತ್ಯವೂ ಇರಲಿಲ್ಲ, ಅಂಬಿಗರ, ಯಾತ್ರಿಕರ ಜಾಗೃತ ಪ್ರಜ್ಞೆಯೇ ಆ ದೋಣಿಗೆ ದಿಕ್ಸೋಚಿಯಾಗಿತ್ತು, ನೂಕು ಒಲವಾಗಿತ್ತು. ಕಣ್ಣಿನ ಕೊಳಗಳು ಬರಿದಾದಂತೆ ಅನಿಸಿದಾಗ, ದೋಣಿಯಲ್ಲಿದ್ದ ಎಲ್ಲರ ಮುಖ ಗಳನ್ನೂ ದಿಟ್ಟಿಸಲು, ಕತ್ತಲಲ್ಲವೂ ಒಬ್ಬೊಬ್ಬರಾಗಿ ಅವರನ್ನು ಗುರು ತಿಸಲು ಬಟಾ ಯತ್ನಿಸಿದ. ತನ್ನ ಅವಸ್ಸೆಯೇ ಉಳಿದೆಲ್ಲರಿಗೂ? ತಮಗೆ ಬೀಕಾದವರು ಮಡಿದಾಗಿ ಅಳುವುದೂ ದುಸ್ಸಾಧ್ಯವಾದ ಪರಿಸ್ಟಿತಿ ಇದೆಂಥದು? ಹಿಂದೆ ತಾನು ಹೇಳಿದ್ದೆ: 'ನನ್ನ ಸಂಕಟ ಹೇಳಲಾ ಅಣ್ಣ ? ಎಷ್ಟು ದಿವಸ ಅಂತ ನನ್ನಲ್ಲೇ ಮುಚ್ಚಿಟ್ಕೊಳ್ಳಿ ? ನಾನು ಹೋಗ್ರಿರೋದು ನಮ್ಮವರನ್ನು ಕರಕೊಂಡು ಬರೋದಕ್ಕೆ. ನಾವಿಷ್ಟೇ ಜನ ನಿನ್ನ ಜತೆ ಇದ್ದು ಏನಾದರೂ ಅಚಾತುರ್ಯ ಆದರೆ, ನಾನು ನಮ್ಮ ಜನರಿಗೆ ಹಾಗೆ ಮುಖ ತೋರಿಸಲಿ? ಏನೂಂತ ಹೇಳಲಿ?' ತಮ್ಮವರನ್ನೇನೋ ಕರಕೊಂಡು ಬ್ಂದುದಾಯಿತು. ಆದರೆ, ಆದ ಪ್ರಯೋಜನ? ಪ್ರಮಾದ ನಡೆದೇಬಿಟ್ಟಿತಲ್ಲ? ತನಗೆ ಸರಿ