ಪುಟ:Mrutyunjaya.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

'ಮೃತ್ಯುಂಜಯ' ಚಿತ್ರಶಾಲೆ

ಈ ಕಾದಂಬರಿಯಲ್ಲಿ ಚಿತ್ರಿತವಾಗಿರುವ__ಪ್ರಸ್ತಾಪಿಸಲ್ಪಟ್ಟಿರುವ__ವ್ಯಕ್ತಿ
ಗಳು, ದೇವರು, ದೇವತೆಯರು, ನದಿ, ಸ್ಥಳ, ವಸ್ತು, ಪ್ರದೇಶ, ದೇಶಗಳು:
ಅನ್ಪು : ನೀರಾನೆಪ್ರಾಂತದ ಮುಖ್ಯ ಪಟ್ಟಣದ ಬಡ ನೇಕಾರ.
ಅನೂಬಿಸ್ : ಸತ್ತವರ ವಿಚಾರಣೆ ನಡೆಸಲು ಪರಲೋಕದ ನ್ಯಾಯಮೂರ್ತಿ
ಒಸೈರಿಸ್‍ಗೆ ನೆರವಾಗುವ ತೋಳ ತಲೆಯ ದೇವತೆ; ಶವಲೇಪನದ
ದೇವತೆ ಕೂಡಾ. ಅಪೆಟ್ : ನೀರಾನೆಪ್ರಾಂತದ ಮುಖ್ಯ ಪಟ್ಟಣದ ದೇವಮಂದಿರದ ಅರ್ಚಕ.
ಅಪೋಫಿಸ್ : ರಾಜಧಾನಿಯಲ್ಲಿ ದೇವತಾಮೂರ್ತಿಗಳನ್ನು ಮಾರುವ ಅಂಗಡಿ
ಕಾರ. ಅಬ್ಟು : ಒಸೈರಿಸ್ ದೇವತೆಯ ಗೋರಿ ಇರುವ ಯಾತ್ರಾಸ್ಥಳ; ಐಗುಪ್ತದ
ಪರಮ ಪುಣ್ಯಕ್ಷೇತ್ರ; ಮುಂದೆ ಗ್ರೀಕರಿಟ್ಟ ಹೆಸರು ಅಬಿಡೋಸ್.
ಅಮನ್ : ರಾ, ಪ್‍ಟಾ, ಅಮನ್_ಐಗುಪ್ತದ ಮೂವರು ಪರಮ ಶ್ರೇಷ್ಠ
ದೇವರು. ಆರಂಭದಲ್ಲಿ ಅಮನ್ ದಕ್ಷಿಣ ಐಗುಪ್ತದಲ್ಲಷ್ಟೇ ಹಿರಿಯ
ದೇವರೆಂದು ಪ್ರಸಿದ್ಧ.
ಅಮೆನೆಮೊಪೆಟ್ : ಐಗುಪ್ತದ ಸೇನಾನಿ.
ಅಮೋಸೆಸ್ : ಲಿಪಿಕಾರ.
ಅಹಮೋಸ್ : ತೀರಾ ಪ್ರಾಚೀನ ಪೆರೋ.
ಅಹೂರಾ : ನೀರಾನೆಪ್ರಾಂತದ ಗ್ರಾಮೀಣ ಮಹಿಳೆ.
ಆಂಖ್ : ರಾಜಲಾಂಛನ: ಉರುಳಿನಾಕಾರದ ತಲೆಯ, ಹಸುರು ಹೊಳಪಿನ
ಕಿರಿಯ ಶಿಲುಬೆಯಾಕೃತಿ.
ಆನ್ : ರಾ ದೇವರ ಮಹಾಮಂದಿರವಿರುವ ನಗರಿ; ಮುಂದೆ ಗ್ರೀಕರು ಅದನ್ನು
ಹಿಲಿಯೋಪೋಲಿಸ್_ಸೂರ್ಯನಗರಿ_ಎಂದು ಕರೆದರು.
ಆಪಿಸ್ : ಮರಣಾನಂತರ ದೇವತೆಯಾದ ಪವಿತ್ರ ಹೋರಿ.