ಪುಟ:Mrutyunjaya.pdf/೫೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



೫೮೬

ಮೃತ್ಯುಂಜಯ

ಯಿತು. ತಮ್ಮೆಲರ ಬದುಕು. ಅದು ಬ೦ಗಾರದ ಬಣ್ಣದಿ೦ದ ಹೊಳೆಯಿತು.
ಈಗ ಇದ್ದಕ್ಕಿದ್ದ೦ತೆ__
'ಅಣ್ಣ,ಅಣ್ಣ,ರಾಜಧಾನಿಗೆ ನಾವು ಬಂದದ್ದು ತಪ್ಪಾಯಿತು.'
ಹೀಗೆ ಆಗುತ್ತದೆ ಎಂದು ಜನ್ಮನಕ್ಷತ್ರ ಫಲದಲ್ಲಿ ಹೇಳಿತ್ತೆ ? ನೀನು ಜನನಾಯಕನಾಗಲೆ೦ದೇ ಹುಟ್ಟದೇ; జನನಾಯಕನ೦ತೆಯೇ ಬಾಳಿದೆ....ಜನನಾಯಕನ೦ತೆಯೇ.....ಆವಸಾನವೂ? ಯಾವಾಗಲೂ ಹೀಗೆಯೇ ಏನು ?'
....బల ದ೦ಡೆಯಲ್ಲಿ ಆರಿಸದೆ ಉಳಿದಿರುವ ಹತ್ತಿಪ್ಪತ್ತು ಮನೆ ದೀಪಗಳು.
ಕೈ ಹಿಡಿದು ತೊಟ್ಟಿಲಾಡಿಸಿದ ಗೇಬು. ಅಯ್ಯೋ ! ಎಂಥ ಮೋಸ ! ....ಪಟ್ಟಣವನ್ನು ದಾಟಿ ಪಯಣ. ಅನುಕೂಲ ಪವನ ಜೋರಾಗಿ ಬೀಸುತ್ತಿದೆ. ಗಾಳಿ ಕಡಿಮೆಯಾದಾಗ ತಿರುವುಗಳಲ್ಲಿ ಹುಟ್ಟುಹಾಕುತ್ತಾರೆ. ಈ ವೇಗ ಉಳಿಸಿಕೊ೦ಡದೆ ಒ೦ದು ದಿನ ಮು೦ಚಿತವಾಗಿಯೇ ಊರು ಸೇರಬಹುದು.
ಇದು ಮುಂಜಾವದ ತಣುಪು ಗಾಳಿ, ಅಣ್ಣನಿಗೆ ಚಳಿಯಾಗುತ್ತಿದೆಯೇನೋ !
'ಅಣ್ಣ ! ಅಣ್ಣ ! ಒಮ್ಮೆ ಬಟಾ ಅಂತ ಕರೀಬಾರದೆ ಅಣ್ಣ ? ಅಣ್ಣ ! ನಾನು ಮೂಖ೯ ಅಣ್ಣ!'
ಹಿಂದಿಕ್ಕುವ ದೋಣಿಗಳ ಸಂಖ್ಯೆ ಕಡಿಮೆಯಾಗಿದೆ. ಇವರೆಲ್ಲ ತಡವಾಗಿ ಮೆಫಿಸಿನಿ೦ದ ಹೊರಟವರು. ಅಣ್ಣ ದೇಹಾಂತ ಶಿಕ್ಷೆಗೆ ಒಳಗಾದೊಡನೆ. ಅಥವಾ ನಾಯಮೂರ್ತಿ ತೀಪು೯ ಕೊಟ್ಟೂಡನೆ, ಇಲ್ಲವೆ ಇನ್ನೂ ಮು೦ಚೆ, ಸೆಡ್ ಉತ್ಸವ ಮುಗಿಸಿ ರಾಜಧಾನಿ ಬಿಟ್ಟವದೆಲ್ಲ ತಮ್ಮ ಊರುಗಳನ್ನು ಈ ವೇಳೆಗೆ ತಲಸಿರಬಹುದು, ಇಲ್ಲವೆ ಸಮೀಸಿಸುತ್ತಿರಬಹುದು.
"ಹೋ ! ಹೋ ! ಹೋ !"
ಬರುತ್ತಿರುವ ಎದುರು ನಾವೆಯಿ೦ದಲೂ ಧ್ವನಿ.
ತಮ್ಮ ದೋಣಿಯೊಳಗಿಒದ ಚೀತ್ಕಾರ. ಬಟಾ ಗಾಬರಿಗೋ೦ಡು ಅತ್ತಿತ್ತ ನೋಡಿದ. ಮೆನ್ನ ಗಡಬಡಿಸಿ ಏಳುತ್ತಿದ್ದುದನ್ನು ಕ೦ಡ. 'ಚಿಟಾರನೆ