ಪುಟ:Mrutyunjaya.pdf/೫೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯಂಜಯ ೫೮೫

ಎಂದು ಕಂದ ದಾರಿ ಬಿಟ್ಟು, ಅಣ್ಣ ಒಂದಿಷ್ಟೂ ಚಲಿಸಲಿಲ್ಲ, ಈಗ ಊರಿನಲ್ಲಿ ತಾನು ಮುಖ ತೋರಿಸುವುದು ಹೇಗೆ? ಹೇಳುವುದು ಏನನ್ನು?....

   ಬಟಾನ ಅಲೆಯುವ ದೃಷ್ಟಿ ದಿವ್ಯಾತ್ಮ, ಮೆನ್ನನನ್ನು ಹುಡುಕಿತು. ನೀಳ ವಾಗಿ ಮಲಗಿಸಿದ್ದ ಚೀಲಗಳು. ಅವುಗಳ ಪಕ್ಕದಲ್ಲಿ ಅಂಗಾತ ಬಿದ್ದಿರುವ ದೇಹ? ತನಗೆ ಕನಸು. ಚೀಲಗಳಿಂದ ಹೊರಬಿದ್ದು ಅಣ್ಣ ಜೀವ ತಳೆದಿರ ಬಹುದೆ? ಎಂಥ ಹುಚ್ಚು ! ಮಲಗಿ ನಿದ್ದೆ ಹೋಗಿರುವವನು ಮೆನ್ನ, ಶವದ ಪಕ್ಕದಲ್ಲಿ. ಒಂದು ವಿಮುಕ್ತ ಜೀವ ಹೀಗೂ ಇರುವುದು ಸಾಧ್ಯವೆ?
  ಇವರೆಲ್ಲ ತುಸು ತೊನೆದಾಡುವ ಪ್ರತಿಮೆಗಳಾಗಿದ್ದಾರೆ, ಪರಸ್ಪರ ಅಂಟಿ ಕೊಂಡು ಏಕಜೀವವಾಗಿದ್ದಾರೆ. ಮನ ದಣಿಯುವಷ್ಟು ಕಣ್ಣೀರು ಸಾನ. ಬಳಿಕ ಮೌನ ತಪ್ತ ಮೆದುಳು. ಜಡ ಹೃದಯ ಸಣ್ಣನೆ ಬೀಸುತ್ತಿರುವ ತಣ್ಣನೆಯ ಗಾಳಿಗೆ ಇವರೆಲ್ಲ నిದ್ದೆ ಹೋಗಬಹುದು, నిದ್ದೆ ಹೋಗಬೇಕು.

ರಾಮೆರಿಪ್ ಟಾಗೆ ನಿದ್ದೆ ಬಂದಿರಬಹುದೆ? ಬಟಾ ಬಲಕ್ಕೆ ನೋಡಿದ. ಎಡಕ್ಕೆ ನೋಡಿದ. ಅಲ್ಲಿ ಮೂಲೆಯಲ್ಲಿದ್ದಳು ಅಹೂರಾ, ಅವಳ ಮಗುಲಲ್ಲಿ ಮಗು ಮಲಗಿದೆ. ಅವಳ ತೋಳಿಗೊರಗಿ ರಾಮೆರಿಪ್ಟಾ ಕುಳಿತಿದ್ದ, ಈತ ಈಗ ಹುಡುಗನಲ್ಲ. ಒಂದೇ ದಿನದ ಅವಧಿಯಲ್ಲಿ ಪ್ರಬುದ್ಡನಾಗಿದ್ದಾನೆ. ತೂಕಡಿಸುತ್ತಿಲ್ಲ, ಕತ್ತಲಲ್ಲಿ ಹೊಳೆಯುವ ಕಣ್ಣುಗಳು. ಬಟಾನಿಗೆನಿಸಿತು: 'ರಾಮೇರಿ ನನ್ನನ್ನೇ ನೋಡುತ್ತಿ ದಾನೆ.' ರಾಮೇರಿಯನ್ನು ದಿಟ್ಟಿಸುತ್ತ, ಅವನ ತಾಯಿ ನೆಫಿಸ್ಳನ್ನು ನೆನೆಯುತ್ತ, ಬಟಾನ ಕಣ್ಣುಗಳಲ್ಲಿ ಮತ್ತೆ ನೀರು జిమ్మిలేు.

        ತಾನು ಮೂರ್ಖ, ಅಣ್ಣನನ್ನು ಬಿಟ್ಟು ಊರಿಗೆ ಮರಳಿದ್ದೇ ತಪ್ಪಾ ಯಿತು. ಅವನ ಪಕ್ಕದಲ್ಲೇ ಇದ್ದಿದ್ದರೆ ಬಹುಶಃ ಹೀಗಾಗುತ್ತಿರಲಿಲ್ಲ; ಅಣ್ಣ ನನ್ನು ಗಂಡಾಂತರದಿಂದ ಪಾರು ಮಾಡುವುದು ಸಾಧ್ಯವಿರುತ್ತಿತ್ತು.....ಅಥವಾ, ಅಥವಾ..ತಾನು ಇದ್ದಿದ್ದರೂ ಹೀಗೆಯೇ ಆಗುತ್ತಿತ್ತೇನೋ? ಅವನು ಹಟ ಮಾರಿ. ಕಾರಾಗೃಹದಿಂದ ತಪ್ಪಿಸಿಕೊಳ್ಳುವುದು ಶಕ್ಕವಿದಾಗಲೂ ನಿರಾ ಕರಿಸಿದನಲ್ಲ....
   'ಅಣ್ಣ, ಅಣ್ಣ. ನೀನೇನು ಮಾಡಿಬಿಟ್ಟೆ ?' 
   ಕಳೆದ ಅಬ್ಟು ಯಾತ್ರೆಯಿಂದ ಮೊದಲ್ಲೊಂಡು ಬೇರೆಯೇ ದಾರಿ ಹಿಡಿ