ಪುಟ:Mrutyunjaya.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ೪೯ "ಮನವಿ ಸಲ್ಲಿಸೋದಕ್ಕೆ ರೈತರೂ ಕುಶಲಕರ್ಮಿಗಳೂ ಬರ್ತಾರಂತೆ. ನನ್ನ ಅನುಮತಿ ಇಲ್ದೆ ಏನೂ ಮಾಡ್ಬೇಡ " ಆದೇಶ ಅರ್ಥವಾಯಿತು ಎನ್ನುವಂತೆ ಪ್ರತಿಮೆಯ ಶಿರ ತುಸು ಬಾಗಿತು. ದೂತರು ಅತ್ತ ಇತ್ತ ಓಡಿದರು-ಅವರನ್ನು ಕರೆಯಲು, ಇವರನ್ನು ಕರೆಯಲು. ಪ್ರಾಂತದ ಕಂದಾಯ ತೆರಿಗೆಗಳ ಲೆಕ್ಕವಿಡುವ ಲಿಪಿಕಾರ ಇಪ್ಯೂವರ್ ಏದುಸಿರು ಬಿಡುತ್ತ ಬಂದು, ಟೆಹುಟಗೂ ಗೇಬುಗೂ ನಮಿಸಿದ. ಮಧ್ಯ ವಯಸ್ಸು ದಾಟಿದ್ದ ಬಡಕಲು ಜೀವ. ಎದೆಗೂಡಿನ ಮೂಳೆಗಳು ಎಣಿಕೆಗೆ ಸಿಗುತ್ತಿದ್ದುವು. ಇಪ್ಯುವರ್ ಪೆಟಾರಿಯ ಬಳಿ ನೆಲದ ಮೇಲೆ ಚಕ್ಕಂಬಕ್ಕಳ ಹಾಕಿ ಕುಳಿತ. " ಎಷ್ಟಿವೆ ? ಎಂದ ಟೆಹುಟ, ಗಟ್ಟಿಯಾಗಿ. ಅನಿರೀಕ್ಷಿತ ಪ್ರಶ್ನೆ. ಇಪ್ಯುವರ್ ಗೆ ಅರ್ಥವಾಗಲಿಲ್ಲ, ಗೇಬುಗೂ ಅರ್ಥವಾಗಲಿಲ್ಲ. ಇಪ್ಯುವರ್ ಸಿಳಿಸಿ ಕಣ್ಣು ಬಿಟ್ಟ. ಗೇಬು ಟೆಹುಟಯ ಕಡೆ ನೋಡಿದ. “ ಎಣಿಸಿಲ್ಲ? ಎದೆಗೂಡಿನ ಮೂಳೆಗಳು!” ಎಂದು ಹೇಳಿ ಟೆಹುಟ ನಕ್ಕ. ಗೇಬುಗೂ ನಗು ಬಂತು. ಇದು ತನ್ನನ್ನು ಕುರಿತು ಪರಿಹಾಸ್ಯ ಎಂಬುದು ಇಪ್ಯುವರ್ ಗೆ ಮನವರಿಕೆ ಯಾದರೂ ಆತ ಮುಖ ಸಿಂಡರಿಸುವ ಎದೆಗಾರಿಕೆ ತೋರಲಿಲ್ಲ. ಮಾನ್ಯ ಅತಿಥಿ ನಕ್ಕುದರಿಂದ ತಾನು ಕೃತಾರ್ಥನಾದೆ ಎಂಬಂತೆ, ವಿನೀತನಾಗಿ ಟೆಹುಟಗೆ ಮತ್ತೆ ವಂದಿಸಿದ. ಒಬ್ಬ ಸೇವಕ ಪೆಟಾರಿಯ ಬೀಗ ತೆಗೆದ. ಅದರೊಳಗೆ ಲಿಸಿ ಸುರುಳಿಗಳಿದ್ದ ಜಾಡಿಗಳಿದ್ದುವು. ಇನ್ನೊಬ್ಬ ಸೇವಕ ಹೊಸ ಪೆಪೈರಸ್ ಹಾಳೆಗಳನ್ನು, ಒತ್ತಿ ಬರೆಯಲಿ ಹಲಗೆಯನ್ನು, ಲೆಕ್ಕಣಿಕೆಯನ್ನು, ಮಸಿಪಾತ್ರೆಯನ್ನು ಇಪ್ಯೂವರ್ ನ ಬಳಿ ತಂದಿರಿಸಿದ. ಭೂಮಾಲಿಇಕರು ಬೇಗ ಬೇಗನೆ ಬಂದು_ವೇದಿಕೆಗೆ ಬಾಗಿ ನಮಿಸಿ ಪೀಠಗಳ ಮೇಲೆ ಕುಳಿತರು. ಸೆತೆಕ್ ನಖ್ತ್, ಸೆನ್ ಉಸರ್ಟ, ಹೆಜಿರೆ ಮತ್ತು ಸಿನ್ಯುಹೆ. ಗೇಬುವಿನ ಕಾವಲು ಭಟರೂ ಚಾಕರರೂ ಸಭೆಗೆ ಆಗಮಿಸಿದ ೪